ತುಮಕೂರು: ದೇವಸ್ಥಾನ, ಜಾತ್ರೆ, ಹಬ್ಬ ಮತ್ತಿತರ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವ ಪ್ರಸಾದ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರಡಿ ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವ, ಹಬ್ಬ-ಹರಿದಿನಗಳಲ್ಲಿ ಭಕ್ತಾದಿಗಳು, ಸಾರ್ವಜನಿಕರಿಗೆ ಪ್ರಸಾದ ವಿತರಿಸಲು ಆಹಾರ ತಯಾರಿಸುವವರು ಕಡ್ಡಾಯವಾಗಿ ಆಹಾರ ಪರವಾನಗಿ ಪಡೆದುಕೊಳ್ಳಬೇಕು. ಪಡೆದಿರುವ ಆಹಾರ ಪರವಾನಗಿ ಯನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಆಹಾರ ತಯಾರಿಸುವ ಜಾಗ ಶುಚಿತ್ವದಿಂದ ಕೂಡಿರಬೇಕು. ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳು ಎಫ್.ಎಸ್.ಎಸ್.ಎ ಲೈಸನ್ಸ್ ಪಡೆದಿದ್ದು, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಪ್ರಸಾದ ತಯಾರಿಕೆಯಲ್ಲಿ ಬಳಸಬಾರದು ಎಂದು ಸೂಚನೆ ನೀಡಿದ್ದಾರೆ.
ಜಾತ್ರೆ, ಊರ ಹಬ್ಬಗಳಲ್ಲಿ ಆಹಾರ ವಿತರಣೆಗೆ ಸಂಬAಧಿಸಿದAತೆ ಆಹಾರ ತಯಾರಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ಏಪ್ರಾನ್, ಕೈಗವಸು, ಮುಖಗವಸು, ತಲೆಗೆ ಕೂದಲುಗಳನ್ನು ಮುಚ್ಚು ವಂತಿರುವ ಟೋಪಿ, ಕಾಲುಗಳಿಗೆ ಪಾದರಕ್ಷೆ ಧರಿಸಿರಬೇಕು ಹಾಗೂ ಕೈಗಳನ್ನು ಸೋಂಕು ನಿವಾರಣಾ ದ್ರಾವಣದಿಂದ ತೊಳೆಯಬೇಕು. ಕೈಗಳ ಉಗುರು ಹಾಗೂ ತಲೆ ಕೂದಲನ್ನು ನೀಟಾಗಿ ಕತ್ತರಿಸಬೇಕು. ಫುಡ್ ಹ್ಯಾಂಡ್ಲರ್ಲ್ಸ್ (ರಿಜಿಸ್ರ‍್ಡ್ ಮೆಡಿಕಲ್ ಪ್ರಾಪಟೇಷನರ್) ಅವರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರಬೇಕು. ತಿಂಡಿ ತಿನಿಸು, ಸಿಹಿ ಪದಾರ್ಥ,ಪಾನೀಯಗಳನ್ನು ನೊಣ, ಜಿರಳೆಗಳು ಮುತ್ತಿಕೊಳ್ಳದಂತೆ ನಿಗಾ ವಹಿಸಬೇಕು. ಕ್ರಿಮಿಕೀಟಗಳಿಂದ ಆಹಾರ ವಸ್ತುಗಳನ್ನು ದೂರವಿರಿಸಬೇಕು.
ನಿಷೇಧಿತ ಪ್ಲಾಸ್ಟಿಕ್ ಮತ್ತು ನ್ಯೂಸ್ ಪೇಪರ್‌ಗಳಿಂದ ಆಹಾರ ಪೊಟ್ಟಣಗಳನ್ನು (ಪಾಕೇಟ್)ಮಾಡಬಾರದು. ಆಹಾರ ತಯಾರು ಮಾಡುವ ಕೊಠಡಿ, ಸಂಗ್ರಹ ಹಾಗೂ ಮಾರಾಟ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಫಾಸ್ಟಾಕ್ ತರಬೇತಿ ಹಾಗೂ ಪೆಸ್ಟ್ ಕಂಟ್ರೋಲ್ ಪ್ರಮಾಣ ಪತ್ರ ಪಡೆದಿರಬೇಕು.
ಪ್ರಸಾದ ವಿನಿಯೋಗ ನಂತರ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಆಹಾರ ಪದಾರ್ಥಗಳನ್ನು ಸರ್ಕಾರದಿಂದ ಅನುಮತಿ ಪಡೆದಿರುವ ಎಫ್.ಬಿ.ಓ.ಗಳಿಂದ ಖರೀದಿಸಬೇಕು.
ಪ್ರಸಾದ ವಿತರಣಾ ಕಾರ್ಯಕ್ರಮದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯು ಮುಂಚಿತವಾಗಿಯೇ ಸಂಬAಧಿಸಿದ ಆಹಾರ ಸುರಕ್ಷತಾಧಿಕಾರಿಗಳಿಗೆ ಮಾಹಿತಿ ನೀಡಿರಬೇಕು. ತಯಾರಿಸಿದ ಆಹಾರ ಪದಾರ್ಥಗಳ ಮಾದರಿಯನ್ನು ವಿತರಣೆ ಮಾಡುವ ಮುನ್ನ ಆಹಾರ ಸುರಕ್ಷತಾಧಿಕಾರಿಗಳಿಗೆ ಕೊಡತಕ್ಕದ್ದು. ಪ್ರಸಾದ ವಿನಿಯೋಗ ಕಾರ್ಯಕ್ರಮಗಳಲ್ಲಿ ಬಳಸುವಂತಹ ನೀರು ಎಫ್.ಎಸ್.ಎಸ್.ಎ ಪರವಾನಗಿ ಹೊಂದಿರಬೇಕು ಅಥವಾ ಆರ್.ಓ. ಪ್ಲಾಂಟ್ ಅಳವಡಿಸಿದ ನೀರನ್ನು ಉಪಯೋಗಿಸಬೇಕು ಎಂದು ಅವರು ಸೂಚಿಸಿದ್ದಾರೆ.