Wednesday, 9th October 2024

ನಾಯಿಗಳಿಗೆಂದು ಬೇಯಿಸಿಟ್ಟ ಅನ್ನಕ್ಕೆ ಸೀಮೆಎಣ್ಣೆ ಸುರಿದ ಕಿಡಿಗೇಡಿ ಮಹಿಳೆ

ಮಂಗಳೂರು: ನಾಯಿಗಳಿಗೆಂದು ಬೇಯಿಸಿಟ್ಟ ಅನ್ನಕ್ಕೆ ಮಹಿಳೆಯೋರ್ವರು ಸೀಮೆಎಣ್ಣೆ ಸುರಿದಿರುವ ಅಮಾನವೀಯ ಘಟನೆ ನಡೆದಿದೆ.

ಮಂಗಳೂರು ಬಳ್ಳಾಲ್ ಭಾಗ್ ನಿವಾಸಿ ರಜನಿ ಶೆಟ್ಟಿಯವರು ಮನೆಯಲ್ಲಿಯೇ 38 ಬೀದಿ ನಾಯಿ ಸಹಿತ, ಬೆಕ್ಕು, ಗಿಡುಗ, ಕಾಗೆಗಳಿಗೆ ಆಶ್ರಯ ನೀಡಿದ್ದಾರೆ‌. ಬಹುತೇಕ ಪ್ರಾಣಿಗಳು ಗಾಯಾಳಾಗಿ ಬಳಲುತ್ತಿವೆ. ಬಳಲುತ್ತಿರುವ ಪ್ರಾಣಿಗಳಿಗೆ ಆರೈಕೆಯನ್ನೂ ಮಾಡುತ್ತಿದ್ದಾರೆ. ನಾಯಿಗಳು ಬೊಗಳುವುದರಿಂದ ಕಿರಿಕಿರಿ ಆಗುತ್ತಿದೆ ಎಂಬ ನೆಪವನ್ನೊಡ್ಡಿ ಸ್ಥಳೀಯ ಮಹಿಳೆ ಕಿರಿಕಿರಿ ಮಾಡುತ್ತಿದ್ದರು.

ಅಲ್ಲದೇ ಕಿಡಿಗೇಡಿ ಮಹಿಳೆ ನಾಯಿಗಳಿಗೆ ಉಣಬಡಿಸಲು ಬೇಯಿಸಿಟ್ಟ ಆಹಾರಕ್ಕೇ ಸೀಮೆಎಣ್ಣೆ ಸುರಿದಿದ್ದಾಳೆ. ಪ್ರತಿನಿತ್ಯ 60 ಕೆ.ಜಿ. ಅನ್ನ ತಯಾರಿಸುವ ರಜನಿ ಶೆಟ್ಟಿಯವರು, ನಿತ್ಯ 800ಕ್ಕೂ ಅಧಿಕ ನಾಯಿಗಳಿಗೆ ಆಹಾರ ನೀಡುತ್ತಾರೆ.