ಬೆಂಗಳೂರು : ಬದುಕಿನ ಸಂಧ್ಯಾಕಾಲದಲ್ಲಿರುವ ಹಿರಿಯ ಚೇತನರು ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಸಾರ್ಥಕ ಜೀವನ ನಡೆಸಬೇಕೆಂದು ಹಾಸ್ಯ ಸಾಹಿತಿ ಎಚ್ ದುಂಡಿರಾಜ್ ಅಭಿಪ್ರಾಯಪಟ್ಟರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ನಿವೃತ್ತರ ಸ್ನೇಹಕೂಟದ ವತಿ ಯಿಂದ ನಗರದ ಶೇಷಾದ್ರಿಪುರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಬ್ಯಾಂಕಿನ 113ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ ‘ಹಾಸ್ಯ ಇಲ್ಲದ ಕಾರ್ಯಕ್ಷೇತ್ರ, ಸ್ಥಳವಿಲ್ಲ, ಹಾಸ್ಯಪ್ರಜ್ಞೆ ಇರುವವರಿಗೆ ಎಲ್ಲಾ ಸನ್ನಿವೇಶ, ಎಲ್ಲಾ ಸ್ಥಳಗಳಲ್ಲೂ ಹಾಸ್ಯ ಕಂಡು ಬರುತ್ತದೆ. ಮೂಲತಃ ಬ್ಯಾಂಕ್ ನೌಕರನಾಗಿದ್ದ ನಾನು, ಬ್ಯಾಂಕ್ ಕೆಲಸದ ಒತ್ತಡ, ಜಂಜಾಟದಿಂದ ಸ್ವಲ್ಪದಿನ ದೂರವಾಗಲೆಂದು ಪ್ರಯಾಣಕ್ಕೆ ಹೋರಟು ರೈಲು ಹತ್ತಿ ಕೂತರೆ ರೈಲೂ ಸಹ ಚೆಕ್ ಬುಕ್ ಚೆಕ್ ಬುಕ್ ಎನ್ನುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿ, ನೆರೆದ ಜನತೆಯನ್ನು ನಗೆಗಲಲ್ಲಿ ತೇಲುವಂತೆ ಮಾಡಿದರು.
ಜಡತ್ವದ ಬದುಕಿನಲ್ಲಿ ನಗು ಕಣ್ಮರೆಯಾಗುತ್ತಿದೆ, ಈ ನಿಟ್ಟಿನಲ್ಲಿ ಹಾಸ್ಯಮಯ ಜೀವನಕ್ಕೆ ಹೊಂದಿಕೊಳ್ಳ ಬೇಕು, ಇದರಿಂದಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಹಾಸ್ಯದ ಮೂಲಕವೇ ಸಮಾಜದ ಅಂಕುಡೊಂಕು ಗಳನ್ನು ತಿದ್ದುವ ಕೆಲಸವಾಗಬೇಕು ಎಂದು ಪ್ರತಿಪಾದಿಸಿದರು.:
ಸೆಂಟ್ರಲ್ ಬ್ಯಾಂಕ್ ನ ನಿವೃತ್ತ ಮುಖ್ಯ ಮಹಾಪ್ರಬಂಧ ಕರಾದ ಬಿ.ಎನ್.ಎಸ್.ರತ್ನಾಕರ್ ಮಾತನಾಡಿ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ ದೇಶದ ಪ್ರಪ್ರಥಮ ಸ್ವದೇಶೀ ಬ್ಯಾಂಕ್ ಆಗಿದ್ದು, ಗ್ರಾಹಕರ ಹಿತಕ್ಕಾಗಿ ಉಳಿತಾಯ ಖಾತೆ, ಸುಭದ್ರ ಕಪಾಟುಗಳ ಸೌಲಭ್ಯ, ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಪ್ರಪ್ರಥಮ ವಾಗಿ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಚಯಿಸಲು ಬಯಸುವ ಮೂಲಭೂತ ಬದಲಾವಣೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಬ್ಯಾಂಕ್ ನ ಅಸ್ಮಿತೆಯನ್ನು ಉಳಿಸಲು ಮತ್ತು ಇನ್ನಷ್ಟು ಅಭಿವೃದ್ಧಿ ಹೊಂದಲು ನಿವೃತ್ತ ಸಿಬ್ಬಂದಿಗಳು ಪ್ರಸ್ತುತ ಆಡಳಿತ ಮಂಡಳಿ ಯೊಂದಿಗೆ ಕೈಜೋಡಿಸಬೇಕು ಎಂದರು.
ನಿವೃತ್ತ ಸಹಾಯಕ ಮಹಾ ಪ್ರಬಂಧಕರಾದ ಎಚ್ ಎಸ್ ಸುಬ್ರಮಣ್ಯ ಮಾತನಾಡಿ ‘1911ರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಸ್ವರಾಬ್ಜಿ ಫೋಚ್ಕನ್ ವಾಲಾ ರವರು ಬ್ಯಾಂಕ್ ನ ಏಳಿಗೆಗಾಗಿ ಪಟ್ಟ ಪರಿಶ್ರಮ, ಎದುರಿಸಿದ ಸವಾಲುಗಳು, ಅವುಗಳ ಪರಿಹಾರಕ್ಕಾಗಿ ಅವರು ಮಾಡಿದ ತ್ಯಾಗ ನಿಜಕ್ಕೂ ಅವಿಸ್ಮರಣೀಯ. ಅವರ ದೂರದೃಷ್ಡಿಯ ಫಲವಾಗಿ ಸೆಂಟ್ರಲ್ ಬ್ಯಾಂಕ್ ಇಂದು ದೇಶದಲ್ಲೇ ಪ್ರಮುಖ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದು, ಸಹಸ್ರಾರು ಟಕುಟುಂಬಗಳ ಬದುಕಿಗೆ ಆಸರೆಯಾಗಿದೆ. ಅಂತಹ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಸ್ಮರಿಸುವುದು ನಮ್ಮ ಆಧ್ಯಕರ್ತವ್ತ ಎಂದು ಭಾವಿಸುತ್ತೇನೆ.
ನಿವೃತ್ತ ನೌಕರರು ಎಲ್ಲಿಯೂ ಸಹ ಸಂಘಟನಾತ್ಮಕ ವಾಗಿ ಒಗ್ಗೂಡು ವುದು ವಿರಳ ಆದರೆ ಸೆಂಟ್ರಲ್ ಬ್ಯಾಂಕ್ ನಿವೃತ್ತ ನೌಕರರು ನಿವೃತ್ತಿಯ ನಂತರವೂ ಸಹ
ಸುಸಂಘಟಿತರಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸು ವುದು, ಸಂಕಷ್ಟದಲ್ಲಿ ಇರುವ ನಿವೃತ್ತ ನೌಕರರಿಗೆ ಸಹಕಾರ ನೀಡುವಂತಹ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗೆ ಮಾದರಿ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವರಾಬ್ಜಿ ಪೋಚ್ಕನ್ ವಾಲ ರವರ ಜೀವನ ಕುರಿತ ರಸಪ್ರಶ್ನೆ ಕಾರ್ಯಕ್ರಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆ ಯಾದ ಜೀವನ ಸಾರ್ಥಕತೆ ಸಂಸ್ಥೆಯ ವತಿಯಿಂದ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅಂಗಾಂಗ ದಾನದ ನೋಂದಣಿ ಪ್ರಕ್ರಿಯೆ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಾದೇಶಿಕ ಉಪ ಮುಖ್ಯಸ್ಥ ಪಿ.ಕೆ.ದಾಸ್, ಸ್ನೇಹಕೂಟದ ಪದಾಧಿಕಾರಿ ಗಳಾದ ಪಿ.ಬಾಲಕೃಷ್ಣ, ಟಿ ಆರ್ ಅನಂತಮೂರ್ತಿ, ಎನ್.ಶ್ರೀಕಾಂತ್, ಬಿ.ಕೆ.ಭಾಸ್ಕರ್, ಜಿ ಎನ್ ಉಮಾ ಮಹೇಶ್ವರ, ಅರುಣಾ ಪಾಟೀಲ್, ವಿ.ಟಿ.ಮಾಲಿನಿ, ಜಯಲಕ್ಷ್ಮಿ ಮೋಹನ್, ರವಿಕುಮಾರ್, ಗಣೇಶ್ ಪ್ರಸಾದ್ ಸೇರಿದಂತೆ ನಿವೃತ್ತ ಸೆಂಟ್ರಲೈಟ್ ಸ್ನೇಹಿತರು ಉಪಸ್ಥಿತರಿದ್ದರು.