Sunday, 15th December 2024

ಡಾ.ತನುಶ್ರೀ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ: ಪಕ್ಷೇತರ ಅಭ್ಯರ್ಥಿಯಾಗಿ ನಿಖರ ಸ್ಪರ್ಧೆ

ಮಾನ್ವಿ: ಹಲವಾರು ದಿನಗಳಿಂದ ಕ್ಷೇತ್ರದ ಜನರಲ್ಲಿ ಬಾರಿ ಗೊಂದಲ ಮೂಡಿಸಿದ್ದ ಪಕ್ಷೇತರ ಅಭ್ಯರ್ಥಿ ಡಾ ತನುಶ್ರೀ ( ಎಂ ಈರಣ್ಣನವರ ಸೊಸೆ ) ಅವರ ಜಾತಿ ಪ್ರಮಾಣ ಪತ್ರವನ್ನು ಬೀದರ್ ಜಿಲ್ಲಾಧಿಕಾರಿಗಳು ರದ್ದು ಮಾಡಿದ ವಿಷಯಕ್ಕೆ ಸಂಬಂಧಿಸಿ ದಂತೆ ಎಂ.ಈರಣ್ಣ ಇವರು ಹೈಕೋರ್ಟಿನ ಮೆಟ್ಟಿಲೇರಿ ಅದಕ್ಕೆ ಅಂತಿಮ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಈ ಬಾರಿಯೂ ಕೂಡ ಡಾ ತನುಶ್ರೀ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಅನುಕೂಲವಾಗಿದ್ದು ನಾಳೆ ದೊಡ್ಡ ಮಟ್ಟದ ಕಾರ್ಯಕರ್ತರ ಜೊತೆಗೆ ಅಧಿಕೃತ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು ಇದರಲ್ಲಿ ಯಾವುದೇ ಅನುಮಾನ ಬೇಡವೇಂದು ಎಂ ಈರಣ್ಣ ನಮ್ಮ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.