Monday, 25th November 2024

ಐ ಯಾಮ್ ಎ ಬಿಗ್ ಫೇಲ್ಯೂರ್: ಡೆತ್ ನೋಟ್ ಬರೆದು ಇಂಜಿನಿಯರ್ ನೇಣಿಗೆ ಶರಣು

ದೊಡ್ಡಬಳ್ಳಾಪುರ: ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಮನೆಯಲ್ಲಿದ್ದ ಇಂಜಿನಿಯರ್, ಕಳೆದ ಮೂರು ವರ್ಷಗಳಿಂದ ಕೆಲಸ ಸಿಗದೆ ಹತಾಶನಾಗಿದ್ದ ಯುವಕ, ಐ ಯಾಮ್ ಎ ಬಿಗ್ ಫೇಲ್ಯೂರ್ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.

ದೊಡ್ಡಬಳ್ಳಾಪುರ ನಗರದ ವಿದ್ಯಾನಗರದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಭರತ್ ಕುಮಾರ್ (29) ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಭರತ್ ಕುಮಾರ್ ಮೆಕಾನಿಕ್ ಇಂಜಿನಯರ್ ಆಗಿದ್ದು, ಬಾಶೆಟ್ಟಿಯಲ್ಲಿ ಜೆ.ಕೆ ಪಿ.ಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಕರೋನಾ ಸಮಯ ದಲ್ಲಿ ಕಂಪನಿ ಮುಚ್ಚಿದ್ದರಿಂದ ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಇದ್ದ, ಕೆಲಸ ಸಿಗದೆ ಇದಿದ್ದಕ್ಕೆ ನಿರಾಶೆಗೊಂಡಿದ್ದು ಈ ಬಗ್ಗೆ ಬೇಸರವನ್ನು ಮನೆಯವರ ಬಳಿ ವ್ಯಕ್ತಪಡಿಸಿದ್ದ. ಭಾನುವಾರ ಬೆಳಗ್ಗೆ ಕುಟುಂಬದವರು ಸಂಬಂಧಿಕರೊಬ್ಬರ ಸೀಮಂತ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಹೋಗಿದ್ದರು.

ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯ ಮೇಲ್ಛಾವಣಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದುಕೊಂಡು ಭರತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಮೃತನ ಡೆತ್ ನೋಟ್ ಪತ್ತೆಯಾಗಿದ್ದು, No one is Responsible for My Death. I am Solely Responsible I am a big failure (ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ. ನಾನು ಸಂಪೂರ್ಣ ಜವಾಬ್ದಾರಿಯುತ, ನಾನು ದೊಡ್ಡ ವೈಫಲ್ಯ) ಎಂದು ಬರೆದು ಆತ್ಮಹತ್ಯೆ ಶರಣಾಗಿವುದ್ದಾಗಿ ಹೇಳಿದ್ದಾನೆ.