Saturday, 14th December 2024

ನಾಳೆ ಧಾರವಾಡ ಬಂದ್

ಧಾರವಾಡ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗೊಳಿಸಿದಂತೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿವೆ.  ಇದರ ಬೆನ್ನಲ್ಲೆ, ನಾಳೆ ಧಾರವಾಡ ಬಂದ್ ಮಾಡಲು ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 3ರ ವರೆಗೆ ಧಾರವಾಡ ಜಿಲ್ಲೆಯನ್ನು ಬಂದ್ ಮಾಡುವುದಾಗಿ ಮಹದಾಯಿ ಹೋರಾಟಗಾರರು ಹಾಗೂ ಇತರೆ ಸಂಘಟನೆಗಳು ನಿರ್ಧರಿಸಿವೆ.

ಕರ್ನಾಟಕದ ಪ್ರಮುಖ ನೀರಿನ ಸಮಸ್ಯೆ ಎಂದರೆ ಮೊದಲನೆಯದಾಗಿ ಕಾವೇರಿ ಹಾಗೂ ಎರಡನೆಯದಾಗಿ ಮಹದಾಯಿ ನೀರಿನ ಸಮಸ್ಯೆ ಯಾಗಿವೆ. ಕಳೆದ ಹಲವಾರು ವರ್ಷ ಗಳಿಂದ ಮಹದಾಯಿ ನೀರಿಗಾಗಿ ರೈತರು ಹೋರಾಟ ನಡೆಸುತ್ತಿದ್ದಾರೆ.

ಇದೀಗ ಕಾವೇರಿ ಹೋರಾಟಕ್ಕೂ ಮಹದಾಯಿ ಹೋರಾಟಗಾರರು ಬೆಂಬಲ ಸೂಚಿಸಿ ದ್ದಾರೆ.