Friday, 25th October 2024

ಅದ್ದೂರಿ ಶಂಕರಾಚಾರ್ಯರ ಉತ್ಸವ

ತುಮಕೂರು: ನಗರದ ಶಂಕರಮಠದಲ್ಲಿ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಕಳೆದ 7 ದಿನಗಳಿಂದ ಹಮ್ಮಿಕೊಂಡಿರುವ ಜಗದ್ಗುರು ಶ್ರೀ ಶಂಕರ ಭಗವತ್ಪಾದರ ಜಯಂತಿ ಸಪ್ತಾಹದ ಅಂಗವಾಗಿ ಶುಕ್ರವಾರ ಶ್ರೀ ಶಂಕರಾಚಾರ್ಯರ ಉತ್ಸವವನ್ನು ಅದ್ದೂರಿಯಿಂದ ನಡೆಯಿತು.

ವಿವಿಧ ಬಗೆಯ ಪುಷ್ಪಾಲಂಕೃತವಾದ ರಥದಲ್ಲಿ ಶಂಕರಾಚಾರ್ಯ ಭಗವತ್ಪಾದರ ಭಾವಚಿತ್ರವನ್ನು ಕೂರಿಸಿ ವೇದ ಘೋಷ ಮತ್ತು ನಾದ ಸ್ವರಗಳೊಂದಿಗೆ ಮೆರವಣಿಗೆ ಯು ವೈಭವದಿಂದ ಜರುಗಿತು.

ಬಿ.ಹೆಚ್. ರಸ್ತೆಯಲ್ಲಿರುವ ಶಂಕರಮಠದ ಆವರಣದಲ್ಲಿ ಹೊರಟ ಮೆರವಣಿಗೆಯು ಬಿ.ಹೆಚ್. ರಸ್ತೆ, ಟೌನ್‌ಹಾಲ್ ವೃತ್ತದ ಮೂಲಕ ಸಾಗಿ ಮತ್ತೆ ಬಿ.ಹೆಚ್. ರಸ್ತೆ ಮುಖೇನ ಎಂ.ಜಿ. ರಸ್ತೆ 2ನೇ ಕ್ರಾಸ್ ಮುಖಾಂತರ ಶ್ರೀರಾಮಮಂದಿರ ರಸ್ತೆ, ಬಿ.ಹೆಚ್. ರಸ್ತೆಯ ಮೂಲಕ ಶಂಕರ ಮಠವನ್ನು ಸೇರಿತು.

ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಶಂಕರ ಸೇವಾ ಸಮಿತಿ ಅಧ್ಯಕ್ಷ ನಂಜುಂಡೇ ಶ್ವರ್, 7 ದಿನಗಳ ಕಾಲ ಶಂಕರ ಭಗವತ್ಪಾದರ ಜಯಂತಿ ಸಪ್ತಾಹ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗಿದೆ. ಪ್ರತಿದಿನ ಸಂಜೆ ವಿಧ್ವಾಂಸರಗಳಿಂದ ಪ್ರವಚನ ಕಾರ್ಯಕ್ರಮ, ರುದ್ರಾಭಿಷೇಕ, ಶಂಕರಾಚಾರ್ಯರ ಪಾರಾಯಣ ನಡೆಸಲಾಯಿತು. ಕೊನೆ ದಿನವಾಗಿರುವ ಇಂದು ಮಂಗಳಾ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಈ ಬಾರಿ ಶಂಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿ ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕೆ

ಶಂಕರ ಮಠ. ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಎಲ್ಲ ವಿಪ್ರ ಸಂಘಟನೆಗಳ ಸಹಕಾರವೂ ದೊರೆಯಿತು. ಮುಂದಿನ ದಿನಗಳಲ್ಲಿ ಎಲ್ಲ ಸಮು ದಾಯದವರನ್ನು ಸೇರಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಶಂಕರ ಜಯಂತಿ ಆಚರಿಸಲಾಗುವುದು ಎಂದರು.

ಶಂಕರರ ಧ್ಯೇಯೋದ್ದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ಎಲ್ಲ ಸಮುದಾಯಗಳೊಂದಿಗೆ ಜಯಂತಿ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಶಂಕರಾಚಾರ್ಯರ ಉತ್ಸವದಲ್ಲಿ ಎಂ.ಕೆ. ನಾಗರಾಜರಾವ್, ಜಿ.ಎಸ್. ಮಂಜುನಾಥ್, ಡಾ. ಹರೀಶ್, ಸಿ.ಎನ್. ರಮೇಶ್, ಅನಂತರಾಮು ಸೇರಿದಂತೆ ಶಂಕರ ಸೇವಾ ಸಮಿತಿ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ವಿಪ್ರ ಸಂಘಟನೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.