ತುಮಕೂರು: ವೈದ್ಯಕೀಯ ಪದ್ದತಿಯಲ್ಲಿ ಸಿಂಪಥಿ ಇಟ್ಟುಕೊಳ್ಳಿ ಎಂದು ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಶುದ್ಧಗಾಳಿ, ಶುದ್ಧ ನೀರು, ಶುದ್ಧ ಆಹಾರ ಸಿಕ್ಕಾಗ ಮಾತ್ರ ಆರೋಗ್ಯ ಭಾರತ ಕಾಣಲು ಸಾಧ್ಯ. ನಮ್ಮ ಜೀವನ ಶೈಲಿ ಬದಲಾವಣೆ, ಪ್ರಕೃತಿಯ ಮೇಲಿನ ಅಕ್ರಮಣದಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗು ತ್ತಿದ್ದೇವೆ. ವಯಸ್ಕರಲ್ಲೆ ಹೃದಯ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಧು ಮೇಹ, ಕ್ಯಾನ್ಸರ್, ಪಾರ್ಶ್ವವಾಯು ಜತೆಗೆ ಮೊಬೈಲ್ ಅಡಿಕ್ಷನ್ ರೋಗವು ನಮ್ಮ ಸುತ್ತಮುತ್ತಲಿನ ಪರಿವೆಯೇ ಇಲ್ಲದಂತೆ ಮನುಷ್ಯನನ್ನು ಏಕಾಂಗಿಯಾಗಿಸಿದೆ ಎಂದರು.
ಗ್ರಾಮೀಣ ಭಾಗದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ವಾತಾವರಣ ನಿರ್ಮಾಣವಾಗ ಬೇಕಿದೆ. ತಮ್ಮದಲ್ಲದ ತಪ್ಪಿಗೂ ವೈದ್ಯ ರನ್ನು ಹೊಣೆ ಮಾಡಲಾಗುತ್ತಿದೆ. ಅವರು ನಮ್ಮಂತೆಯೇ ಮನುಷ್ಯರು. ದೇವರಾಗಲಿ, ಜಾದುಗಾರರಾಗಲಿ ಅಲ್ಲ ಎಂಬುದನ್ನು ಸಮಾಜ ಮನಗಾಣಬೇಕು. ಹಳ್ಳಿಗಳಲ್ಲಿ ಸೂಕ್ತ ಸೌಲಭ್ಯವನ್ನು ಸರ್ಕಾರ ಮಾಡಿ ಕೊಟ್ಟಿದ್ದೇ ಆದಲ್ಲಿ ಅಲ್ಲಿ ಹೋಗಿ ಕೆಲಸ ಮಾಡಲು ವೈದ್ಯರು ಸಿದ್ದರಿದ್ದಾರೆ ಎಂದರು.
ರಾಜೀವ್ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ೬೦೦ ವೈದ್ಯಕೀಯ ಕಾಲೇಜುಗಳು ದೇಶದಲ್ಲಿ ತಲೆಎತ್ತಿದೆ. ಸಿದ್ಧಗಂಗಾ ಮೆಡಿಕಲ್ ಕಾಲೇಜು ಅತ್ಯುತ್ತಮ ಕಾಲೇಜಾಗಿ ಹೊರಹೊಮ್ಮುವ ಎಲ್ಲಾ ಗುಣಲಕ್ಷಣ ಹೊಂದಿದ್ದು, ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆಳೆಸಿಕೊಳ್ಳುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಉಪ ಕುಲಪತಿ ಡಾ.ಎಸ್.ಸಚ್ಚಿದಾನಂದ್ ಮಾತನಾಡಿ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಅತೀ ಕಡಿಮೆ ಅವಧಿಯಲ್ಲಿ ಅತ್ಯುದ್ಬುತ ಸೌಕರ್ಯಗಳನ್ನು ಹೊಂದಿ ವೈದ್ಯರನ್ನು ಲೋಕಕ್ಕೆ ಸಮರ್ಪಿಸಲು ಮುಂದಾಗಿದೆ. ವಿಶ್ವದಲ್ಲೆ ನಂ.೧ ಆರೋಗ್ಯ ವಿಶ್ವ ವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ನೀವೆಲ್ಲ ವೈದ್ಯ ಪದವಿಗೆ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಆಶೀರ್ವಚನ ನೀಡಿ ಪೂಜ್ಯ ಡಾ.ಶಿವಕುಮಾರಸ್ವಾಮೀಜಿ ಅವರು ಬದುಕಿದ್ದಾ ಗಲೇ ಮೂರು ಬಾರಿ ಮೆಡಿಕಲ್ ಕಾಲೇಜಿಗೆ ಪ್ರಯತ್ನ ಪಟ್ಟು ಅನುಮತಿ ದೊರೆಯದಿದ್ದಾಗ ಬೇಡವೇ ಬೇಡ ಎಂದು ಸುಮ್ಮನಾ ದರು. ೨೦೦೧ರಲ್ಲಿ ಸಂಸದ ಜಿ.ಎಸ್.ಬಸವರಾಜ್ ಅವರು ಸಿದ್ಧಗಂಗಾ ಆಸ್ಪತ್ರೆ ಸ್ಥಾಪಿಸಲು ಮುಂದಾಗಿ ೨೦೧೫ರವರೆಗೆ ಅರೆಬರೆ ಕಟ್ಟಡವಾಗಿಯೇ ಉಳಿದಿತ್ತು. ಕಡೆಗೆ ೯ ಮಂದಿ ವೈದ್ಯರೇ ಮುಂದೆ ಬಂದು ಆಸ್ಪತ್ರೆ ಮುನ್ನೆಡೆಸುತ್ತುವಂದಾಗ ಅವರಿಗೆ ಪೂರ್ಣ ಜವಾಬ್ದಾರಿ ವಹಿಸಲಾಯಿತು. ನಮ್ಮ ಪಾತ್ರವಿರದಿದ್ದರೂ ನೋವಿನ ಮಾತುಗಳನ್ನು ಕೇಳಬೇಕಾಯಿತು. ಕಡೆಗೆ ಮಠದ ಸುಪರ್ದಿಗೆ ತೆಗೆದುಕೊಂಡು ಅನಿವಾರ್ಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ.
ಹಿಂದಿನ ಗುರುಗಳು ಹೇಳಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತುಕೊಡುತ್ತೆವೆ. ಮಠದ ವ್ಯವಸ್ಥೆಗೂ ಧಕ್ಕೆಯಾಗದಂತೆ ಕಾಲೇಜು ಆಸ್ಪತ್ರೆ ಮುನ್ನೆಡಯಲಿದೆ ಎಂದು ಸ್ಪಷ್ಟೀಕರಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಎಸ್. ಪರಮೇಶ್, ಪ್ರಾಂಶು ಪಾಲೆ ಡಾ.ಶಾಲಿನಿ.ಎಂ. ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಆಡಳಿತ ಮಂಡಳಿಯ ಟಿಎಂ.ಸ್ವಾಮಿ, ಎಸ್ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಕೋರಿ ಮಂಜಣ್ಣ, ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯೆ ಮತ್ತಿತರ ಗಣ್ಯರು ಹಾಜರಿದ್ದರು.