Sunday, 24th November 2024

ಆರೋಗ್ಯ ಪರೀಕ್ಷೆಯಿಂದ ಭವಿಷ್ಯದ ಅಪಾಯ ತಪ್ಪಿಸಬಹುದು: ಡಾ.ಪರಮೇಶ್

ತುಮಕೂರು: ಗ್ರಾಮೀಣ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿರಂತರ ಆರೋಗ್ಯ ಪರೀಕ್ಷೆಗೆ ಒಳಗಾಗುವುದರಿಂದ ಭವಿಷ್ಯದ ಆರೋಗ್ಯ ಅಪಾಯ ಗಳನ್ನು ತಪ್ಪಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆ, ದೊಡ್ಡಸಾಗ್ಗೆರೆ ಗ್ರಾಪಂ,ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ವತಿಯಿಂದ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮೇ 27 ರಂದು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಪರೀಕ್ಷೆ ಹಾಗೂ ಉಚಿತ ಒಪಿಡಿ ಸೇವೆ ನೀಡುತ್ತಿದ್ದು ಮೆಡಿಕಲ್ ಕಾಲೇಜಿನ ಮೂಲಕ ವೈದ್ಯಕೀಯ ಸೇವೆ ವಿಸ್ತರಿಸುತ್ತಿದೆ ಎಂದರು.

ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ಧಗಂಗಾ ಅಸ್ಪತ್ರೆ ಶಿವಕುಮಾರ ಮಹಾ ಸ್ವಾಮೀಜಿಯವರ ಆಶೀರ್ವಾದದಿಂದ ಆರಂಭವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನರ ಮನೆ ಮನೆ ಬಾಗಿಲಿಗೆ ತಲುಪಿ ಆರೋಗ್ಯ ದಾಸೋಹ ನೀಡುತ್ತಿದ್ದು ಶ್ರೇಷ್ಠ ಸೇವೆಗೆ ಹೆಸರಾಗಿದೆ ಎಂದರು. ಇದೇ ವೇಳೆ ಗ್ರಾಮದ 200 ಕ್ಕೂ ಹೆಚ್ಚು ಜನರಿಗೆ 10ಕ್ಕೂ ಹೆಚ್ಚು ವಿಭಾಗಗಳಲ್ಲಿ ಆರೋಗ್ಯ ಪರೀಕ್ಷೆ ನಡೆಸಲಾಯಿತು.

ಆಸ್ಪತ್ರೆಯ ವೈದ್ಯರಾದ ಡಾ.ಅಪರೂಪ, ಡಾ.ಆದರ್ಶ್,  ಡಾ.ಮನಸ್ವಿ, ಡಾ.ಮಾನಸ,ಡಾ.ಮನೋಜ್ ಕುಮಾರ್, ಡಾ.ಕಾವ್ಯ, ಪಿಆರ್ ಓ ಕಾಂತರಾಜು,ಗ್ರಾಪಂ ಪಿಡಿಓ ಉಮೇಶ್, ಅಧ್ಯಕ್ಷ ರಾಮಣ್ಣ, ಮುಖಂಡ ವಿ.ಎನ್.ಮಂಜುನಾಥ್, ಸದಸ್ಯರಾದ ನಾಗೇಶ್,‌ನಾಗರಾಜು,ಹೆಚ್.ಎಂ.ಚಂದ್ರಯ್ಯ, ಮಾರ್ಕೆಟಿಂಗ್ ವಿಭಾಗದ ಶಿವಕುಮಾರ್, ಗ್ರಾಮಸ್ಥರು ಉಪಸ್ಥಿತರಿದ್ದರು.