Thursday, 12th December 2024

ಧಾರವಾಡ ಕೃಷಿ ವಿವಿಯ ಮಾಜಿ ಕುಲಪತಿ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಧಾರವಾಡ: ಧಾರವಾಡ ಕೃಷಿ ವಿವಿಯ ಮಾಜಿ ಕುಲಪತಿ ಎಸ್.ಎ.ಪಾಟೀಲ್ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ|| ಎಸ್.ಎ.ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು.

ಕುಲಪತಿಗಳಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಅತ್ಯುನ್ನತ ಶಿಕ್ಷಣ ಕೇಂದ್ರವಾಗಿ ಕಟ್ಟಿಬೆಳೆಸಿದ ಪಾಟೀಲರು ಹೈಬ್ರಿಡ್ ಹತ್ತಿ ತಳಿ ಸಂಶೋಧನೆ, ಗುಣಮಟ್ಟದ ಬೀಜ ವಿತರಣೆಗಾಗಿ “ಬೀಜ ಗ್ರಾಮ ಯೋಜನೆ” ಆರಂಭಿಸಿ ದೇಶದ ರೈತರ ಪಾಲಿಗೆ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿಯಾಗಿ ದ್ದರು.

ಪಾಟೀಲರ ಅಗಲಿಕೆಯಿಂದ ನಾಡಿನ ಕೃಷಿ ಮತ್ತು ಸಂಶೋಧನಾ ವಲಯ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.