Thursday, 12th December 2024

ರೆಡ್‌ಕ್ರಾಸ್ ಸಂಸ್ಥೆ ರಕ್ತ ಭಂಡಾರ ಉದ್ಘಾಟನೆ: ಡಾ.ಬಸನಗೌಡ

ರಾಯಚೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ರಕ್ತ ಭಂಡಾರವನ್ನು ಜು.1 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೆಡ್‌ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ.ಪಿ.ಬಸನಗೌಡ ಪಾಟೀಲ್‌ ಹೇಳಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ರಕ್ತ ದೊರಕಿಸುವ ಉದ್ದೇಶವನ್ನು ಹೊಂದ ಲಾಗಿದೆ. ರಕ್ತದಾನಿಗಳು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ರಕ್ತ ಉತ್ಪಾದನೆ ಮಾಡುವ ವಸ್ತುವಲ್ಲ. ದಾನಿಗಳ ನೀಡಿದಲ್ಲಿ ರೋಗಿಯನ್ನು ಉಳಿಸಲು ಸಾಧ್ಯ ವಾಗಲಿದೆ. ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ಪೂರೈಸಲಾಗುವುದು ಎಂದರು.

ಭಾರತ ಸೇವಾದಳ ಜಿಲ್ಲಾ ಸಂಘಟಕ ವಿದ್ಯಾಸಾಗರ ಚಿಣಮಗೇರಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಯುವ ರೆಡ್‌ ಕ್ರಾಸ್ ಘಟಕಗಳು ಇದ್ದು, ಪ್ರತಿ ವರ್ಷವು ರಕ್ತದಾನ ಶಿಬಿರಗಳನ್ನು ನಡೆಸಿ ರಿಮ್ಸ್ ಆಸ್ಪತ್ರೆಗೆ ರಕ್ತ ನೀಡಲಾಗುತಿತ್ತು. ಈ ವರ್ಷದಿಂದ ರೆಡ್‌ ಕ್ರಾಸ್ ಸಂಸ್ಥೆಯ ರಕ್ತ ಭಂಡಾರಕ್ಕೆ ರಕ್ತ ನೀಡಲಾಗುವುದು ಎಂದರು.

ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಅತ್ಯುತ್ತಮ ಕಾರ್ಯವನ್ನು ಗುರುತಿಸಿ ಎರಡು ಭಾರೀ ಪ್ರಶಸ್ತಿಗೆ ಭಾಜನವಾಗಿದೆ. ತುರ್ತು ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಜನರ ನೆರವಿಗೆ ಬರಲಿದೆ ಎಂದರು. ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ರೋಗಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ರಕ್ತ ಭಂಡಾರದಿಂದ ನೀಡಲಾಗು ವುದು ಎಂದರು. ಈ ಸಂದರ್ಭದಲ್ಲಿ ಸಂಕೇತ ಸೇರಿದಂತೆ ಅನೇಕರಿದ್ದರು.