Sunday, 15th December 2024

ರೈತನಿಗೆ ಅವಮಾನ: ಮೆಟ್ರೋ ಸಿಬ್ಬಂದಿ ಸೇವೆಯಿಂದ ವಜಾ

ಬೆಂಗಳೂರು: ಕೊಳಕು ಬಟ್ಟೆ ಎಂದು ಅವಮಾನಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡದ ಮೆಟ್ರೋ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾ ಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ಮೆಟ್ರೋ ತನ್ನಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

ಮೆಟ್ರೋದಲ್ಲಿ ಅನ್ನದಾತನ ಮೇಲೆ ಮೆಟ್ರೋ ಸಿಬ್ಬಂದಿ ದರ್ಪ ಮಾಡಿರುವ ಘಟನೆ ನಡೆದಿತ್ತು . ಬೆಂಗಳೂರಿನ ರಾಜಾಜಿನಗರದಲ್ಲಿರುವ ಮೆಟ್ರೋ ಸಿಬ್ಬಂದಿಯು ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿಯು ನೋಡಿ ನಿಮ್ಮ ಬಟ್ಟೆ ಕೊಳೆಯಾಗಿದೆ ಎಂದು ಒಳಗೆ ಬಿಡಲು ನಿರಾಕರಿಸಿದ್ದಾರೆ.

ಘಟನೆ ಬಗ್ಗೆ ಸ್ಥಳದಲ್ಲಿದ್ದವರು ಕೂಡ ಆಕ್ರೋಶ ವ್ಯಕ್ರಪಡಿಸಿದ್ದು, ಕೂಡಲೇ ಸಂಬಂಧಪಟ್ಟ ವ್ಯಕ್ತಿಯನ್ನು ಕೂಡಲೇ ಕಾನೂನು ಪ್ರಕಾರ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳನ್ನು ಒತ್ತಾಯಪಡಿಸಿದ್ದರು.

ವರದಿ ಪ್ರಕಟವಾದ ಬೆನ್ನಲೇ ಮೆಟ್ರೋ ಎಚ್ಚೆತ್ತುಕೊಂಡು ಘಟನೆಯಲ್ಲಿ ಕಂಡು ಬಂದ ನೌಕರನನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದೆ.