Thursday, 12th December 2024

246 ಅಂಧರಿಗೆ ದೃಷ್ಟಿದಾನ

ತುಮಕೂರು: ಜನವರಿಯಿಂದ ಡಿಸೆಂಬರ್ 2022ನೇ ವಾರ್ಷಿಕ ವರ್ಷದಲ್ಲಿ  ಜಿಲ್ಲೆಯಲ್ಲಿ 123 ಕುಟುಂಬದವರಿಂದ 246 ಜನ ಅಂಧರಿಗೆ ದೃಷ್ಟಿದಾನ ಮಾಡಲಾಗಿದಿದು, ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದ 123 ಕುಟುಂಬದವರಿಗೆ ಎನ್.ಎಸ್.ಐ. ಫೌಂಡೇಷನ್ ಮುಖ್ಯಸ್ಥ ಎನ್. ಎನ್.ಶ್ರೀಧರ್ ಧನ್ಯವಾದ ಸಲ್ಲಿಸಿದ್ದಾರೆ.
ಈಗಾಗಲೇ 40 ಮಂದಿ ದೇಹದಾನ ಮತ್ತು 15 ಸಾವಿರಕ್ಕೂ ಹೆಚ್ಚು ನೇತ್ರದಾನ ಮಾಡಲು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ಕಾರ್ಯ ಯಶಸ್ವಿಯಾಗಲು ಸಹಕರಿಸಿದ ತುಮಕೂರಿನ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತುಮಕೂರಿನ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಜಿಲ್ಲಾ ಎಲ್ಲಾ ನೇತ್ರತಜ್ಞರುಗಳಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ರೀತಿ ನೇತ್ರದಾನ ಮತ್ತು ದೇಹದಾನ ಮಾಡುವವರು ಎನ್.ಎನ್.ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಫೌಂಡೇಷನ್, ಎನ್.ಎಸ್.ಪೈಂಟ್ಸ್ ಅಂಡ್ ಹಾರ್ಡ್‌ವೇರ್, ಜೆ.ಸಿ.ರಸ್ತೆ, ಮಂಡಿಪೇಟೆ ಸರ್ಕಲ್, ತುಮಕೂರು ಅಥವಾ ಮೊ: 9590066066 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.