Thursday, 12th December 2024

ಪ್ರೌಢಶಾಲಾ ಸಂಸತ್ ಚುನಾವಣೆ

ಕೋಲಾರ:  ತಾಲ್ಲೂಕಿನ ಹಣಮಾಪೂರ ಗ್ರಾಮದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿದವು.

ಮೊಬೈಲ್ ಆಪ್ ಮೂಲಕ ಮಕ್ಕಳ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು, ಮತದಾನಕ್ಕೆ ಶಾಲಾ ಆವರಣದಲ್ಲಿ ಮತ ಗಟ್ಟೆಯನ್ನು ಸ್ಥಾಪಿಸಲಾಗಿತ್ತು, ೮ ಜನ ಮಕ್ಕಳು ಶಾಲಾ ಸಂಸತ್ತಿನ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಮಕ್ಕಳು ಆಧಾರ ಕಾರ್ಡ್ ತೋರಿಸಿ ಮತ ಚಲಾಯಿಸಿದರು.

ಮತಗಟ್ಟೆ ಮುಖ್ಯ ಅಧಿಕಾರಿಯಾಗಿ ಶಿಕ್ಷಕ ಎಸ್.ಎಲ್ ಪವಾರ, ಪಿ.ಎನ್ ಕೂಡಗಿ, ತಾಂತ್ರಿಕ ಅಧಿಕಾರಿಯಾಗಿ ವಿಜಯ.ಎಚ್ ಕಾರ್ಯನಿರ್ವಹಿಸಿದರು. ಚುನಾವಣಾ ಉಸ್ತುವಾರಿಗಳಾಗಿ ಶಿಕ್ಷಕರಾದ ಎಸ್.ಎಮ್ ಬರಗಿ, ಎಮ್.ಎಸ್ ದೇಸಾಯಿ ಕಾರ್ಯ ನಿರ್ವಹಿಸಿದರು.

ಮತಗಟ್ಟೆ ಸಿದ್ಧತೆ ಹಾಗೂ ಚುನಾವಣೆ ವ್ಯವಸ್ಥೆಯನ್ನು ಶಿಕ್ಷಕೇತರ ಸಿಬ್ಬಂದಿಗಳಾದ ಮುರ್ತುಜ ಕಂಬೋಗಿ, ಹಣಮಂತ ಮಾದರ ಎಸ್.ಎಸ್ ಮುದಗಲ್ ಕಾರ್ಯ ನಿರ್ವಹಿಸಿದರು.