ತಿಪಟೂರು : ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಚಟುವಟಿಕೆಗಳು ವ್ಯಕ್ತಿತ್ವ ನಿರ್ಮಾಣ ಮಾಡುವ ಜೊತೆಗೆ ಜೀವನ ನಿರ್ವಹಣೆ ಯನ್ನು ಕಲಿಸಿಕೊಡುತ್ತವೆ ಎಂದು ಶಿವಮೊಗ್ಗದ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನಿಸ್ಟಿಟ್ಯೂಟ್‌ನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅರ್ಚನ ಭಟ್ ತಿಳಿಸಿದರು.
ನಗರದ ಕಲ್ಪತರು ಸಭಾಂಗಣದಲ್ಲಿ ಗುರುವಾರ ಕಲ್ಪತರು ವಿದ್ಯಾಸಂಸ್ಥೆಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿ ಪಠ್ಯದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎನ್.ಸಿ.ಸಿ., ಎನ್.ಎಸ್.ಎಸ್.ಗಳಲ್ಲಿ ಭಾಗವಹಿಸುವಿಕೆ ಯಿಂದ ಜೀವನದಲ್ಲಿ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ. ಶಿಕ್ಷಣದ ನಂತರದಲ್ಲಿಯೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರಲು ಪಠ್ಯೇತರ ಚಟುವಟಿಕೆಗಳು ಸಹಕಾರಿ ಆಗಿವೆ. ನೂತನ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟು ವಟಿಕೆಯೂ ಕಡ್ಡಾಯ ವಾಗಿದ್ದು ಉತ್ತಮ ಜೀವನ ನಿರ್ವಹಣೆ ಸಹಕಾರಿಯಾಗಲಿವೆ. ವಿದ್ಯಾರ್ಥಿ ದಿಸೆಯ ಗೊಂದಲಗಳಿ0ದ ದೂರ ಉಳಿದು ಅಲೋಚನೆ ಮಾಡಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ. ಪೊಷಕರು ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದ ಸ್ಥಿತಿಗತಿಗಳ ಪರಿಚಯ ಮಾಡು ವುದು ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹದಲ್ಲಿ ಇರುವ ವಿದ್ಯಾರ್ಥಿಗಳು ಅದರಿಂದ ಹೊರಬಂದು ವಿದ್ಯಾರ್ಥಿ ಜೀವನದ ಮೌಲ್ಯ ಅರಿಯುವ ಅಗತ್ಯವಿದೆ ಎಂದರು.
ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಜಿ.ಸುಧಾಕರ್ ಮಾತನಾಡಿ ಸುಧೀರ್ಘವಾಗಿ ೬೦ ವರ್ಷ ಕಾಲೇಜನ್ನು ನಡೆಸಿ ಕೊಂಡು ಬಂದಿದ್ದು, ಆಡಳಿತ ಮಂಡಳಿ ನಿರ್ವಹಣೆ ಉತ್ತಮವಾಗಿದ್ದರೆ ಕಾಲೇಜಿನ ನಿರ್ವಹಣೆ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಶೈಕ್ಷಣಿಕ ಚಟುವಟಿಕೆಯಲ್ಲಿಯೂ ಉತ್ತಮವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರುಗಳಾದ ಜಿ.ಪಿ.ದೀಪಕ್, ಬಾಗೇಪಲ್ಲಿ ನಟರಾಜು, ಕಾಲೇಜಿನ ಪ್ರಾಂಶುಪಾಲೆ ಡಾ.ವಿ.ಮಾಲತಿ, ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಪ್ರಸನ್ನ, ಪ್ರೊ.ನಿಂಗೇಗೌಡ, ಪ್ರೊ.ಎಚ್.ಆರ್.ಧನಂಜಯ್, ಉಮೇಶ್, ಲೋಕೇಶ್, ಕಾಂತರಾಜು, ಮಂಜುನಾಥ್, ಡಾ.ಲಲಟಾಕ್ಷಮೂರ್ತಿ ಸೇರಿದಂತೆ ಹಲವರು ಇದ್ದರು.