Saturday, 14th December 2024

ಡಿ.ಎನ್.ಮಂಜುನಾಥ್ ಅಧಿಕಾರ ಸ್ವೀಕಾರ

ತುಮಕೂರು: ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಿ.ಎನ್.ಮಂಜುನಾಥ್ ಗುರುವಾರ ಅಧಿಕಾರ ವಹಿಸಿಕೊಂಡರು.
ಚಳ್ಳಕೆರೆ ಮೂಲದವರಾದ ಇವರು ದಾವಣಗೆರೆಯ ಚಿಗಟಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಇ.ಎನ್ಟಿ. ವಿಭಾಗದಲ್ಲಿ ಹಿರಿಯ ಸರ್ಜನ್ ಆಗಿ ಕಳೆದ 9 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ  ಡಿಎಚ್ಒ ಆಗಿದ್ದ ಡಾ. ಎಂ.ಟಿ. ನಾಗೇಂದ್ರಪ್ಪ ಅವರನ್ನು ಯಾವುದೇ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿದೆ.