Friday, 13th December 2024

ಕುಡಿದು ಕರ್ತವ್ಯಕ್ಕೆ ಹಾಜರಾಗುತ್ತಿದ್ದ ವೈದ್ಯ: ಎತ್ತಂಗಡಿ

ಪಾವಗಡ :ತಾಲೂಕಿನ ಕೊಟಗುಡ್ಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ.ಹೆಚ್.ಓ.ಮಂಜುನಾಥ್ ಗುರುವಾರ ಬೇಟಿ ನೀಡಿ ಮಾಹಿತಿ ಪಡೆದು ತಕ್ಷಣವೇ ಡಾ.ರಾಮಾಂಜಿನಪ್ಪ ವೈದ್ಯರಿಗೆ ನಾಗಲಮಡಿಕೆ ಹೋಬಳಿಯ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ನಂತರ ಸ್ಥಳೀಯರ ಅವರಿಗೆ ಬೇರೆಡೆಗೆ ವರ್ಗಾವಣೆ ಮಾಡುವ ಬದಲು ಕೆಲಸದಿಂದ ವಜಾ ಮಾಡಬೇಕು ಇಲ್ಲದಿದ್ದರೆ ಇಲ್ಲಿ ನಡೆದು ಕೊಂಡ ರೀತಿಯಲ್ಲಿ  ಅಲ್ಲಿ ಸಹ ನಡೆದುಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಸ್ಥಳೀಯರು ಡಿಎಚ್ಒ ಮಂಜುನಾಥ್ ಅಉ  ತಿಳಿಸಿದರು.
ನಂತರ ಡಿಹೆಚ್ಓ ಮಂಜುನಾಥ್ ಮಾತನಾಡಿ,   ತಾಲೂಕು ವೈದ್ಯಾಧಿಕಾರಿಗಳು ಹಾಗೂ ಡಾಕ್ಟರ್ ರಾಮಾಂಜಿನಪ್ಪ ಅವರಿಂದ ಮಾಹಿತಿ ಪಡೆದಿದ್ದೇನೆ ಹಾಗೂ ಆಸ್ಪತ್ರೆಯ ಸುತ್ತ ಮುತ್ತಲಿನ ವ್ಯವಸ್ಥೆ ಬಗ್ಗೆ ಸಹ  ಗಮನಿಸಿ ವಾರದ ಒಳಗೆ ಸ್ವಚ್ಛತೆ ಹಾಗೂ ಸಮಸ್ಯೆಗಳು ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿಸಿ ಮಾಹಿತಿ ನೀಡಬೇಕೆಂಬುದಾಗಿ ಸೂಚನೆ ನೀಡಿದ್ದೇನೆ.
ಈಗಾಗಲೇ ಬುಧವಾರ ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ  ವಿಷಯವಾಗಿ ಪತ್ರಿಕೆಯಲ್ಲಿ ವರದಿಯಾಗಿದೆ  ಮತ್ತು ಆರೋಗ್ಯ ಸಚಿವರ ಗಮನಕ್ಕೆ ಸಹ ಹೋಗಿದೆ ಹಾಗಾಗಿ  ರಾಮಾಂಜಿನಪ್ಪನಿಂದ ಮಾಹಿತಿ ಪಡೆದಿದ್ದೆನೆ ಈ ಬಗ್ಗೆ ವರದಿ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ನಂತರ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಸದ್ಯಕ್ಕೆ ತಿರುಮಣಿ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ರಾಮಾಂಜಿನಪ್ಪರನ್ನು ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯ ಕೇಂದ್ರದ ತನಿಖಾಧಿಕಾರಿ ಡಾ. ರೇಖಾ. ತಾಲೂಕು ವೈದ್ಯಾಧಿಕಾರಿ ತಿರುಪತಯ್ಯಹಾಗೂ ಕೋಟಗುಡ್ಡ ಗ್ರಾಮಸ್ಥರು ಇದ್ದರು.