Thursday, 12th December 2024

ಮೊದಲ “ವಿಡಾ ವಿ1” ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಡೆಲಿವರಿ ಮಾಡಿದ ಹೀರೋ ಮೋಟೋ ಕಾರ್ಪ್‌

ಬೆಂಗಳೂರು: ಪ್ರತಿಷ್ಠಿತ ಮೋಟಾರು ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ ದೇಶದಲ್ಲೇ ತನ್ನ ಮೊದಲ “ವಿಡಾ ವಿ1” ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವನ್ನು ಬೆಂಗಳೂರಿನ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಶಾಖೆಯಲ್ಲಿ ಗ್ರಾಹಕರಿಗೆ ಹಸ್ತಾಂತರಿಸಿತು.

ಹೀರೋ ಮೋಟೋಕಾರ್ಪ್‌ನ ಸಿಇಒ ಡಾ. ಪವನ್‌ ಮುಂಜಾಲ್‌ ಮೊದಲ ಎಲೆಕ್ಟ್ರಿಕ್‌ ವಾಹನವನ್ನು ಡೆಲಿವರಿ ಮಾಡಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲೇ ಮೊದಲ ವಿಡಾ ವಿ1 ಎಲೆಕ್ಟ್ರಿಕ್‌ ವಾಹನವನ್ನು ಬೆಂಗಳೂರಿನಲ್ಲಿ ಡೆಲಿವರಿ ಪ್ರಾರಂಭಿಸಿದ್ದು ಹೆಮ್ಮೆ ಎನಿಸುತ್ತಿದೆ. ಈ ಮೂಲಕ ಹೀರೋ ತನ್ನ ಎಲೆಕ್ಟ್ರಿಕ್‌ ಸಂಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿ ದಂತಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ ಹೆಚ್ಚುತ್ತಿದೆ.

ಗ್ರಾಹಕರ ನಿರೀಕ್ಷೆಯಂತೆಯೇ ಈ ವಾಹನವನ್ನು ಸಿದ್ಧಪಡಿಸಿದ್ದೇವೆ. ನೋಡಲು ಆಕರ್ಷವಾಗಿದ್ದು, ಹೆಚ್ಚು ಜನಸ್ನೇಹಿ ಎಲೆಕ್ಟ್ರಿಕ್‌ ವಾಹನ ಇದಾಗಿದೆ ಎಂದರು.

ವಿಡಾ ವಿ1 ಎಲೆಕ್ಟ್ರಿಕ್‌ ವಾಹನವು ಕಸ್ಟಮೈಸ್‌ ಮಾಡಬಹುದಾದ, ದೀರ್ಘಾವಧಿವರೆಗೂ ಬಾಳಿಕೆ ಬರುವ ಹಾಗೂ ತೆಗೆದು ಹಾಕಬಹುದಾದ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಮೂರು ವಿಧದ ಚಾರ್ಜಿಂಗ್‌ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಪೋರ್ಟಬಲ್‌ ಚಾರ್ಜರ್‌ ಹೊಂದಿದೆ. ಪ್ರಸ್ತುತ “ವಿಡಾ ವಿ1 ಪ್ಲಸ್‌” ಹಾಗೂ “ವಿಡಾ ವಿ1 ಪ್ರೋ” ಎರಡು ಶ್ರೇಣಿಯ ದ್ವಿಚಕ್ರವಾಹನ ರಸ್ತೆಗಿಳಿದಿವೆ.

ವಿಡಾ ವಿ1 ಉತ್ತಮ ಕಾರ್ಯಕ್ಷಮತೆ ಹೊಂದಿದ್ದು 163 ಕಿ.ಮೀ. ಐಡಿಸಿ ಹಾಗೂ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ. ಹೊಂದಿದೆ ಎಂದು ವಿವರಿಸಿದರು. ಪ್ರಸ್ತುತ ಬೆಂಗಳೂರು ಹಾಗೂ ಜೈಪುರದಲ್ಲಿ ವಿಡಾ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಹೊಂದಿದ್ದು, ದೆಹಲಿಯಲ್ಲಿ ಪಾಪ್‌ ಸ್ಟೋರ್‌ ತೆರೆಯಲಾಗಿದೆ. ಸದ್ಯ, ಬೆಂಗಳೂರಿನಲ್ಲಿ ಮೊದಲ ಡೆಲಿವರಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜೈಪುರ್‌ ಹಾಗೂ ದೆಹಲಿಯಲ್ಲಿಯೂ ವಾಹನ ಡೆಲಿವರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಹೀರೋ ಮೋಟೋ ಕಾರ್ಪ್‌ನ ಎಮರ್ಜಿಂಗ್‌ ಮೊಬಿಲಿಟಿ ಬ್ಯುಸಿನೆಸ್‌ ಯುನಿಟ್‌ ಮುಖ್ಯಸ್ಥ ಡಾ. ಸ್ವದೇಶ್‌ ಶ್ರೀವಾಸ್ತವ ಮಾತ ನಾಡಿ, ವಿಡಾ ಎಲೆಕ್ಟ್ರಿಕ್‌ ವಾಹನವು ಹಲವು ವೈಶಿಷ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಕಸ್ಟಮ್‌ ಮೋಡ್‌, ಕ್ರೂಸ್‌ ಕಂಟ್ರೋಲ್‌, ಬೂಸ್ಟ್‌ ಮೋಡ್‌, ಟೂವೇ ಥ್ರೋಟಲ್‌, ಕೀ ಲೆಸ್‌ ಆಕ್ಸಸ್‌, 7 ಇಂಚಿನ ಟಚ್‌ ಸ್ಕ್ರೀನ್‌ ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ.

ಇದಷ್ಟೇ ಅಲ್ಲದೆ, ಗ್ರಾಹಕರಿಗೆ ಅನುಕೂಲ ಮಾಡಲು ಬೈ ಬ್ಯಾಕ್‌ ಸ್ಕೀನ್‌ ಹೊಂದಿದೆ. ಎಲೆಕ್ಟ್ರಿಕ್‌ ವಾಹನದಲ್ಲಿ ಯಾವುದೇ ದೋಷ ಕಂಡು ಬಂದರೂ ಕೂಡಲೇ ವಿಡಾ ಸೆಂಟರ್‌ಗೆ ಕರೆ ಮಾಡಿದರೆ ನಮ್ಮ ಸಿಬ್ಬಂದಿಯು ನಿಮ್ಮ ಬಳಿಯೇ ಬಂದು ಸೇವೆ ನೀಡುವ ವ್ಯವಸ್ಥೆಯನ್ನು ನೀಡದ್ದೇವೆ ಎಂದು ವಿವರಿಸಿದರು.