Sunday, 8th September 2024

ಸೀಲ್ ಲ್ಯಾಬರೋಟರಿ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ

ಯಾದಗಿರಿ: ಜಿಲ್ಲೆಯ ಮಾಡಿಯಾಳ ಗ್ರಾಮದ ಸಮೀಪವಿರುವ ಸೀಲ್ ಲ್ಯಾಬರೋಟರಿ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟದಿಂದ ಅಗ್ನಿ ಅವಘಡ ಸಂಭವಿ ಸಿದ್ದು ಭಾರಿ ಅನಾಹುತವೊಂದು ತಪ್ಪಿದೆ.

ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚುಮುತಿದ್ದು, ಹಿರೇಳೆ ಫ್ಯಾಕ್ಟರಿಯಲ್ಲಿದ್ದ ಸಿಬ್ಬಂದಿಗಳು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಯಾದಗಿರಿ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿರುವ ಘಟನೆ ನಡೆದಿದ್ದು ಸೀಲ್ ಲ್ಯಾಬರೋಟರಿ ಫ್ಯಾಕ್ಟರಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ ಕಚ್ಚ ವಸ್ತುಗಳನ್ನು ಕರಗಿಸಿ ಪೌಡರ್ ಗಳನ್ನು ತಯಾರಿಸುವ ಕಾರ್ಖಾನೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.

ಬೆಂಕಿ ನಂದಿಸುವುದಕ್ಕೆ ಅಗ್ನಿಶಾಮಕ ಸಿಬ್ಬಂದಿ ಇದೀಗ ಹರಸಾಹಸ ಪಡುತ್ತಿದ್ದು ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಸೀಲ್ ಲ್ಯಾಬೋರೇಟರಿ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ಕಚ್ಚ ವಸ್ತುಗಳನ್ನು ಕಳುಹಿಸಿ ಪೌಡರ್ ಗಳನ್ನು ತಯಾರು ಮಾಡಿದಂತಹ ಬೇರೆ ಕಡೆ ತೆಗೆದುಕೊಂಡು ಹೋಗಿ ಮಾರಾಟ ಮಾಡ ಲಾಗುತ್ತದ. ಆದರೆ ತಯಾರು ಮಾಡಿದಂತಹ ಪೌಡರ್ ಅನ್ನು ಅನ್ ಲೋಡ್ ಮಾಡುವ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ.

Leave a Reply

Your email address will not be published. Required fields are marked *

error: Content is protected !!