Monday, 16th September 2024

ಧ್ಯಾನ್‌ಚಂದ್ ಹಾಕಿ ಕ್ರೀಡೆಗೆ ಘನತೆ ತಂದುಕೊಟ್ಟ ಧೃವತಾರೆ: ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯಿತ್ರಿ

chickballapur

ಚಿಕ್ಕಬಳ್ಳಾಪುರ : ಹಾಕಿ ಕೀಡೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಅದಕ್ಕೊಂದು ಘನತೆ ತಂದುಕೊಟ್ಟ ಮೇಜರ್ ಧ್ಯಾನ್‌ಚಂದ್ ಭಾರತೀಯರ ಪಾಲಿಗೆ ಎಂದೆಂದಿಗೂ ಮರೆಯಲಾರದ ಧೃವತಾರೆಯಾಗಿದ್ದಾರೆ ಎಂದು ಯುವಜನಸೇವೆ ಮತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಗಾಯಿತ್ರಿ ತಿಳಿಸಿದರು.

ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯಿತಿ, ಜಿಲ್ಲಾ ಕ್ರೀಡಾ ಇಲಾಖೆ ಮತ್ತು ಚಾಂಪಿಯನ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಮೇಜರ್ ಧ್ಯಾನ್ ಚಂದ್ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ದೇಶದ ಉದ್ದಗಲಕ್ಕೂ ಆ,೨೯ರಂದು ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ.ಇದು ಹಾಕಿ ಮಾಂತ್ರಿಕರೆಂದೇ ಹೆಸರಾಗಿದ್ದ ಧ್ಯಾನ್ ಚಂದ್ ಅವರ ಜನ್ಮದಿನವಾಗಿದೆ.ಭಾರತ ಸರಕಾರವು ೨೦೧೨ರಿಂದ ಈಚೆಗೆ ಈ ದಿನ ವನ್ನು ರಾಷ್ಟ್ರೀಯ ಕ್ರೀಡಾದಿವಸ ಎಂದು ಘೋಷಣೆ ಮಾಡಿದೆ.ಕ್ರೀಡೆಯ ಬಗ್ಗೆ ಧ್ಯಾನ್ ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಇಂದಿನ ಯುವ ಕ್ರೀಡಾಪಟುಗಳು ಆನುಕರಿಸಿದರೆ ತಮ್ಮ ತಮ್ಮ ಆಟೋಟ ಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮಲ್ಲಿ ಚಾಂಪಿಯನ್ ಅಥ್ಲೆಟಿಕ್ ಅಕಾಡೆಮಿ ವಿದ್ಯಾರ್ಥಿಗಳು ಭಾಗಿಯಾಗಿ ಧ್ಯಾನ್ ಚಂದ್ ಜೀವನ ಸಾಧನೆ ಬಗ್ಗೆ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಚಾಂಪಿಯನ್ ಅಥ್ಲೆಟಿಕ್ ಅಕಾಡೆಮಿ ತರಬೇತುದಾರ ಚಂದ್ರಕಾಂತ್, ಉಪನ್ಯಾಸಕ ಬಾಲಪ್ಪ, ಆಟಗಾರ ಶ್ರೀನಿವಾಸ್, ವಾಯುವಿಹಾರಿ ರವಿ, ಕ್ರಿಕೆಟ್ ತರಬೇತುದಾರ ಉತ್ತಮ್, ಕೊಕ್ಕೊ ತರಬೇತುದಾರ ಶ್ರೀಧರ್ ಇತರರು ಇದ್ದರು.

Leave a Reply

Your email address will not be published. Required fields are marked *