Thursday, 12th December 2024

ಬರಮುಕ್ತ ನಾಡನ್ನಾಗಿಸು: ವಿಜಯೇಂದ್ರ ಪ್ರಾರ್ಥನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರಲ್ಲದೆ, ತಾಯಿಯ ಆಶೀರ್ವಾದ ಪಡೆದುಕೊಂಡರು.

ಗೋ ಮಾತೆಗೆ ನೀರುಣಿಸುವ ಮೂಲಕ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಉಂಟಾಗಿರುವ ಹಾಹಾಕಾರವನ್ನು ದೂರವಾಗಿಸಿ ನಾಡಿನ ಜಲ ಸಂಪತ್ತು ವೃದ್ಧಿಸುವಂತೆ ಹಾಗೂ ರೈತ ಬಂಧುಗಳಿಗೆ ಸಾಂಕೇತಿಕವಾಗಿ ನೇಗಿಲು ನೀಡಿ ಗೌರವಿಸುವ ಮೂಲಕ ರಾಜ್ಯ ವನ್ನು ಬರಮುಕ್ತ ನಾಡನ್ನಾಗಿಸು ಎಂದು ಪ್ರಾರ್ಥನೆ ಸಲ್ಲಿಸಿದರು.

ಚಾಮರಾಜನಗರ ಬಿಜೆಪಿ ಲೋಕಸಭಾ ಅಭ್ಯರ್ಥಿ ಎಸ್.ಬಾಲರಾಜ್, ಮಾಜಿ ಸಚಿವ ಎಸ್.ಎ. ರಾಮದಾಸ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ಆರ್ ರಘು ಕೌಟಿಲ್ಯ, ಜಿಲ್ಲಾ ಅಧ್ಯಕ್ಷರಾದ ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್ ಕುಮಾರ್, ಎಲ್.ಆರ್ ಮಹದೇವಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.