ಶಿವಮೊಗ್ಗ: ಶಿವಮೊಗ್ಗ ಗುಡ್ಡದ ಅರಕೆರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ (Elephant Attack) ಹೆಚ್ಚಾಗಿದ್ದು, ಆನೆಗಳ ದಾಳಿಯಿಂದ 1200 ಬಾಳೆ ಗಿಡ ಹಾಗೂ 200 ಅಡಿಕೆ ಗಿಡ ನಾಶವಾಗಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಸುಮಾರು ಆರು ಆನೆಗಳು ತೋಟದಲ್ಲೇ ಬಿಡುಬಿಟ್ಟು, ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿವೆ.
ಬೆಳಗ್ಗೆ ಕೆಲಸಗಾರರು ತೋಟಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ನೀಡಿದ ಸೋಮವಾರ ಕಚೇರಿಗೆ ಬಂದು ಲಿಖಿತ ದೂರು ನೀಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು, ಸೋಮವಾರ ಡಿಎಫ್ಒ ಕಚೇರಿ ಮುಂದೆ ಧರಣಿ ಮಾಡಲು ತೀರ್ಮಾನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Encounters: ಜಮ್ಮು & ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಸಾವು
ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್
ತುಮಕೂರು: ಅಪರಾಧ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪದಲ್ಲಿ ಪಾವಗಡ ಪೊಲೀಸ್ ಠಾಣೆಯ ಮೂರು ಪೊಲೀಸ್ ಪೇದೆಗಳು (Police Suspended) ಅಮಾನತುಗೊಂಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಮಟ್ಕಾ, ಜೂಜಾಟ ಇನ್ನಿತರ ಪ್ರಕರಣಗಳಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದ್ದರಿಂದ ಮೂವರು ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
ಪಾವಗಡ ತಾಲೂಕಿನಲ್ಲಿ ಅಪರಾಧ ಕೃತ್ಯಗಳಿಗೆ ಪೊಲೀಸರಿಂದಲೇ ಪ್ರೋತ್ಸಾಹ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅ. 29ರಂದು ಸಂತೋಷ್, ಶ್ರೀಕಾಂತ್ ನಾಯಕ್, ನಟೇಶ್ ಎಂಬ ಪೇದೆಗಳನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.