Thursday, 12th December 2024

ಕನ್ನಡ ಪ್ರೇಮ ಮೆರೆದ ಬಸ್ ಚಾಲಕ

ತುಮಕೂರು: ತುಮಕೂರು ವಿಭಾಗದ ಚಾಲಕರಾದ  ಚಿದಾನಂದ ಅವರು ತಮ್ಮ ಸ್ವಂತ ಖರ್ಚಿನಿಂದ ಸಂಸ್ಥೆಯ ಬಸ್ಸನ್ನು ಕನ್ನಡಮಯವನ್ನಾಗಿಸಿ, ಕನ್ನಡ ಪ್ರೇಮ ಮೆರೆದಿದ್ದಾರೆ.
ಬಸ್‌ನಲ್ಲಿ ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ವಿಜಯನಗರದ ಅರಸರು, ಕನ್ನಡದ ಸಂತರು ಹೀಗೆ ಪ್ರಮುಖರ ಭಾವಚಿತ್ರ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟವರ ವಿವರವಾದ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿತ್ತು.
ಬಣ್ಣಬಣ್ಣದ ಬಲೂನ್‌ಗಳಿಂದ ಬಸ್‌ ಅಲಂಕರಿಸಲಾಗಿದ್ದು,  ಬಸ್ ಒಳಗಡೆ ಎಲ್ಲಿ ನೋಡಿ ದರೂ ಕನ್ನಡಮಯ. ಕನ್ನಡ ನಾಡು, ನುಡಿ ಮತ್ತು ಭಾಷೆಗಾಗಿ ದುಡಿದ ಕವಿಗಳು, ಕಲಾವಿದರು, ವೀರಯೋಧರು, ಕನ್ನಡದ ಮೇರು ನಟರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರ ಭಾವಚಿತ್ರಗಳನ್ನು ಹಾಕಲಾಗಿತ್ತು.
ಚಾಲಕರ  ಕನ್ನಡ-ಸಂಸ್ಥೆಯ ಮೇಲಿರುವ ಅಪಾರ ಪ್ರೀತಿ, ಅಭಿಮಾನ, ವಿಶೇಷ ಕಾಳಜಿ ಯನ್ನು ಗಮನಿಸಿ  ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ  ಗೌರವಿಸಿ ಅಭಿನಂದಿಸಿದರು.