Monday, 25th November 2024

ಭಾರತ ಯಶಸ್ವಿ ಪ್ರಜಾಪ್ರಭುತ್ವವನ್ನು ಹೊಂದಿದೆ

ಕೆನಡಾ ಸಂಸದ ಚಂದ್ರಕಾಂತ್ ಆರ‍್ಯ ಅಭಿಪ್ರಾಯ

ತುಮಕೂರು: ಕೆನಡಾ ದೇಶದಲ್ಲಿ ಸಂಸತ್ ಸದಸ್ಯರಾಗಿರುವ ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರಕಾಂತ್ ಆರ‍್ಯ ಅವರು ನಗರದ ರವೀಂದ್ರ ಕಲಾನಿಕೇತನದಲ್ಲಿ ಸಂವಾದ ನಡೆಸಿದರು.

ಹಾಲಪ್ಪ ಪ್ರತಿಷ್ಠಾನ, ಮಾತೃಛಾಯ ಸಂಸ್ಥೆ, ಲಯನ್ಸ್, ರೋಟರಿ, ಛೇರ‍್ಸ್ ಆಫ್ ಕಾರ‍್ಸ್, ಆರ‍್ಶ ಫೌಂಡೇಷನ್, ಶ್ರೀ ಸಿದ್ಧರ‍್ಥ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸೋಮವಾರ ರ‍್ಪಡಿಸಿದ್ದ ಸಂವಾದ ಕರ‍್ಯಕ್ರಮದಲ್ಲಿ ಮಾತನಾಡಿದ ಕೆನಡ ಸಂಸತ್ ಸದಸ್ಯರಾದ ಚಂದ್ರಕಾಂತ್ ರ‍್ಯ ಅವರು, ಇತರೆ ರಾಷ್ಟçಗಳಿಗೆ ಹೋಲಿಸಿದರೆ ಭಾರತ ಯಶಸ್ವಿ ಪ್ರಜಾಪ್ರಭುತ್ವವನ್ನು ಹೊಂದಿದೆ. ಎಷ್ಟೋ ರಾಷ್ಟ್ರಗಳು ಕಳೆದ ೭೫ ವರ್ಷದಲ್ಲಿ ಪ್ರಜಾಪ್ರಭುತ್ವನ್ನು ಹೊಂದಿಲ್ಲ, ಆದರೆ ಭಾರತ ಯಶಸ್ವಿ ಪ್ರಜಾಪ್ರಭುತ್ವನ್ನು ಹೊಂದಿರು ವುದು ನಮ್ಮೆಲ್ಲರ ಹೆಮ್ಮೆ ಎನಿಸುತ್ತದೆ ಎಂದರು.

ಸ್ವಾತಂತ್ರ‍್ಯ ನಂತರ ಭಾರತ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಬಿಎಚ್ಇಎಲ್, ಹೆಚ್ಎಎಲ್ ಹಿಂದೂಸ್ತಾನ್ ಮಿಷನ್ ಟೂಲ್ಸ್, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಯಿಂದ ಅನೇಕರಿಗೆ ಉದ್ಯೋಗಗಳು ಲಭಿಸಿದವು. ಹೀಗೆ ವಿವಿಧ ರೀತಿಯಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಾ ಮುಂದೆ ಸಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಒಂದು ಕಾಲದಲ್ಲಿ ನಮ್ಮ ನ್ನಾಳಿದ ಬ್ರಿಟೀಷರ ದೇಶದಲ್ಲಿ ನಮ್ಮ ಕನ್ನಡಿಗರು ಸಂಸತ್ ಸದಸ್ಯರಾಗಿ ಆಳ್ವಿಕೆ ನಡೆಸುತ್ತಿದ್ದಾರೆ ಎಂದರೆ ನಮಗೆ ಇದಕ್ಕಿಂತ ಹೆಮ್ಮೆಯ ವಿಷಯ ಬೇರೊಂದಿಲ್ಲ ಎಂದರು.

ಇಂದಿನ ಪ್ರಸ್ತುತ ಸಂದರ್ಬದಲ್ಲಿ ಭಾರತೀಯರು ವಿಶ್ವದ ಯಾವುದೇ ರಾಷ್ಟ್ರದಲ್ಲಿ ಯಾವುದೇ ಸ್ಥಾನಮಾನದಲ್ಲಿ ಗುರುತಿಸಿ ಕೊಂಡಿರಬಹುದು. ಅದು ಇಂಜಿನಿಯರ್, ಡಾಕ್ಟರ್, ಶಿಕ್ಷಕರು, ಉಪನ್ಯಾಸಕರು, ವಿಜ್ಞಾನಿಗಳಾಗಿರಬಹುದು, ಇವರೆಲ್ಲಾ ರಾಜಕೀಯ ಹೊರತಾಗಿ ಗುರುತಿಸಿಕೊಂಡಿದ್ದರೆ, ಅಮೆರಿಕಾ ಉಪ ರಾಷ್ಟçಪತಿಯಾಗಿ ಭಾರತೀಯರೇ ಆಗಿದ್ದಾರೆ, ಕೆನಡ ಸಂಸತ್ ಸದಸ್ಯರಾಗಿ ನಮ್ಮ ಕನ್ನಡಿಗರಾದ ನಮ್ಮ ಜಿಲ್ಲೆಯವರೇ ಆದ ಚಂದ್ರಕಾಂತ್ ರ‍್ಯ ಅವರಿದ್ದಾರೆ. ಹೀಗೆ ಭಾರತೀಯರೂ ಕೂಡ ಇತರೇ ರಾಷ್ಟ್ರಗಳಲ್ಲಿ ಆಳ್ವಿಕೆ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಮಾತನಾಡಿ, ದಕ್ಷಿಣ ಭಾರತದಿಂದ ಮೊಟ್ಟ ಮೊದಲ ಭಾರಿಗೆ ಕೆನಡದಲ್ಲಿ ಮೂರನೇ ಭಾರಿಗೆ ಸಂಸತ್ ಪ್ರವೇಶಿಸಿದ ನಮ್ಮ ಜಿಲ್ಲೆಯವರಾದ ಚಂದ್ರಕಾಂತ್ ರ‍್ಯ ಅವರ ಛಲ ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದರು.

ಚಂದ್ರಕಾಂತ್ ಆರ‍್ಯ ಅವರು ನಮ್ಮ ದೇಶಕ್ಕೆ ಅದರಲ್ಲೂ ನಮ್ಮ ರಾಜ್ಯದ ತವರು ಜಿಲ್ಲೆಯಾದ ತುಮಕೂರು ಜಿಲ್ಲೆಗೆ ಅಭಿವೃದ್ಧಿ ಬಗ್ಗೆ ಸೂಕ್ತ ಸಲಹೆ ಸಹಕಾರ ನೀಡಿದರೆ ನಮ್ಮ ಜಿಲ್ಲೆ ಇತರೆ ರಾಜ್ಯ ಹಾಗೂ ದೇಶಗಳಿಗೆ ಮಾದರಿಯಾಗಬಹುದು ಎಂದರು.

ಈ ಸಂರ‍್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ತುಮಕೂರು ಜಿಲ್ಲೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿಗೆ ಸಮೀಪ ಜಿಲ್ಲೆಯಾಗಿದ್ದು, ಅನೇಕ ಕೈಗಾರಿಕೆಗಳು ಬಂದಿವೆ. ಅಲ್ಲದೆ ೧೮ ಸಾವಿರ ಎಕರೆ ಭೂ ಪ್ರದೇಶದಲ್ಲಿ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ನಿಟ್ಟಿನಲ್ಲಿ ನಿಮ್ಮ ಸಲಹೆ ಮತ್ತು ಸಹಕಾರ ಕೊಟ್ಟರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.

ಸಂವಾದ ಕರ‍್ಯಕ್ರಮದಲ್ಲಿ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯ, ಆಡಿಟರ್ ಆಂಜಿನಪ್ಪ, ಸಾಗರನಹಳ್ಳಿ ಪ್ರಭು, ಪ್ರೊ.ಕೆ.ಚಂದ್ರಣ್ಣ, ಆರ್.ಕಾಮರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.