Friday, 22nd November 2024

Eid Milad Celebration: ಸಂಭ್ರಮದ ಈದ್ ಮಿಲಾದ್ ಆಚರಣೆ 

ತುಮಕೂರು: ಮುಸ್ಲಿಂ ಬಾಂಧವರ ಈದ್ ಮಿಲಾದ್ (Eid Milad)ಪ್ರಯುಕ್ತ ನಗರದ ಸೇರಿದಂತೆ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ನಡೆಸ ಲಾಯಿತು. 

ನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಆರಂಭವಾದ ಚಾಂದಿನಿ ಮೆರವಣಿಗೆಯು ಬನಶಂಕರಿ, ಸದಾಶಿವನಗರ, ನಜರಾಬಾದ್, ಚಾಂದಿನಿ ಸರ್ಕಲ್, ಪಿ.ಎಚ್. ಕಾಲೋನಿ, ಬಿ.ಜಿ. ಪಾಳ್ಯ ವೃತ್ತದ ಮುಖೇನ ಸಂತೆ ಪೇಟೆಯಲ್ಲಿ ಸಾಗಿತು. 

ನಂತರ ಮೆರವಣ ಗೆಯು ಮಂಡಿಪೇಟೆ ಮುಖ್ಯ ರಸ್ತೆಯಿಂದ ಗುಂಚಿಸರ್ಕಲ್, ಬಾರ್‌ಲೈನ್ ಮಸೀದಿ ಮುಖೇನ ಕುಣ ಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು. 

ಚಾಂದಿನಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಮಹಮದ್ ಪೈಗಂಬರ್ ಹುಟ್ಟುಹಬ್ಬವನ್ನು ಈದ್ ಮಿಲಾದ್ ಹೆಸರಿನಲ್ಲಿ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ನಗರದಲ್ಲಿಯೂ ಅತ್ಯಂತ ಶಾಂತಿಯಿ0ದ ಈ ಆಚರಣೆ ಮಾಡಲಾಗಿದೆ ಎಂದರು. 

ಐದು ನಿಯಮಗಳಾದ ದೇವರಲ್ಲಿ ಪ್ರಾರ್ಥನೆ, ನಂಬಿಕೆ, ದುಡಿಮೆಯ ಒಂದು ಭಾಗ ದಾನ ನೀಡುವ ಜಕಾತ್ ಇವುಗಳನ್ನು ಅಳವಡಿಸಿಕೊಂಡರೆ ಅದೇ ನಾವು ಪ್ರವಾದಿಗಳಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.

ಚಾಂದಿನಿ ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್.ಷಫಿ ಅಹಮದ್, ಇಕ್ಬಾಲ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮದ್, ಇನಾಯತ್, ಹೆಚ್.ಡಿ.ಕೆ ಮಂಜುನಾಥ್, ಜೆ. ಕುಮಾರ್ ಮಹಮದ್‌ಪೀರ್, ಇಮ್ರಾನ್ ಪಾಷ, ಇಸ್ಮಾಯಿಲ್, ಎಲ್ಲಾ ಮಸೀದಿಗಳ ಮುತ್ತುವಲ್ಲಿಗಳು, ಇಮಾಮ್‌ಗಳು ಪಾಲ್ಗೊಂಡಿದ್ದರು.

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: Eid Milad: ಇಂದು ಈದ್‌ ಮಿಲಾದ್‌ ಮೆರವಣಿಗೆ, ಮೈಸೂರು ರೋಡ್‌ ಬಂದ್‌