ತುಮಕೂರು: ಕಲಾಸ್ಪೂರ್ತಿ ಫೌಂಡೇಷನ್, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಿ. ೩೧ ರಂದು ಕನ್ನಡ ರಾಜ್ಯೋತ್ಸವ ಹಾಗೂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ನಗರದ ಸರಸ್ವತಿಪುರಂನ ವಿದ್ಯಾನಿಕೇತನ ಹೈಸ್ಕೂಲ್ ಬಳಿಯ ಧಾರಣಿ ಆರ್ಕೇಡ್‌ನಲ್ಲಿ ಮಧ್ಯಾಹ್ನ ೩ ರಿಂದ ಸಂಜೆ ೬ ರವರೆಗೆ ಮೈಸೂರು ರಮಾನಂದ್ ರಚನೆ, ನಿರ್ದೇಶನದಲ್ಲಿ ೨೫ ಸ್ವೀಟ್ ಕಿಸ್ಸಸ್, ಕುಡಿತಾಯಣ, ಆಸ್ಪತ್ರೆ ಅವಾಂತರ ನಾಟಕಗಳು ನಡೆಯಲಿದೆ.
ಮೇಯರ್ ಪ್ರಭಾವತಿ ಸುಧೀಶ್ವರ್ , ರಂಗಕರ್ಮಿ ಮೈಸೂರು ರಮಾನಂದ್, ಜೆಡಿಎಸ್ ಮುಖಂಡ ನರಸೇಗೌಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಟೂಡ ಮಾಜಿ ಸದಸ್ಯ ಪ್ರತಾಪ್, ಶಿರಾ ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್, ಕೊರಟಗೆರೆ ತಾಲೂಕು ಸಹಾಯಕ ನಿರ್ದೇಶಕ ನಾಗರಾಜು, ಪಶು ಸಂಗೋಪನೆ ಇಲಾಖೆ ಸೂಪರಿಡೆಂಟ್ ಅಜಯ್ ಕುಮಾರ್, ಹೆಬ್ಬೂರು ಪ್ರಥಮ ದರ್ಜೆ ಗುತ್ತಿಗೆದಾರರ ಪುನೀತ್, ಸುರ್ವಣ ಕರ್ನಾಟಕ ಮಾನವ ಹಕ್ಕು ಸಮಿತಿ ರಾಜ್ಯಾಧ್ಯಕ್ಷ ಸಯ್ಯದ್ ಅಜ್ಮಲ್ ಪಾಷಾ, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆ ರಾಜ್ಯಾಧ್ಯಕ್ಷ ಸತೀಶ್, ಹಾಸ್ಯ ನಟ ಟಿ.ಆರ್. ಸಂಜು, ವಿಶ್ವವಾಣಿ ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಭಾಗವಹಿಸಲಿದ್ದಾರೆ.
Read E-Paper click here