ತುಮಕೂರು: ಪ್ರತಿಯೊಬ್ಬರೂ ತಮ್ಮ ಮೂಳೆಯಲ್ಲಿ ಎಷ್ಟು ಪ್ರಮಾಣದಲ್ಲಿ ಖನಿಜ ಸಾಂದ್ರತೆಯಿದೆ ಎನ್ನುವುದನ್ನು ಪರೀಕ್ಷಿಸಿ ಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶ್ರೀ ಸಿದ್ದಾರ್ಥ ಕೀಲು ಮತ್ತು ಮೂಳೆ ರೋಗ ವಿಭಾಗದ ಮುಖ್ಯಸ್ಥ ಡಾ.ಕಿರಣ್ ಕಾಳಯ್ಯ ಸಲಹೆ ನೀಡಿದರು.
ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಕೀಲು ಮತ್ತು ಮೂಳೆ ವಿಭಾಗದ ವತಿಯಿಂದ ಹೊರ ರೋಗಿಗಳ ವಿಭಾಗದಲ್ಲಿಆಯೋಜಿಸಿದ್ದ ಉಚಿತ ಮೂಳೆಯ ಖನಿಜ ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಶಿಬಿರದಲ್ಲಿ ರೋಗಿಗಳಿಗೆ ಮೂಳೆಯಲ್ಲಿ ಖನಿಜ ಸಾಂದ್ರತೆ ಪ್ರಮಾಣ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸಾ ಮಾರ್ಗದರ್ಶನ ನೀಡಲಾ ಗಿದೆ. ಅಗತ್ಯವಿದ್ದವರಿಗೆ ಔಷಧಿ ಹಾಗೂ ಮಾತ್ರೆಗಳನ್ನು ನೀಡಲಾಗುತ್ತದೆ. ಹಸಿ ಸೊಪ್ಪು, ತರಕಾರಿ ಸೇರಿದಂತೆ ವಿಟವಿನ್ ಯುಕ್ತ ಆಹಾರ ಪದ್ದಾರ್ಥ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು, ಜೊತೆಗೆ ಸೂರ್ಯನ ಕಿರಣಗಳಿಗೆ ನಾವು ತೆರದುಕೊಳ್ಳ ಬೇಕು. ಸೂರ್ಯ ರಶ್ಮಿ ನಮ್ಮ ಚರ್ಮಕ್ಕೆ ಸ್ಪರ್ಷವಾದರೆ ನಮಗೆ ಮಿಟವಿನ್ ಡಿ ಜೀವಸತ್ವ ದೊರೆಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವನ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವೆ, ನಿಯಮಿತವಾಗಿ ವ್ಯಾಯಾಮ ಮಾಡದೇ ಇರುವುದು, ಬೆಳಗ್ಗೆ ಸೂರ್ಯನ ಕಿರಣಗಳಿಂದ ದೂರ ಉಳಿಯುವುದು ಸೇರಿದಂತೆ ನಮ್ಮಲ್ಲಿನ ಅನೇಕ ನ್ಯೂನ್ಯತೆ ಗಳಿಂದ ಮೂಳೆಗೆ ಸಂಬAಧಿಸಿದAತೆ ಎಆಸ್ಟಿಯೊ ಪೊರೋಸಿಸ್ ಎನ್ನುವ ಕಾಯಿಲೆ ಕಂಡುಬರು ತ್ತದೆ. ಮೈ ಕೈ ನೋವು, ಹೊಟ್ಟೆ ನೋವು, ಬೆನ್ನು ನೋವು ಸೇರಿದಂತೆ ಇತರೆ ಲಕ್ಷಣಗಳು ಕಂಡು ಬಂದರೆ ತಕ್ಷಣ ಮೂಳೆಯಲ್ಲಿ ಕನಿಖ ಸಾಂದ್ರತೆ ಪರೀಕ್ಷೆ ಮಾಡಿ ಕೊಳ್ಳಬೇಕು, ಹಮ್ಮೆ ಕಾಯಿಲೆ ಬಂದರೆ ಸಣ್ಣಪಟ್ಟ ಸಮಸ್ಯೆಗಳಾದಲೂ ಮೂಳೆ ಮುರಿತ ವಾಗುತ್ತವೆ, ತಕ್ಷಣಕ್ಕೆ ಮೂಳೆ ಜೋಡಣೆ ಯಾಗುವುದಿಲ್ಲ, ಪ್ಲೇಟ್ ಅಥವಾ ಸ್ಕ್ರೂ ಬಳಸಿ ಮೂಳೆ ಜೋಡಣೆ ಮಾಡಬೇಕಾತ್ತದೆ, ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿ ಖನಿಜ ಸಾಂದ್ರತೆ ಪರೀಕ್ಷೆಗೆ ಒಳಪಟ್ಟು ವೈದ್ಯರಿಂದ ಅಗತ್ಯ ಸಲಹೆ ಪಡೆದು ಕೊಂಡರು. ಶಿಬಿರದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಕೀಲು ಮತ್ತು ಮೂಳೆ ರೋಗ ವಿಭಾಗದ ತಜ್ಞ ವೈದ್ಯರಾದ ಡಾ.ಕಿರಣ್ ಕಾಳಯ್ಯ, ಡಾ. ರಮೇಶ್, ಡಾ.ವೀರಣ್ಣ, ಡಾ.ಶ್ರೀಧರ್, ಡಾ.ರವಿಕುಮಾರ್, ಡಾ.ರವಿಶಂಕರ್, ಡಾ.ರಮೇಶ್, ಡಾ.ನವೀನ್, ಡಾ.ಪ್ರಕಾಶ್, ಡಾ.ಅಂಕುಶ್, ಡಾ.ಸುನೀತ್ ಮತ್ತವರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಿದರು.