Thursday, 19th September 2024

ಜೂ.3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ 4967 ಪುರುಷ ಹಾಗೂ 2758 ಮಹಿಳೆಯರು ಸೇರಿ ಒಟ್ಟು 7725 ಮತದಾರರು ಮತ ಚಲಾಯಿಸಲಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಜಿಲ್ಲೆಯ ಪಾವಗಡ ತಾಲ್ಲೂಕು ನ್ಯಾಯಾಲಯ ಸಭಾಂಗಣ ಹಾಗೂ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಗೇಡ್-2 ಕೊಠಡಿ.
ಮಧುಗಿರಿ ತಾಲ್ಲೂಕು ಕೆ.ಆರ್ ಬಡವಣೆಯ ಸರ್ಕಾರಿ ಪ್ರೌಢಶಾಲೆ; ಶಿರಾ ತಾಲ್ಲೂಕು ಆಡಳಿತ ಸೌಧ ಕಚೇರಿ ಸಭಾಂಗಣ ಹಾಗೂ ನ್ಯಾಯಾಲಯ ಸಭಾಂಗಣ. ಚಿಕ್ಕನಾಯಕಹಳ್ಳಿ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣ; ತಿಪಟೂರು ತಾಲ್ಲೂಕು ಕಚೇರಿ; ತುರುವೇಕೆರೆ ತಾಲ್ಲೂಕು ಕಚೇರಿ. ಕುಣಿಗಲ್ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣ; ಗುಬ್ಬಿ ತಾಲ್ಲೂಕು ಕಚೇರಿ; ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹೊಸಕಟ್ಟಡದ ಕೊಠಡಿ ಸಂಖ್ಯೆ 5, 6, 7, 9 ಹಾಗೂ ತುಮಕೂರು ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣ; ಕೊರಟಗೆರೆ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣ ಸೇರಿದಂತೆ 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Leave a Reply

Your email address will not be published. Required fields are marked *