Thursday, 12th December 2024

ರಾಜ್ಯ ಸರಕಾರ ಜನಪರ ಆಡಳಿತ ನೀಡಲು ಕಟಿಬದ್ಧವಾಗಿದೆ : ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಸಮಾಜದ ಪ್ರತಿಯೊಂದು ಸಮುದಾಯದ ಏಳಿಗೆ ಗಾಗಿ ಹತ್ತಾರು ಜನಪರ ಯೋಜನೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ ಅಹರ್ನಿಷಿ ಶ್ರಮಿಸು ತ್ತಿದೆ. ೭ ಕೋಟಿ ಬೃಹತ್ ಜನಸಂಖ್ಯೆಗೆ ಆರೋಗ್ಯ ಭಾಗ್ಯ ಕೊಡುವುದಕ್ಕೆ ಪ್ರಥಮ ಆಧ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಅವರು ಚಿಂತಾಮಣಿ ತಾಲೂಕಿನ  ಯಗವಕೋಟೆ ಗ್ರಾಮದಲ್ಲಿ  ಶುಕ್ರವಾರ ೮೭ ಲಕ್ಷ ವೆಚ್ಚದ   ಪ್ರಾಥಮಿಕ  ಆರೋಗ್ಯ  ಕೇಂದ್ರದ ವಸತಿ ಗೃಹಗಳ  ಕಟ್ಟಡ  ಕಾಮಗಾರಿಗೆ  ಭೂಮಿ  ಪೂಜೆ  ನೆರೆವೇರಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಗೆ ಜೀವ ತುಂಬುವ ಕೆಲಸವನ್ನು ನಮ್ಮ ಸರಕಾರದ ಸಚಿವ ಸಂಪುಟ ಪಾಲಿಸುತ್ತಾ ಬಂದಿದೆ.

ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ವೈದ್ಯರು ಸೇರಿ ಅಪಾರ ವೈಧ್ಯಕೀಯ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಸೇವೆ ಒದಗಿಸುತ್ತಿದೆ.ಈ ನಡುವೆ ಅಲ್ಲೋ ಇಲ್ಲೋ ಒಂದೊ0ದು ಅಹಿತಕರ ಘಟನೆಗಳು ನಡೆದಿರಬಹುದು. ವಿರೋಧ ಪಕ್ಷಗಳು ಅದನ್ನೇ ದೊಡ್ಡದು ಮಾಡಲು ಹೊರಡುವುದು ಅವರ ಅಧಿಕಾರ ದಾಹವನ್ನು ತೋರಿಸುತ್ತದೆ. ಅದು ಕೈಗೂಡುವುದಿಲ. ಸಾರ್ವಜನಿಕರ ಬದುಕಿಗೆ ಸಂಚಕಾರ ತರುವ ಯಾವುದೇ ವೈಧ್ಯಕೀಯ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ  ಸಂದರ್ಭದಲ್ಲಿ ಕೋಲಾರ ಲೋಕಸಭಾ  ಕ್ಷೇತ್ರದ  ಸಂಸದ  ಎಸ್. ಮುನಿಸ್ವಾಮಿ,    ಚಿಂತಾಮಣಿ  ವಿಧಾನಸಭಾ  ಕ್ಷೇತ್ರದ   ಶಾಸಕ ಎಂ. ಕೃಷ್ಣ ರೆಡ್ಡಿ, ಡಿ.ಎಚ್.ಓ  ಡಾ. ಮಹೇಶ್  ಕುಮಾರ್, ಚಿಂತಾಮಣಿ  ತಾಲೂಕು  ತಹಸೀಲ್ದಾರ್  ಮುನಿಶಾಮಿ ಸೇರಿದಂತೆ  ವಿವಿಧ  ಇಲಾಖೆಯ  ಅಧಿಕಾರಿಗಳು   ಮತ್ತು  ಸಿಬ್ಬಂದಿ  ಇದ್ದರು.