ಮಾನ್ವಿ: ಪಟ್ಟಣದ ಮುಕ್ತಗುಚ್ಛ ಕಲ್ಮಠ ಮಾನ್ವಿ ಮತ್ತು ಹರವಿಯ ಹಿರಿಯ ಶ್ರೀಗಳಾದ ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು ವ.೭೬ ವರ್ಷ ಶುಕ್ರವಾರ ಲಿಂಗೈಕ್ಯರಾಗಿದ್ದು ಶ್ರೀ ಮಠದಲ್ಲಿ ಅವರ ಪಾರ್ಥಿವ ಶಾರಿರದ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಗಿದೆ.
ಕಲ್ಮಠದ ಕಿರಿಯ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು, ಹಾಲ್ವಿಯ ಶ್ರೀ ಅಭಿನವ ಮಹಾಂತಸ್ವಾಮಿಗಳು, ಯದಲ ದೊಡ್ಡಿಯ ಮಹಾಂತಲಿ0ಗಸ್ವಾಮಿಗಳು, ಶ್ರೀಸದಾಶಿವ ಮಹಾಸ್ವಾಮಿಗಳು. ಮೈಸೂರಿನ ನಿರಂಜನ ಮಹಾಸ್ವಾಮಿಗಳು, ಬಳಗಾನೂರಿನ ಶ್ರೀ ಸಿದ್ದಬಸವ ಮಹಾಸ್ವಾಮಿಗಳು ಬಸವಭೂಷಣ ಸ್ವಾಮಿಗಳು,ಹಚ್ಚೋಳ್ಳಿ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಮಾಟಮಾರಿ, ಸುಲ್ತಾನಪುರ, ಸೇರಿದಂತೆ ನಾಡಿನ ವಿವಿಧ ಮಠಗಳ ಪೂಜ್ಯರು ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಸಚಿವ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್, ಹಂಪಯ್ಯಸಾಹುಕಾರ್, ತಿಮ್ಮರೆಡ್ಡಿ ಭೋಗವತಿ, ಸೇರಿದಂತೆ ಕಲ್ಮಠ ಶಿಕ್ಷಣ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಶ್ರೀಗಳ ದರ್ಶನ ಪಡೆಯಲು ಸಾವಿರಾರು ಶ್ರೀಮಠದ ಭಕ್ತರು ಆಗಮಿಸುತ್ತಿದ್ದಾರೆ. ಶನಿವಾರ ಶ್ರೀಗಳ ಕ್ರಿಯಾ ಸಮಾಧಿ ಶ್ರೀಮಠದ ಪರಂಪರೆಯ ವಿಧಿವಿಧಾನಗಳ ಮೂಲಕ ನಡೆಯಲಿದೆ ಎಂದು ಮಠದ ಮೂಲಗಳಿಂದ ತಿಳಿಸ ಲಾಗಿದೆ.
ಶ್ರೀಗಳು ಮುಕ್ತಗುಚ್ಛ ಕಲ್ಮಠದ ಹಿರಿಯ ಶ್ರೀಗಳಾದ ಡಾ.ಶಿವಮೂರ್ತಿ ಶಿವಚಾರ್ಯ ಮಹಾ ಸ್ವಾಮಿಗಳು ಪೀಠರೋಹಣ ನಂತರ ಈ ಭಾಗದಲ್ಲಿ ಧಾರ್ಮಿಕ ಹಾಗೂ ಶೈಕ್ಷಣ ಕ ಕ್ಷೇತ್ರಗಳ ಅಭಿವೃದ್ದಿಗಾಗಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದು ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣ ಕವಾಗಿ ಅಭಿವೃದ್ದಿ ಹೊಂದಲ್ಲಿ ಎನ್ನುವ ಉದ್ದೇಶದಿಂದ ಕಲ್ಮಠದ ಹಿರಿಯ ಶ್ರೀಗಳಾದ ಲಿಂ.ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳ ಹೆಸರಿನಲ್ಲಿ ಪ್ರಾಥಮಿಕ ಹಂತದಿ0ದ ವೈದ್ಯಾಕೀಯ ಶಿಕ್ಷಣದ ಹಂತದವರೆಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ ಹಾಗೂ ಜನರಲ್ಲಿ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಮೂಡಿಸುವುದಕ್ಕಾಗಿ ಹಾಗೂ ಪಟ್ಟಣದಲ್ಲಿ ವಿವಿಧ ಜಾತಿ,ಮತ,ಪಂಥಗಳ ಜನರಲ್ಲಿ ಸೌಹಾರ್ಧಭಾವನೆ ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ಕೋಟಿಲಿಂಗಗಳುಳ್ಳ ಧ್ಯಾನ ಮಂದಿರ ಹಾಗೂ ಶ್ರೀ ಮಠಗಳ ಪೂಜ್ಯರಿಗಾಗಿ ,ಗುರುಗಳಿಗಾಗಿ ಗುರುಮನೆಯನ್ನು ನಿರ್ಮಾಣ ಮಾಡುವ ಮೂಲಕ ಕೋಮುಸೌಹಾರ್ಧತೆಯ ಭಾವನೆಯನ್ನು ಹುಟ್ಟುಹಾಕಿದ ಸಂತರಾಗಿದ್ದರು.
ಪ್ರತಿವರ್ಷ ದಸಾರ ಮಹೋತ್ಸವ ಹಾಗೂ ಶಿವರಾತ್ರಿಯ ಗಾರಿಗೆ ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಜ್ಞಾನದ ಹರಿವನ್ನು ಮೂಡಿಸಿದರು.
ಕಳೆದ ತಿಂಗಳು ಶಿವರಾತ್ರಿಯಂದು ಧ್ಯಾನಮಂದಿರದಲ್ಲಿ ಶಿವರಾತ್ರಿಯ ಗಾರಿಗೆ ಜಾತ್ರೆಯನ್ನು ಶ್ರೀ ಮಠದ ವತಿಯಿಂದ ವೈಭವಪೂರ್ಣವಾಗಿ ಆಚಾರಿಸಿದನ್ನು ಭಕ್ತರು ಸ್ಮರಿಸಿಕೊಳ್ಳುತ್ತಾರೆ.