ಕಲಬುರಗಿ: ಮಾಡ್ಯೂಲರ್ ಆಪರೇಷನ್ ಥಿಯೇಟರ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಪರಿಷತ್ ಸದಸ್ಯ ರವಿಕುಮಾರ್ (Parishad Member Ravikumar)ಆರೋಪ ಸತ್ಯಕ್ಕೆ ದೂರವಾದದ್ದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Minister Dr SharanPrakash Patil) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಕಂಪನಿ ಟೆಂಡರ್ ನಲ್ಲಿ ಭಾಗವಹಿಸಿಲ್ಲ. ಟೆಂಡರ್ ನಲ್ಲಿ ಪಾರ್ಟಿಸಿಪೇಟ್ ಮಾಡದೆ ಇದ್ದಾಗ ನಾವೇನು ಅವರ ಮನೆಗೆ ಹೋಗಿ ಟೆಂಡರ್ ಕೋಡಬೇಕಾ.? ಕೇರಳ ಕಂಪನಿ ಬಗ್ಗೆ ಯಾಕೆ ಅಷ್ಟು ಆಸಕ್ತಿ.? ಎಂದು ಪ್ರಶ್ನಿಸಿದ ಅವರು, ನಾಲ್ಕು ಜನ ಟೆಂಡರ್ ಹಾಕಿ ಮೂರು ಜನರನ್ನ ರಿಜೆಕ್ಟ್ ಮಾಡಿ ಒಬ್ಬರಿಗೆ ಕೊಟ್ಟಿದ್ದೇವೆ ಎಂದು ಹೇಳಿರೋದು ಸುಳ್ಳು. ನಾಲ್ಕು ಜನರ ಭಾಗವಹಿಸಿದ್ದರು. ಅದರಲ್ಲಿ ಅರ್ಹತೆ ಇಲ್ಲದ ಕಾರಣ ಇಬ್ಬರು ರಿಜೆಕ್ಟ್ ಆಗಿದೆ. ಇಬ್ಬರದ್ದು ಸ್ವೀಕಾರವಾಗಿದೆ. ಅದರಲ್ಲಿ ಎಲ್-1 ಅವರಿಗೆ ಟೆಂಡರ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿಗರು ಸುಳ್ಳು ಆರೋಪದ ಮೂಲಕ ಇಲಾಖೆಗೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಕೆಟಿಟಿಪಿ ಕಾಯ್ದೆಯಲ್ಲಿ ಉಲ್ಲಂಘನೆ ಆಗಿದೆ ಎನ್ನುವುದು ಮೊದಲು ಹೇಳಲಿ. ಸರಕಾರಕ್ಕೆ ಕೆಟ್ಟ ಹೆಸರು ತರಲು ಇದೊಂದು ಷಡ್ಯಂತ್ರ ನಡೆದಿದೆ. ಬಿಜೆಪಿಯವರು ಎಷ್ಟು ಹತಾಶರಾಗಿದ್ದಾರೆ ಅಂದರೆ, ಅಧಿಕಾರ ಹೊದ ಮೇಲೆ ನೀರಿನಿಂದ ಹೊರಬಂದ ಮೀನಿನ ಹಾಗೇ ಆಗಿದ್ದಾರೆ ಎಂದು ಟಾಂಗ್ ಕೊಟ್ಟರು.
ಇನ್ನೂ, ಬಿಜೆಪಿ ಕಾಲದ ಕೋವಿಡ್ ಅವ್ಯವಹಾರ ಪ್ರಕರಣ ವರದಿ ವಿಚಾರವಾಗಿ ಮಾತನಾಡಿ ಅವರು, ಜಸ್ಟಿಸ್ ಗುನ್ನಾ ಕಮಿಟಿ ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಿ ಉನ್ನತ ಸಮಿತಿ ಮಾಡಿ ಕ್ರಮ ತೆಗೆದುಕೊಳ್ಳಲು ಹೇಳಿದ್ದಾರೆ. ಪ್ರಾಥಮಿಕವಾಗಿ ಗಮನಿಸಿದರೆ, ಅದರಲ್ಲಿ ಬಹಳಷ್ಟು ಅವ್ಯವಹಾರ ಆಗಿದೆ ಕಂಡು ಬಂದಿದೆ. ಸುಮಾರು 500 ಕೋಟಿಗಿಂತಲು ಜಾಸ್ತಿ ಅವ್ಯವಹಾರ ಆಗಿದೆ ಎಂದು ಪ್ರಾಥಮಿಕವಾಗಿ ಹೇಳಿದ್ದಾರೆ. ಇದು ಇನ್ನೂ ಹೆಚ್ಚಾಗಬಹುದು. ಡಿಟೇಲ್ ವರದಿ ಏನ್ ಬರುತ್ತೆ ನೋಡಬೇಕು. ಹಾಗಾಗಿ ಬಿಜೆಪಿಯವರು ತಮ್ಮ ಹೂಳು ಮುಚ್ಚಿಕೊಳ್ಳಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
*
ದೇವಲಾಯಗಳನ್ನ ಮುಜರಾಯಿ ಇಲಾಖೆಯಿಂದ ಕೈ ಬಿಡುವ ವಿಚಾರ ಜನರ ಭಾವನೆಗಳ ವಿಷಯವಾಗಿದೆ. ಜನರ ಅಭಿಪ್ರಾಯ ತಕ್ಕಂತೆ ನಡೆದುಕೊಳ್ಳುವ ಸರಕಾರ ನಮ್ಮದು. ಹೀಗಾಗಿ, ಸಾರ್ವಜನಿಕರ ಅಭಿಪ್ರಾಯ ಬೇರೆ ಇದ್ದರೆ, ಅದರ ಬಗ್ಗೆ ಪರಿಶೀಲಿಸಲಾಗುತ್ತೆ. ಕಾನೂನಾತ್ಮಕವಾಗಿ ಇರಬೇಕು. ಜನರ ಭಾವನೆಗಳಿಗೂ ಬೇಲೆ ಕೊಡಬೇಕು.
ಡಾ. ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಇದನ್ನೂ ಓದಿ: Sharanabasappa Darshanapura: ಕಲ್ಯಾಣ ಕರ್ನಾಟಕ ಉತ್ಸವ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಂದ ಧ್ವಜಾರೋಹಣ