ದೇವದುರ್ಗ: ಜಾಲಹಳ್ಳಿ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಶರಣು ಹುಣಸಗಿ ಹಾಗೂ ಬಸವರಾಜ ಗಾಣದಾಳ ವಕೀಲರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರ ಇ ದಾಖಲಿಸಿರುವುದನ್ನು ವಿರೋಧಿಸಿ ತಾಲೂಕ ವೀರಶೈವ ಸಮಾಜದ ನೇತೃತ್ವ ದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಮಾಜ, ತಾಲ್ಲೂಕ ಲಿಂಗಾಯತ ಕುಂಬಾರ ಸಮಾಜ, ಲಿಂಗಾಯತ ಹೂಗಾರ ಸಮಾಜ, ತಾಲೂಕ ಲಿಂಗಾ ಯತ ಪಡಪದ ಸಮಾಜ, ಲಿಂಗಾಯತ ಕುರಹೀನಶೆಟ್ಟಿ ಸಮಾಜ ಲಿಂಗಾಯತ ಗೌಪ್ಯ ಸಮಾಜ, ಲಿಂಗಾಯತ ಸಿಂಪಿ ಸಮಾಜ ಸೇರಿದಂತೆ ವಿವಿಧ ಲಿಂಗಾಯತ ಸಮುದಾಯಗಳ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾ ಯಿತು.
ಜಾಲಹಳ್ಳಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸರಾದ ಶರಣು ಹುಣಸಗಿ ಹಾಗೂ ಬಸವರಾಜ ಸಾಧಾರ ವಕೀಲರ ವಿರುದ್ದ ತಾಲ್ಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇವರ ಅಧೀನದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದರು. ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಸುಳ್ಳು ದೂರಿನ ಆಧಾರದ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿದರು.
ಸೂಕ್ತ ತನಿಖೆ ನಡೆಸಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ ಮನವಿಯನ್ನು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿ.ಎಸ್.ಪಾಟೀಲ್, ಡಾ.ಕಿರಣ ಬೇಣೆದ್, ಶರಣಬಸವ ಜೋಳದಹೆಡಗಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ವೀರಣ್ಣ ಪಾಣಿ, ಬಸವರಾಜ ಹೆರುಂಡಿ, ದೇವೆಂದ್ರಪ್ಪಗೌಡ, ಚೆನ್ನವೀರಯ್ಯಸ್ವಾಮಿ ಅರಕೇರಾ, ನಾಗರಾಜ ಪಾಟೀಲ್,ಮಲ್ಲನಗೌಡ ಗೆಜ್ಜೆಬಾವಿ, ಪ್ರಕಾಶ ಪಾಟೀಲ್, ದೊಡ್ಡರಂಗನಗೌಡ ಅಳ್ಳುಂಡಿ ಸೇರಿದಂತೆ ಲಿಂಗಾಯತ ಸಮುದಾಯದ ಮುಖಂಡರು ಭಾಗವಹಿಸಿದ್ದರು.