Thursday, 14th November 2024

Police Firing: ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು!

Police Firing

ಹುಬ್ಬಳ್ಳಿ: ಹುಬ್ಬಳ್ಳಿ ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ತಲ್ವಾರ್ ತೋರಿಸಿ ಚಿನ್ನಾಭರಣ, ಹಣ (Money) ಸೇರಿದಂತೆ ಮೊಬೈಲ್ ಫೋನ್‌ಗಳನ್ನು (Mobile Phones) ದೋಚುತ್ತಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹೊಡೆದು (Police Firing) ಬಂಧಿಸಿರುವ ಘಟನೆ ಜರುಗಿದೆ.

ವಿನೋದ್ ಗುಡಿಹಾಳ ಎಂಬಾತನ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿದ್ದು, ಈತ ಬಳ್ಳಾರಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೆದ್ದಾರಿಗಳಲ್ಲಿ ಮಾರಕಾಸ್ತ್ರ ತೋರಿಸಿ ವಾಹನ ಸವಾರರಿಂದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ.

ಈ ಸುದ್ದಿಯನ್ನೂ ಓದಿ | Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನ ಮೂವರು ಆರೋಪಿಗಳಿಗೆ ಜಾಮೀನು; ದರ್ಶನ್‌ ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ

ಭಾನುವಾರ‌ವೂ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಲಾರಿ ಚಾಲಕನನ್ನು ಅಡ್ಡಗಟ್ಟಿದ ಮೂವರು ತಲ್ವಾರ್‌ನಿಂದ ಹಲ್ಲೆ ನಡೆಸಿ ಆತನ ಬಳಿಯಿದ್ದ 10 ಸಾವಿರ ಹಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಲಾರಿ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗುತ್ತಿದ್ದ ಹಾಗೆ ಕಮಿಷನರ್ ಎನ್. ಶಶಿಕುಮಾರ್, ಆರೋಪಿಗಳನ್ನು ಬಂಧಿಸಲು ಒಂದು ತಂಡವನ್ನು ರಚನೆ ಮಾಡಿದ್ದರು.

ಈ ವೇಳೆ ಆರೋಪಿಗಳು ರಿಂಗ್ ರೋಡ್ ಬಳಿ ಇರುವ ಮಾಹಿತಿ ಮಾಹಿತಿ ಆಧರಿಸಿ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದರು.‌

ಈ ಸುದ್ದಿಯನ್ನೂ ಓದಿ | Israel Strikes:‌ ಇಸ್ರೇಲ್‌ ಏರ್‌ಸ್ಟ್ರೈಕ್‌ಗೆ ನಲುಗಿದ ಲೆಬನಾನ್‌; ಹೆಜ್ಬುಲ್ಲಾಗಳ ನೆಲೆ ಧ್ವಂಸ; 50ಕ್ಕೂ ಹೆಚ್ಚು ಜನ ಬಲಿ

ತಕ್ಷಣ ಆರೋಪಿ‌ ಪರಾರಿಯಾಗುವ ಸೂಚನೆ ಅರಿತ ಪೊಲೀಸರು, ಆರೋಪಿ ವಿನೋದ್ ಗುಡಿಹಾಳ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರಿಗೂ ಕೂಡ ಗಾಯವಾಗಿದೆ ಎಂದು ತಿಳಿದು ಬಂದಿದೆ.