ಗುಬ್ಬಿ: ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಚಿರಋಣಿ ಎಂದು ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ 64ನೇ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿ 33 ವರ್ಷಗಳ ನಿರಂತರ ರಾಜಕಾರಣ ದಲ್ಲಿ ಜನರು ನನ್ನ ಮೇಲೆ ತೋರುವ ಪ್ರೀತಿಗೆ ಚಿರಋಣಿಯಾಗಿದ್ದೇನೆ ನನಗೆ ಬಾಡಿಗೆ ಸೈಕಲ್ ಕೊಡಲು ಇಂದು ಮುಂದು ನೋಡಿದಂತಹ ಪರಿಸ್ಥಿತಿಯಿಂದ ಜನಸೇವೆ ಮಾಡುವ ಅವಕಾಶದ ವರೆಗೂ ನನ್ನ ಮೇಲೆ ಇದ್ದಂತಹ ವಿಶ್ವಾಸ ಸಹಕಾರ ಆಶೀರ್ವಾದ ಎಂದು ಮರೆಯಲಾಗದು ಎಂದು ಅಳಲು ತೋಡಿಕೊಂಡರು.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಕ್ತಿ ತುಂಬುವಂತ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದ್ದು. ತಾಲೂಕಿನ ಪ್ರತಿ ಗ್ರಾಮ ದಲ್ಲಿಯೂ ಸಹ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದ್ದು ಅಧಿಕಾರ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಪ್ರತಿ ಮನೆಗೂ ತಲುಪುವ ಕೆಲಸ ಮಾಡಲಾಗುತ್ತಿದೆ ಹೆಚ್ಚು ಯುವಕರು ಆಸಕ್ತರಾಗಿ ಸದಸ್ಯತ್ವ ಪಡೆಯುತ್ತಿದ್ದಾರೆ ಯುವಶಕ್ತಿ ಏನೆಂಬುದನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ತೋರಿಸಬೇಕಿದೆ.
ಸದಸ್ಯತ್ವ ಪಡೆಯಲು ಟೋಲ್ ಫ್ರೀ ನಂಬರ್ 80000090009 ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು ಎಂದು ತಿಳಿಸಿದರು.