Saturday, 14th December 2024

ವಿಜಯಸೇನೆಯಿಂದ ಕರುನಾಡ ಸಾಂಸ್ಕೃತಿಕ ಹಬ್ಬ

ತುಮಕೂರು: ಕರುನಾಡ ವಿಜಯಸೇನೆ ತುಮಕೂರು ಜಿಲ್ಲಾ ಘಟಕ ಹಾಗೂ ವಿವಿದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರುನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ 50ನೇ ವರ್ಷದ ಸವಿನೆನಪಿಗಾಗಿ ನವೆಂಬರ್ 05 ಮತ್ತು 06 ರಂದು ಕರುನಾಡ ಸಾಂಸ್ಕೃತಿಕ ಹಬ್ಬ ಎಂಬ ಶಿರ್ಷೀಕೆ ಅಡಿಯಲ್ಲಿ ಸಾಂಸ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಜಯ ಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಎರಡು ದಿನಗಳ ಕರುನಾಡ ಸಾಂಸ್ಕೃತಿಕ ಹಬ್ಬದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಚಲನಚಿತ್ರ ನಟ, ನಟಿಯರು ಹಾಗು ಸ್ಥಳೀಯ ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎಂದರು.

ನವೆAಬರ್ 05ರ ಶನಿವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿಯೊಬ್ಬರು ಭಾಗವಹಿಸ ಲಿದ್ದಾರೆ. ಇವರೊಂದಿಗೆ ಕನ್ನಡ ಭಾಷೆ,ನೆಲ,ಜಲ ವಿಚಾರವಾಗಿ ದುಡಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಕಾರ್ಯಕ್ರಮದ ನಂತರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಹೆಸರಾಂತ ಗಾಯಕ, ಗಾಯಕಿಯರು, ಕಾಮಿಡಿ ಕಿಲಾಡಿಗಳ ಖ್ಯಾತಿಯ ಕಲಾವಿದರು ಗಾಯನ, ನೃತ್ಯ ಕಾರ್ಯ ಕ್ರಮ ನಡೆಯಲಿದೆ ಎಂದು ಹೆಚ್.ಎನ್. ದೀಪಕ್ ತಿಳಿಸಿದರು.

ನವೆಂಬರ್ 06ರ ಭಾನುವಾರ ನಡೆಯುವ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿಯೊಬ್ಬರು ಸಮಾರೋಪ ಭಾಷಣ ಮಾಡಲಿದ್ದಾರೆ.ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಸಾರಥ್ಯದಲ್ಲಿ ಗಾಯಕರು, ಗಾಯಕಿ ಯರು ಗಾಯನ ಹಾಗೂ ಕಾಮಿಡಿ ಕಿಲಾಡಿಗಳ ಕಾರ್ಯಕ್ರಮದ ಕಲಾವಿದರುಗಳು ಹಾಸ್ಯರಸಾಯನ ಕಾರ್ಯಕ್ರಮ ಜರುಗಲಿದೆ ಎಂದರು.

ಎರಡು ದಿನಗಳ ಈ ಕರುನಾಡ ಸಾಂಸ್ಕೃತಿಕ ಹಬ್ಬಕ್ಕೆ ಪ್ರಯೋಕತ್ವ ನೀಡುವಂತೆ ಹಲವು ಸಂಘ ಸಂಸ್ಥೆಗಳಿಗೆ ಮನವಿ ಮಾಡ ಲಾಗಿದೆ. ಅವರ ಸಹಕಾರದ ಜೊತೆಗೆ,ಸ್ಥಳೀಯ ಜನ ಪ್ರತಿನಿಧಿಗಳು, ಕನ್ನಡದ ಮನಸ್ಸುಗಳ ಸಹಕಾರವೂ ಅಗತ್ಯವಿದೆ.

ಸುಮಾರು 20 ರಿಂದ 25 ಸಾವಿರ ಜನರು ಭಾಗವಹಿಸಬಹುದಾದ ನಿರೀಕ್ಷೆಯಿದೆ.ಕಳೆದ ಮೂರು ವರ್ಷಗಳಿಂದ ಕೋವಿಡ್‌ನಿಂದಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿಲ್ಲ.ಈಗ ಸಿಕ್ಕಿರುವ ಅವಕಾಶದಲ್ಲಿ ಒಂದು ಅದ್ದೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಉದ್ದೇಶ ನಮ್ಮದಾಗಿದೆ.ಜಿಲ್ಲೆಯ ಜನತೆ ಇದನ್ನು ಜಿಲ್ಲಾ ಉತ್ಸವವೆಂದು ಪರಿಗಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹೆಚ್.ಎನ್.ದೀಪಕ್ ಮನವಿ ಮಾಡಿದರು.

ಕರುನಾಡ ವಿಜಯಸೇನೆ ಆರಂಭವಾದ ದಿನದಿಂದಲೂ ನಾಡು,ನುಡಿ,ನೆಲ,ಜಲದ ವಿಚಾರದಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ. ಬೆಳಗಾವಿಯ ಎಂ.ಇ.ಎಸ್.ಪುಂಡಾಟಿಕೆ ಹಾಗೆ ತೆಮಿಳುನಾಡಿನ ಕಿರಿಕಿರಿ ವಿರುದ್ದ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ.

ಒ0ದು ಹಂತದವರೆಗೆ ಮಾತ್ರ ಹೋರಾಟವನ್ನು ರೂಪಿಸಲು ಸಾಧ್ಯ.ಈ ಹಿಂದಿನ ರೀತಿ ಕಾನೂನು ಮುರಿದು ಹೋರಾಟ ನಡೆಸಲು ಸಾಧ್ಯವಿಲ್ಲ.ಹಾಗೇನಾದರೂ ಆದರೆ ಹೋರಾಟಗಾರರ ಮೇಲೆ ಕೇಸುಗಳು ಬೀಳಲಿವೆ. ಹೋರಾಟದ ಹೆಸರಿನಲ್ಲಿ ಯುವಜನರ ಭವಿಷ್ಯ ಬಲಿ ಕೊಡಲು ನಮಗೂ ಇಷ್ಟವಿಲ್ಲ.ಹಾಗಾಗಿ ನಮ್ಮ ಇತಿಮಿತಿಯೊಳಗೆ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಶಾಲೆಯ ಮುಚ್ಚದಂತೆ, ಕೇ0ದ್ರ ಸರಕಾರಿ ಹುದ್ದೆಗಳ ಪ್ರವೇಶ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಬಳಕೆ,ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ತೀರ್ಪು ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದೇವೆ.ಮುಂದೆಯೂ ಮಾಡಲಿದ್ದೇವೆ. ನಾಗರಿಕ ಸಮಾಜ ಸ್ಪಂದಿಸಿ,ಉತ್ತೇಜಿಸಿದರೆ ಮತ್ತಷ್ಟು ಹೋರಾಟ ನಡೆಸಲು ಕರುನಾಡಸೇನೆ ಸಿದ್ದವಿದೆ ಎಂದು ಹೆಚ್.ಎನ್.ದೀಪಕ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಸೋಮಶೇಖರ್,ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ, ರಾಜ್ಯ ಸಂಚಾಲಕ ರಂಜನ್, ಜಿಲ್ಲಾ ಅಧ್ಯಕ್ಷ ಕೆ.ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಹರೀಶ್,ಮಹಿಳಾ ಘಟಕದ ಅಧ್ಯಕ್ಷ ಯಾಸ್ಮಿನ್‌ತಾಜ್,ಜಿಲ್ಲಾ ಸಹಕಾರ್ಯದರ್ಶಿ ನಯನ, ಜಿಲ್ಲಾ ಉಪಾಧ್ಯಕ್ಷ ಮನ್ಸೂರ್, ಪವನ್ ಸೇರಿದಂತೆ ಹಲವರು ಭಾಗವಹಿಸಿ ದ್ದರು.