Saturday, 14th December 2024

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾಸ್ಟರ್ ಮೈಂಡ್ ಸ್ಕಾಲರ್ ಶಿಪ್ ಪರೀಕ್ಷೆ

ತುಮಕೂರು: ವಿದ್ಯಾನಿಧಿ ಕಾಲೇಜಿನಲ್ಲಿ ಪ್ರತಿವರ್ಷವೂ ವಿ-ಟೆಕ್ನೋ ವತಿಯಿಂದ ನಡೆಸುವ ರಾಜ್ಯ ಮಟ್ಟದ ವಿದ್ಯಾರ್ಥಿ ವೇತನ ಪರೀಕ್ಷೆಯಾದ ವಿ-ಮಾಸ್ಡರ್ ಮೈಂಡ್‌ನ್ನು ಮಂಗಳವಾರ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಔಪಚಾರಿಕವಾಗಿ ಘೋಷಿಸಿದರು.
ನವೆಂಬರ್ ತಿಂಗಳ 27 ಭಾನುವಾರದಂದು ಈ ಪರೀಕ್ಷೆ ತುಮಕೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಾಂಶು ಪಾಲ ಸಿದ್ದೇಶ್ವರ ಸ್ವಾಮಿ ಎಸ್. ಆರ್, ಉಪನ್ಯಾಸಕ ವೃಂದದವರು ಮತ್ತು ಕಳೆದ ವರ್ಷ ವಿ-ಮಾಸ್ಟರ್ ಮೈಂಡ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿ ವಿದ್ಯಾರ್ಥಿ ವೇತನ ಪಡೆದು ಪ್ರಸ್ತುತ ವಿದ್ಯಾನಿಧಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಸ್ತುತ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಸಿಬಿಎಸ್‌ಇ, ಐಸಿಎಸ್‌ಇ, ಮತ್ತು ಸ್ಟೇಟ್ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರತ್ಯೇಕ ವಿಭಾಗಗಳಲ್ಲಿ ಪರೀಕ್ಷೆ ನಡೆ ಯಲಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ ನವೆಂಬರ್ 24, ಹೆಚ್ಚಿನ ಮಾಹಿತಿಗಾಗಿ 8123387812, 9353417536, 8050794620 ಸಂಖ್ಯೆಗಳನ್ನು ಸಂಪರ್ಕಿಸಬಹುದು.