Saturday, 14th December 2024

ಧಾರವಾಡ ಲೋಕಸಭಾ ಕ್ಷೇತ್ರ: ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಖಚಿತ..!

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಲು ನಿರ್ಧರಿಸಿ ದ್ದಾರೆ. ಇದರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ vs ಲಿಂಗಾಯತ ಸ್ಪರ್ಧೆ ಏರ್ಪಟ್ಟಿದೆ.
ಧಾರವಾಡ ಲೋಕಸಭಾ ಕ್ಷೇತ್ರ ದಲ್ಲಿ 6.5 ರಿಂದ 7 ಲಕ್ಷ ಲಿಂಗಾಯತರು ಇದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರೇ ಸ್ಪರ್ಧಿಸುವ ಮೂಲಕ ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಇವರ ಪ್ರತಿ ಸ್ಪರ್ಧಿಯಾಗಿ ಕಾಂಗ್ರೆಸ್​ನಿಂದ ಯುವ ಕಾಂಗ್ರೆಸ್​ ಘಟಕದ ಜಿಲ್ಲಾ ಅಧ್ಯಕ್ಷ, ಕುರುಬ ಸಮಾಜದ ವಿನೋದ ಅಸೂಟಿ ಸ್ಪರ್ಧಿಸು ತ್ತಿದ್ದಾರೆ.

ಪ್ರಹ್ಲಾದ್​ ಜೋಶಿಗೆ ಪ್ರತಿಸ್ಪರ್ಧಿಯಾಗಿ ವಿನೋದ ಅಸೂಟಿ ಹೆಸರು ಘೋಷಿಸಿದ ನಂತರವೂ ಕ್ಷೇತ್ರದಲ್ಲಿ ಅಷ್ಟೊಂದು ಬೆಳವಣಿಗೆ ಗಳು ಕಂಡು ಬರಲಿಲ್ಲ. ಆದರೆ ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿಯ ಆಗಮನದವರೆಗೂ ಶಾಂತ ವಾಗಿಯೇ ಇದ್ದ ಕ್ಷೇತ್ರ, ಸ್ವಾಮೀಜಿಯವರ ಆಗಮನದ ನಂತರ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಕ್ಷೇತ್ರದಲ್ಲಿ ಬ್ರಾಹ್ಮಣ vs ಲಿಂಗಾಯತ ಸಮುದಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸದಾ ಒಂದಲ್ಲ ಒಂದು ವಿವಾದಿಂದ ಸುದ್ದಿಯಲ್ಲಿದ್ದಾರೆ.

ಕೋಮು ಸೌಹಾರ್ದ, ಜಾತ್ಯಾತೀತ ಹೋರಾಟ, ಎಡಪಂಥೀಯ ದೃಷ್ಟಿಕೋನದಿಂದ ಬೆಳೆದು ಬಂದಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿದ್ದರು. ಇನ್ನೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪವೂ ಇವರ ಮೇಲೆ ಕೇಳಿ ಬಂದಿತ್ತು. ಭಾವೈಕ್ಯತೆ ಸೇರಿದಂತೆ ಮಠದ ವಿಷಯವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಅವರು ಗಮನ ಸೆಳೆದವರು.

ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಕಷ್ಟು ಭಕ್ತರನ್ನು ಹೊಂದಿ ದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 6.5 ರಿಂದ 7 ಲಕ್ಷ ಲಿಂಗಾಯತರು ಇದ್ದಾರೆ. ಲಿಂಗಾಯತ ಮತಗಳೇ ನಿರ್ಣಾಯಕ ವಾಗಿರುವ ಈ ಕ್ಷೇತ್ರದಲ್ಲಿ ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್​ ಜೋಶಿ ಅವರು ಸ್ಪರ್ಧಿಸಿದ್ದು, ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಇವರ ಪ್ರತಿ ಸ್ಪರ್ಧಿಯಾಗಿ ಲಿಂಗಾಯತ ಸಮುದಾಯದ ಮುಖಂಡ ವಿನಯ ಕುಲಕರ್ಣಿ ಸ್ಪರ್ಧಿಸಿದ್ದರೂ ಕೂಡ ಗೆಲವು ಸಾಧ್ಯವಾಗಲಿಲ್ಲ.