Thursday, 12th December 2024

ಮಠದ ಉತ್ತರಾಧಿಕಾರಿ ತೇಜಸ್ ತಂದೆ ನಿಧನ: ಕುಪ್ಪೂರು ಮಠಕ್ಕೆ ಮತ್ತೆ ಅಘಾತ

ಚಿಕ್ಕನಾಯಕನಹಳ್ಳಿ: ಕುಪ್ಪೂರು ಮರುಳ ಸಿದ್ದೇಶ್ವರ ಮಠದ ಶ್ರೀ ಯತೀಶ್ವರ ಶಿವಾ ಚಾರ್ಯ ಸ್ವಾಮಿಗಳನ್ನು ಕಳೆದುಕೊಂಡ ನೋವು ಮರೆಯುವ ಮುನ್ನವೇ ಶ್ರೀ ಮಠಕ್ಕೆ ಮತ್ತೊಂದು ಅಘಾತ ಎದುರಾಗಿದೆ.

ಶ್ರೀ ಮಠದ ಉತ್ತರಾಧಿಕಾರಿ ತೇಜಸ್ ಅವರ ತಂದೆ ಮಹೇಶ್ ನಿಧನರಾಗಿದ್ದಾರೆ. ೫೦ ವರ್ಷದ ಮಹೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಠದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಚೆನ್ನಾಗಿಯೇ ಓಡಾಡಿಕೊಂಡಿದ್ದ ಮಹೇಶ್ ಧಿಢೀರನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಶ್ರೀ ಮಠಕ್ಕೆ ಹಾಗು ಭಕ್ತರಿಗೆ ದೊಡ್ಡ ಅಘಾತ ಉಂಟು ಮಾಡಿದೆ.

ಮೃತ ಮಹೇಶ್ ಅವರ ಪಾರ್ಥಿವ ಶರೀರವನ್ನು ಮಠದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಭಾನುವಾರ ವೀರಶೈವ ಪದ್ದತಿಯಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕ ಕಿರಣ್‌ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರಳೀಕೆರೆ ಉಮೇಶ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.