ತಿಪಟೂರು: ಔಷಧಿ ವ್ಯಾಪಾರಿ ಸಂಘಗಳ ಗೌರವಾಧ್ಯಕ್ಷರಾದ ಸದಾ ಹಸನ್ಮುಖಿ ಸಮಾಜ ಸೇವೆಗೆ ಹಗಲಿರುಳು ಶ್ರಮಿಸಿದ ದಿಲೀಪ್. ಎಂ ಷಾ. ಕಳೆದ ರಾತ್ರಿ ಮೈಸೂರಿನಲ್ಲಿ ಹೃದಯಾ ಘಾತದಿಂದ ನಿಧನರಾಗಿದ್ದಾರೆ.
ಶ್ರೀಯುತರು ತಿಪಟೂರು ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಸಂಘದ ನಿರ್ದೇಶಕರಾಗಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಇವರ ಅಕಾಲಿಕ ಮರಣಕ್ಕೆ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಎಲ್ಲ ವ್ಯಾಪಾರಿಗಳು ಒಂದು ಗಂಟೆ ಮೆಡಿಕಲ್ ಶಾಪ್ ಮುಚ್ಚಿ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಮೌನಾಚರಣೆ ಆಚರಿಸಿದರು.
ಈ ಸಮಯದಲ್ಲಿ ಮಾತನಾಡಿದ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಮಾತನಾಡಿ ಸದಾ ಹಸನ್ಮುಖದ ಸೇವೆ ಜೊತೆಗೆ ಕಲ್ಪತರು ವಿದ್ಯಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಮಾಜಸೇವೆಗೆ ಮುಂಚೂಣಿ ಯಲ್ಲಿದ್ದು ಕೋವಿಡ್ ಸಂದರ್ಭದಲ್ಲಿ ಸಂಘದ ಮುಖಾಂತರ ಮಾಸ್ಕ್ ಸ್ಯಾನಿಟೈಸರ್ ಗಳನ್ನು ವಾರಿಯರ್ಸಗೆ ವಿತರಿಸುವಲ್ಲಿ ಸಹಕರಿಸಿದ್ದರು ಅವರ ಇಚ್ಛೆಯಂತೆ ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿ ಇತರರಿಗೆ ಮಾದರಿ ಯಾಗಿದ್ದಾರೆ ಎಂದು ಮೌನ ಸಂತಾಪ ಆಚರಿಸಿದರು.
ಈ ಸಮಯದಲ್ಲಿ ಎಲ್ಲಾ ಮೆಡಿಕಲ್ ಶಾಪ್ ಗಳ ಮಾಲೀಕರು ಭಾಗವಹಿಸಿದ್ದರು.
Read E-Paper click here