Saturday, 26th October 2024

ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹ : ಚಳಿಬಿಡಿಸಿದ ಡಾ. ರಾಜಾರೆಡ್ಡಿ

ವೈದ್ಯರು ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ವೀಕ್ಷಿಸಿದ ಜಿಲ್ಲಾ ಸರ್ಜನ್

ಚಿಕ್ಕಬಳ್ಳಾಪುರ : ಜಿಲ್ಲಾಸ್ಪತ್ರೆಯ ಶಸ್ತç ಚಿಕಿತ್ಸಕ ಡಾ. ರಾಜಾರೆಡ್ಡಿ ಕಾರ್ತಿಕ ಮಾಸದ ಕೊರೆವ ಚಳಿಯ ನಡುವೆಯೂ ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯಪ್ರಜ್ಞೆ ಮತ್ತು ಕಾರ್ಯತತ್ಪರತೆಯನ್ನು ಪ್ರತ್ಯಕ್ಷವಾಗಿ ಕಾಣುವ ಮೂಲಕ ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಿದರು. ಇವರ ಮಿಂಚನ ಸಂಚಾರವು ಜಿಲ್ಲಾಸ್ಪತ್ರೆಯಲ್ಲಿ ಹೊಸ ಸಂಚಲನ ಉಂಟು ಮಾಡಿದೆಯಲ್ಲದೆ ರೋಗಿಗಳಿಗೆ ಉತ್ತಮ ಸೇವೆ ದೊರೆತು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೌದು. ಜಿಲ್ಲಾಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಇತರೆ ಸಿಬ್ಬಂದಿ, ಹಿರಿಯ ವೈದ್ಯರು ಲಭ್ಯರಿರುವುದಿಲ್ಲ ಸ್ವಚ್ಚತೆ ಮರೀಚಿಕೆ ಯಾಗಿದೆ. ವಿಳಂಭ ಪರೀಕ್ಷೆ , ಔಷಧ ವಿತರಣೆ ಮೊದಲಾದವುಗಳ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದವು.

ಮುಖ್ಯವಾಗಿ ಹೊರರೋಗಿಗಳ ವಿಭಾಗದಲ್ಲಿ ಬೆಳಗಿನ ೯ ಗಂಟೆಗೆ ಕರ್ತವ್ಯದಲ್ಲಿರಬೇಕಾದ ವೈದ್ಯರು ೯.೩೦ ಯಿಂದ ೧೦ ಗಂಟೆಗೆ ಬರುತ್ತಾರೆ ಎಂಬ ದೂರಿತ್ತು.ಇದನ್ನು ಮನಗಾಣಲು ಡಾ. ರಾಜಾರೆಡ್ಡಿ ಮಿಂಚಿನ ಭೇಟಿ ಅಥವಾ ಸತ್ಯ ದರ್ಶನಕ್ಕೆ ಎಂಬ ಕಾರ್ಯಕ್ಕೆ ಮುಂದಾ ಗಿದ್ದಾರೆ.

ಈ ವೇಳೆ ಕಂಡು ಬರುವ ಲೋಪಗಳ ಬಗ್ಗೆ ಸಂಬ0ಧಪಟ್ಟವರಿಗೆ ನೋಟೀಸ್ ನೀಡುವ ಮೂಲಕ ಅವರಿಂದ ಉತ್ತರವನ್ನು ಪಡೆಯುತ್ತಿದ್ದಾರೆ.ಜಿಲ್ಲಾ ಸರ್ಜನ್ ಅವರ ಈ ಕಾರ್ಯವು ಹೊರರೋಗಿ, ಒಳ ರೋಗಿಗಳಿಗೆ ನೆರವಾಗಿದೆ ಯಲ್ಲದೆ, ಆರೋಗ್ಯ ಸಚಿವರ ಕ್ಷೇತ್ರದಲ್ಲಿರುವ ಜಿಲ್ಲಾಸ್ಪತ್ರೆ ಸೇವೆಗಳು ಸಕಾಲದಲ್ಲಿ ಸಾರ್ವಜನಿಕರಿಗೆ ದೊರೆಯುವಂತಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಶಸ್ತç ಚಿಕಿತ್ಸಕ ಡಾ. ರಾಜಾರೆಡ್ಡಿ ಇದೊಂದು ಸಾಮಾನ್ಯವಾದ ಜಿಲ್ಲಾ ಶಸ್ತç ಚಿಕಿತ್ಸಕ ಅಧಿಕಾರಿಯ ಕರ್ತವ್ಯವಾಗಿದೆ.ನನಗೆ ೯ಕ್ಕೆ ಒಪಿಡಿಯಲ್ಲಿ ವೈದ್ಯರು ಇರುವುದಿಲ್ಲ, ಸ್ವಚ್ಚತೆಯಿಲ್ಲ, ಸಿಬ್ಬಂದಿಯ ವರ್ತನೆ ಸರಿಯಿಲ್ಲ ಎನ್ನುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುತ್ತವೆ.ಇದನ್ನು ಪರಿಹರಿಸಬೇಕಾದರೆ ಸತ್ಯದರ್ಶನ ಅಥವಾ ಮಿಂಚಿನ ಭೇಟಿ ಅನಿವಾರ್ಯ. ಇಷ್ಟೇ ಅಲ್ಲದೆ ನಾನು ಜಿಲ್ಲಾ ಶಸ್ತç ಚಿಕಿತ್ಸಕನಾದ ಮೇಲೆ ನಿಯಮಿತವಾಗಿ ವೈದ್ಯರ, ಶುಶ್ರೂ ಷಕರ, ದಾದಿಯರ ಪ್ರತ್ಯೇಕ ಸಭೆಗಳನ್ನು ನಡೆಸಿದಂತೆ ಎಲ್ಲಾ ವಿಭಾಗದಲ್ಲೂ ಮಾಡಲಾಗಿದೆ.

ಸಭೆಗಳಲ್ಲಿ ಅವರಿಗೆ ತಿಳಿಸಬೇಕಾದ ವಿಚಾರಗಳನ್ನು ತಿಳಿಸಲಾಗಿದೆ.ಸೂಚನೆ ನೀಡಿದ ಮೇಲೂ ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕ ಲಾಗಿನ್ ಆಗದವರು,ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ಬಾರದಿರುವವರಿಗೆ ನೋಟೀಸ್ ನೀಡಲಾಗಿದೆ.

ನಮ್ಮ ಉದ್ದೇಶವೇ ಸಾರ್ವಜನಿಕರಿಗೆ ನೀಡಬೇಕಾದ ಸೇವೆಯನ್ನು ನಮ್ಮ ಇತಿಮಿತಿಯಲ್ಲಿ ಸಕಾಲದಲ್ಲಿ ಉತ್ತಮವಾಗಿ ನೀಡುವುದೇ ಆಗಿದೆ.ಇದು ಆಗಬೇಕಾದರೆ ಮೇಲಾಧಿಕಾರಿಯಾಗಿ ಕಾಲಕಾಲಕ್ಕೆ ಮಾಡಬೇಕಾದ ಕೆಲಸಗಳನ್ನು ಮುಲಾಜಿಲ್ಲದೆ ಮಾಡಲೇ ಬೇಕಾಗುತ್ತದೆ ಎನ್ನುತ್ತಾರೆ.

ಏನೇ ಆಗಲಿ ಜಿಲ್ಲಾಶಸ್ತç ಚಿಕಿತ್ಸಕರ ಮಿಂಚಿನ ಭೇಟಿಯ ಕಾರಣವಾಗಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿರುವುದರಿಂದ ರೋಗಿಗಳಿಗೆ,ಸರಕಾರಿ ಆಸ್ಪತ್ರೆಯನ್ನೇ ಆಶ್ರಯಿಸಿ ಬರುವ ಅಸಹಾಯಕರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾಗಿರುವುದರಲ್ಲಿ ಸಂದೇಹವೇ ಇಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ.