Saturday, 14th December 2024

Book Release: ಹುಬ್ಬಳ್ಳಿಯಲ್ಲಿ ಸೆ.17 ರಂದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ

Book Release

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿಯ ಡಾ.ಡಿ.ಎಸ್‌. ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನದ ಸಹಯೋಗದಲ್ಲಿ ಸೆ. 17 ರಂದು ಮಂಗಳವಾರ ಸಂಜೆ 5.30 ಕ್ಕೆ ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 26 ನೇ ಪುಣ್ಯತಿಥಿ ಹಾಗೂ ಗೌರವಾರ್ಪಣೆ, ಪುಸ್ತಕಗಳ ಬಿಡುಗಡೆ (Book Release) ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Sunita Williams: ನಾನು ಇಲ್ಲಿರುವುದನ್ನು ಇಷ್ಟಪಡುತ್ತೇನೆ; ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್‌ ಪ್ರತಿಕ್ರಿಯೆ

ನಗರದ ಜೆ.ಸಿ. ನಗರದಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ಲೇಖಕ ಶಿವಾನಂದ ಕಳವೆ ಪಾಲ್ಗೊಳ್ಳುವರು.

ಈ ಸುದ್ದಿಯನ್ನೂ ಓದಿ | Golden Milk Benefits: ಗೋಲ್ಡನ್ ಮಿಲ್ಕ್‌ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?

ಸಮಾರಂಭದಲ್ಲಿ ಬೆಂಗಳೂರಿನ ಭಾರತ ದರ್ಶನ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಸಂಪಾದಕ ಯೋಗಾನರಸಿಂಹ ಅವರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮಧುಕರ ಯಕ್ಕುಂಡಿ, ಎಸ್‌.ಎಲ್‌.ಎಂ. ಪಾಟೀಲ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.