Monday, 14th October 2024

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕಿದೆ

ತಿಪಟೂರು : ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ವಿನಯತೆ, ಸಂಯಮ, ತ್ಯಾಗ, ಸದ್ಗುಣಗಳನ್ನು ಬೆಳೆಸಿ ಕೊಂಡು ಸಮಾಜದಲ್ಲಿ ಸಮರ್ಥ ವ್ಯಕ್ತಿಗಳಾಗುವಂತೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ನಗರದ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ಬಯ ಸೀಮೆ ಸಾಮಾಜಿಕ, ಸಾಂಸ್ಕೃತಿಕ ಸಂಘದ ೨೧ನೇ ರ‍್ಷದ ವರ‍್ಷಿಕ ಮಹೋತ್ಸವ, ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರಧಾನ ಹಾಗೂ ಭಾವಗೀತಾ ಗಾಯನ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಲ್ಲಿ ಪ್ರತಿಯೊಬ್ಬರಿಗೂ ಅವರದೇ ಅದ ಪ್ರತಿಭೆಗಳಿರುತ್ತವೆ. ನಮ್ಮಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳು ದೊರೆತಾಗ ಮಾತ್ರ ಉತ್ತಮವಾದ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳಲ್ಲಿ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಜೊತೆಗೆ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನ ಹೊರತರ ಬೇಕು. ಅವರ ಆಸಕ್ತಿಗೆ ಅನುಗುಣವಾಗಿ ವೇದಿಕೆ ಕಲ್ಪಿಸುವ ಜವಾಬ್ದಾರಿ ನಮ್ಮದಾಗಿದೆ.

ಸಾಮಾಜಿಕ ಜವಾಬ್ದಾರಿಯುಳ್ಳ ಸಂಘ ಸಂಸ್ಥೆಗಳನ್ನ ಕಟ್ಟಿ ಬೆಳೆಸುವುದೇ ಕಷ್ಟದ ಕೆಲಸ ಎನ್ನುವ ಕಾಲಘಟ್ಟದಲ್ಲಿ ಬಯಲು ಸೀಮೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘ ೨೧ರ‍್ಷಗಳಿಂದ ನಾಡು ನುಡಿಗೆ ಸಂಬಂದಿಸಿದಂತೆ ಸಾಹಿತ್ಯ, ಸಂಗೀತ ಕ್ಷೇತ್ರದ ದಿಗ್ಗಜರಿಂದ ಮಕ್ಕಳ ಪುರೋಭಿವೃದ್ದಿಗೆ ಪೂರಕವಾದ ಅವಕಾಶ ಕಲ್ಪಿಸುತ್ತಿರುವುದು ಮತ್ತು ಸಂಘ ಉತ್ತಮ ದಾರಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸಾಹಿತ್ಯ ಕಲ್ಪತರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿಯತ್ರಿ ಎಂ.ಆರ್.ಕಮಲ, ನಾನು ಸಾಹಿತ್ಯಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಆದರೇ ನನ್ನ ತವರು ತಿಪಟೂರಿನಲ್ಲಿ ನನ್ನನ ಅಭಿಮಾನದಿಂದ ಸಾಹಿತ್ಯ ಕಲ್ಪತರು ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ಕ್ಷಣವಾಗಿದ್ದು ನಮ್ಮ ಜನರ ಅಭಿಮಾನ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.

ನಾನು ಹಾಡಿ ಬೆಳೆದ ತವರು ನಮ್ಮ ಪುಣ್ಯಭೂಮಿ ಇದ್ದ ಹಾಗೆ ಕನ್ನಡ ನಾಡಿನಲ್ಲಿ ಅನೇಕ ಮಹನೀಯರು ಸಾಹಿತ್ಯ ಸೇವೆ ಮಾಡಿದ್ದಾರೆ. ಅವರ ನೆರಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗುವುದೇ ಪುಣ್ಯದ ಕೆಲಸವಾಗಿದೆ.ನಮ್ಮ ಸಾಹಿತ್ಯ ಸದಾ ಅಧ್ಯಯನ ಶೀಲವಾಗಿ ನಡೆಯ ಬೇಕು. ನಾವೂ ನಮ್ಮ ಸಾಹಿತ್ಯ ವಿಶ್ವಭಾಷೆಗಳ ಗುಣಮಟ್ಟದಲ್ಲಿ ಬೆಳೆಯುವಂತೆ ಆಗಬೇಕು ಎಂದರು.

ಕಾರ‍್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಜ್ಯೋತಿಶ್ವರ್, ದೂರರ‍್ಶನದ ವಿಶ್ರಾಂತ ನಿರ್ದೇಶಕ ಗೌಸ್ ಮಹಿದೀನ್ ಶಿರಹಟ್ಟಿ, ತಿಪಟೂರು ಉಪವಿಭಾಗಾಧಿಕಾರಿ ಕಲ್ಪಶ್ರೀ, ಸಂಘದ ಅಧ್ಯಕ್ಷ ನಾಗರಾಜು, ತಹಸೀಲ್ದಾರ್ ಚಂದ್ರಶೇಖರ್, ಗ್ರೇಡ್ ೨ ತಹಸೀಲ್ದಾರ್ ಜಗನ್ನಾಥ್,  ಸಂಘದ ಪ್ರಧಾನ ಕಾರ್ಯದರ್ಶಿ ಭಾನುಪ್ರಶಾಂತ್, ಉಪಾಧ್ಯಕ್ಷ ಕೆ.ಎನ್.ರೇಣುಕಯ್ಯ, ಹಿರಿಯ ಪತ್ರರ‍್ತ ಉಜ್ಜಜ್ಜಿ ರಾಜಣ್ಣ , ಸಾಹಿತಿ ಸತ್ಯನಾರಾಯಣ್ ಇದ್ದರು.