Friday, 22nd November 2024

Dr M C Sudhakar: ಅರೂರು ಬಳಿ ಮೆಡಿಕಲ್ ಕಾಲೇಜು ನಿರ್ಮಾಣದಿಂದ 300 ಕೋಟಿ ನಷ್ಟ: ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಮೆಡಿಕಲ್ ಕಾಲೇಜಿಗೆ ಬೇಕಾದ 20ಕರೆ ಗೂ ಮೀರಿದ ಸರ್ಕಾರಿ ಜಮೀನು ಇದ್ದರೂ ಸಹ 18 ಕಿ.ಮೀ. ದೂರ ಇರುವ ತಮ್ಮ ಊರು ಪೆರೇಸಂದ್ರಕ್ಕೆ ಸಮೀಪ ಅರೂರು ಬಳಿ ಮೆಡಿಕಲ್ ಕಾಲೇಜು ನಿರ್ಮಿಸುವ ಮೂಲಕ ಡಾ.ಕೆ.ಸುಧಾಕರ್ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ನಷ್ಟವುಂಟು ಮಾಡಿದ್ದಾರೆ. ಇದೇ ಇವರ ಅಭಿವೃದ್ಧಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: Dr M C Sudhakar: ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸಿನೊಂದಿಗೆ ಮುಂದುವರೆಯು ತ್ತಿರುವುದಕ್ಕೆ ಭಾರತದ ಸಂವಿಧಾನವೇ ಕಾರಣ- ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ನಗರದಿಂದ 18 ಕಿ.ಮಿ ದೂರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಅಗತ್ಯ ಏನಿತ್ತು. ನಗರ ಸಮೀಪವೇ ನಿರ್ಮಿಸಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದರೆ ಚಿಕ್ಕಬಳ್ಳಾಪುರ ಜನರಿಗೆ ಅನುಕೂಲ ವಾಗುತ್ತಿತ್ತು. ಯಾವ ಪೇಶೆಂಟು ಗಳು ಅಲ್ಲಿಗೆ ಹೋಗುತ್ತಾರೆ ಹೇಳಿ ನೋಡೋಣ? ಈಗ ನಿರ್ಮಾಣ ಆಗಿರುವ ಕಾಲೇಜಿನಿಂದ ಜನರಿಗೆ ಏನೂ ಪ್ರಯೋ ಜನವಿಲ್ಲ ಎಂದರು.

ಚಿಕ್ಕಬಳ್ಳಾಪುರ ಹೊರವಲಯದ ಚೊಕ್ಕಹಳ್ಳಿ ಬಳಿ ಸುಮಾರು 40 ಎಕರೆ ಸರ್ಕಾರಿ ಜಮೀನು ಇದೆ. ಇಲ್ಲಿ 20 ಎಕರೆ ಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಬಹುದಿತ್ತು. ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸ ಬಹುದಿತ್ತು. ಮೆಡಿಕಲ್ ಕಾಲೇಜು ಬಳಿ ಆಸ್ಪತ್ರೆ ನಿರ್ಮಿಸುವ ಅಗತ್ಯ ಇರುತ್ತಿರಲಿಲ್ಲ. ಇವರ ಸ್ವಾರ್ಥ ಮತ್ತು ತಪ್ಪು ನಿರ್ಧಾರದಿಂದಾಗಿ ಸರ್ಕಾರಕ್ಕೆ 300 ಕೋಟಿ. ರೂ. ನಷ್ಟವಾಗಿದೆ. ಇದನ್ನು ಕಟ್ಟಿಕೊಡುವವರು ಯಾರು ಎಂದು ಪ್ರಶ್ನಿಸಿದರು.

ಹೂವಿನ ಮಾರುಕಟ್ಟೆಗೆ ಇವರು ತೋರಿಸಿರುವ ಜಾಗ ಸೂಕ್ತವಾಗಿರಲಿಲ್ಲ. ಇದರಿಂದ ನಂದಿ ಕ್ರಾಸ್ ಬಳಿ 20 ಎಕರೆ ಸರ್ಕಾರಿ ಜಮೀನಿನಲ್ಲಿ ಉತ್ತಮ ಹೂವಿನ ಮಾರುಕಟ್ಟೆಯನ್ನು 4 ವರ್ಷದ ಒಳಗೆ ನಿರ್ಮಿಸಿ ಹೂವಿನ ಕೃಷಿಕರಿಗೆ ಮಾರಾಟಗಾರರಿಗೆ ಅನುಕೂಲ ಮಾಡಿಕೊಡಲಾಗುವುದು.ನಮ್ಮ ಯೋಜನೆಯನ್ನು ಹೂವಿನ ವ್ಯಾಪಾರಸ್ಥರು ಕೂಡ ಒಪ್ಪಿದ್ದಾರೆ ಎಂದರು.

ನಗರಸಭೆ ಚುನಾವಣೆ ಹಿಂದಿನ ದಿನ ಮತ್ತು ಚುನಾವಣೆಯ ದಿನ ಈತ ನಡೆದುಕೊಂಡ ರೀತಿ ಹೇಗಿತ್ತು ಎಂಬುದನ್ನು ಜನ ಗಮನಿಸಿದ್ದಾರೆ.ಏರ್ಪೋರ್ಟಿನಲ್ಲಿ ಖಾಸಗಿ ಬೌನ್ಸರ್‌ಗಳನ್ನು ಇಟ್ಟುಕೊಂಡು ಮಾಧ್ಯಮಕ್ಕೆ ಸುಳ್ಳು ಸುದ್ದಿ ಕೊಟ್ಟಿದ್ದು ಗೊತ್ತಿದೆ. ನಮ್ಮ ಸದಸ್ಯರನ್ನು ಹೈಜಾಕ್ ಮಾಡಿಕೊಂಡು ಹೋಗಿ ಬಲವಂತವಾಗಿ ಬೆಂಬಲಿಸುವಂತೆ ಮಾಡಿರುವುದು ನಮಗೆ ಗೊತ್ತಿದೆ.ಪೊಲೀಸರ ಮೇಲೆ ಲಘುವಾಗಿ ಮಾತಾಡುವುದು ತರವಲ್ಲ.

ವಿಧಾನ ಪರಿಷತ್ ಸದಸ್ಯರು ಚುನಾವಣೆಯಲ್ಲಿ ಮತಹಾಕಿದರು ಎಂದು ಬೊಬ್ಬೆ ಹಾಕುವ ಇವರು ವೈ.ಎ.ನಾರಾ ಯಣಸ್ವಾಮಿ ಅವರಿಂದ ಹೇಗೆ ಮತಹಾಕಿಸಿದರು.ಇವರು ಮಾಡಿದರೆ ಸರಿ ನಾವು ಮಾಡಿದರೆ ತಪ್ಪೇ? ಎಂದು ಪ್ರಶ್ನಿಸಿದರು.