ಚಿಕ್ಕನಾಯಕನಹಳ್ಳಿ: ಕುಪ್ಪೂರುಗದ್ದಿಗೆ ಮಠದ ಜಾತ್ರಾ ಮಹೋತ್ಸವದಲ್ಲಿ ಪವಾಡ ಪುರುಷ ಶ್ರೀಗುರುಮರುಳಸಿದ್ದೇಶ್ವರ ಸ್ವಾಮಿಯ ಬೆಳ್ಳಿ ಅಡ್ಡ ಪಲ್ಲಕ್ಕಿ ಹಾಗು ವೃಷಭೋತ್ಸವವು ಸಹಸ್ರಾರು ಭಕ್ತರೊಂದಿಗೆ ವಿಜೃಂಭಣೆಯಿ೦ದ ನಡೆಯಿತು.
ಕುಪ್ಪೂರು ಗದ್ದಿಗೆ ಮಠದ ಮರುಳಸಿದ್ದರು ಪವಾಡ ಪುರುಷರು. ಲೋಕಕಲ್ಯಾಣಕ್ಕಾಗಿ ಶ್ರಿಶೈಲದ ಮಲ್ಲಿಕಾರ್ಜುನ ಭ್ರಮರಾಂಭಿಕೆಯನ್ನು ತಮ್ಮ ತಪಸ್ಸಿನಿಂದ ಒಲಿಸಿಕೊಂಡು ಅನ್ನಪುರ್ಣೆಶ್ವರಿಯು ಸದಾ ಕಾಲ ನೆಲೆಸುವಂತೆ ವರ ಪಡೆದು ನಂತರ ಲೋಕಸಂಚಾರ ಮಾಡಿ ದಬ್ಬೇಘಟ್ಟದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಮಾರಿಯನ್ನು ಹೋಡಿಸಿ ತಮ್ಮಡಿಹಳ್ಳಿ ಬೆಟ್ಟದ ಪರ್ವತ ಮಲ್ಲಿಕಾರ್ಜುನ ದರ್ಶನ ಮಾಡಿ ಕುಪ್ಪೂರಿನ ಕೆರೆ ಏರಿ ಹಿಂದೆ ಮೂಲ ನಂದಿಯ ಸನ್ನಿದಾನದಲ್ಲಿ ಜೀವ ಸಮಾದಿಯಾದುರು.
ತಾಲ್ಲೂಕಿನ ಅಂದಿನ ಕಾಲದ ತಾಹಾಶೀಲ್ದಾರ್ ಹೈದರ್ಖಾನ್ ಎಂಬಾತ ತನಗೆ ಸಂತಾನ ಫಲವನ್ನು ಮರುಳಸಿದ್ದರ ಅನುಗ್ರಹದಿಂದ ಪಡೆದಿದ್ದನ್ನು. ಆಸಂತೋಷದಲ್ಲಿ ಮರುಳ ಸಿದ್ದರಿಗೆ ಕೃತಜ್ಞತೆಯನ್ನು ಸಲ್ಲಿಸಲು ಕುಪ್ಪೂರಿನ ಕಡೆ ಮರಳಸಿದ್ದರು ಇರುವುದನ್ನು ತಿಳಿದು ಬರುವಾಗ ಕುಪ್ಪೂರಿನ ಕೆರೆ ಏರಿಮೇಲೆ ಮರುಳಸಿದ್ದರು ತುಂಬೆ ಹೂವನ್ನು ಬಿಡಿಸುತ್ತಿದ್ದು ದನ್ನು ಕಂಡು ದನ್ಯನಾಗಿ ತಾನು ತಂದಿದ್ದ ಕಾಣಿಕೆಯನ್ನು ನೀಡಿ ನಮಸ್ಕರಿಸಿ ಮುಂದೆ ಸಾಗಿ ನೋಡಿದಾಗ ಅಲ್ಲಿ ಜನರು ಗದ್ದಿಗೆಯ ಮುಂದೆ ಭಜನೆ ಮಾಡವುದನ್ನು ಕಂಡು ಈ ಗದ್ದುಗೆ ಯಾರದ್ದು ಎಂದು ಕೇಳಿದಾಗ ಮರುಳಸಿದ್ದರ ಜೀವಸಮಾದಿ ಎಂದು ಭಕ್ತರು ಹೇಳುತ್ತಾರೆ.
ಹೈದರ್ ಖಾನ್ ಆಶ್ಚರ್ಯಚಕಿತನಾಗಿ ಅದು ಹೇಗೆ ಸಾದ್ಯ ಮರಳಸಿದ್ದರನ್ನು ನಾನು ಈಗ ತಾನೆ ಏರಿಮೇಲೆ ಕಂಡು ಮಾತನಾಡಿಸಿ ಬಂದಿದ್ದೇನೆ ಎಂದು ಹೇಳಿದನು. ಆದರೆ ಮರುಳಸಿದ್ದರು ಜೀವಸಮಾದಿಯಾಗಿ ಮೂರುದಿನವಾಗಿದೆ ಎಂದು ಅಲ್ಲಿದ್ದ ಭಕ್ತರು ಹೆಳಿದಾಗ ಈ ನಿಜ ಪವಾಡವನ್ನು ಕಂಡ ಹೈದರ್ಖಾನ್ ಮರುಳಸಿದ್ದರ ಗದ್ದಿಗೆಗೆ ಗರ್ಭಗುಡಿಯನ್ನು ಕಟ್ಟಿಸಿ ಸೇವೆಯನ್ನು ಮಾಡಿದನು ಎಂಬುದಾಗಿ ದಿವಂಗತ ಸಾಹಿತಿ ಸಾ.ಶಿ.ಮರುಳಯ್ಯರವರು ರಚಿಸಿರುವ ಮರುಳಸಿದ್ದ ಪುರಾಣದಲ್ಲಿ ಉಲ್ಲೇಕವಿದೆ.
ಈಕ್ಷೇತ್ರದಲ್ಲಿ ಪ್ರತೀ ಅಮಾವಾಸ್ಯೆ ದಿವಸ ಶಿವನೊಲುಮೆಗಾಗಿ ಸತ್ ಚಿಂತನೆ ಧಾರ್ಮಿಕ ಕಾರ್ಯಕ್ರಮವು ಹಿರಿಯ ಶ್ರೀಗಳಾದ ಚಂದ್ರಶಶೇಖರ ಶಿವಾಚಾರ್ಯರು ನೆಡೆಸಿಕೊಂಡು ಬಂದಿದ್ದರು ಅವರ ಕಾಲಾನಂತರ ಲಿಂಗೈಕ್ಯ ಡಾ.ಯತಿಶ್ವರಶಿವಾಚಾರ್ಯರು ಮುನ್ನಡಿಸಿದರು. ಗದ್ದಿಗೆ ಮಠವು ವೀರಶೈವ ಮಠವಾದರೂ ಎಲ್ಲಾ ಜನಾಂಗದ ಭಕ್ತರನ್ನು ಒಳಗೊಡಿದೆ. ಡಾ. ಯತೀಶ್ವರರು ತಮ್ಮ ಕ್ರಿಯಾ ಶೀಲತೆಯಿಂದ ರಾಜ್ಯದ ವಿವಿಧ ಪ್ರದೇಶದ ಭಕ್ತರನ್ನು ಆಕರ್ಶಿಸಿ ಮಠದ ಅಭಿವೃದ್ದಿಗೆ ದುಡಿದರು ಆದರೆ ವಿಧಿಯ ಆಟಕ್ಕೆ ಶ್ರೀಗಳು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದು ಮಠಕ್ಕೆ ಮತ್ತು ಭಕ್ತ ಸಮೂಹಕ್ಕೆ ಹಾಗು ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿರುವುದು ಸತ್ಯದ ಮಾತಾಗಿದೆ.
ತಾಲ್ಲೂಕಿನ ಪ್ರಸಿದ್ದ ಕುಪ್ಪೂರು ಗದ್ದಿಗೆ ಮಠದಲ್ಲಿ ಡಿ೭ರಂದು ಹರಗುರು ಚರಮೂರ್ತಿಗಳ ಸಮ್ಮಖದಲ್ಲಿ ಧ್ವಜರೋಹಣ ನೆರವೇರಿತು.ಡಿ೮ರಂದು ಬೆಳಿಗ್ಗೆ ಮರುಳಸಿದ್ದೇಶ್ವರ ಸ್ವಾಮಿಯ ಮಹಾಲಿಂಗಕ್ಕೆ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಹಾಗು ಮಹಾಮಂಗಳಾರತಿ ನೆಡಿಯಿತು. ಬೆಳಿಗ್ಗೆ ೧೧ಗಂಟೆಗೆ ಅಲಂಕೃತ ಗೊಂಡ ದೇವರ ಬಸವದೊಂದಿಗೆ ಮರುಳಸಿದ್ದೆಶ್ವರಸ್ವಾಮಿಯ ಬೆಳ್ಳಿ ಅಡ್ಡಪಲ್ಲಕ್ಕಿ ಉತ್ಸವವು ನೆಡೆಯಿತು.ಮಹಾದಾಸೋಹದ ಅನ್ನದ ರಾಶಿಗೆ ಬಸವ ಪಾದ ಸ್ಪರ್ಶ ಮಾಡಿದ ಬಳಿಕ ಭಕ್ತರಿಗೆ ದಾಸೋಹ ನೆಡೆಯಿತು.
ಜಾತ್ರೆಯಲ್ಲಿ ಜಾನ ಪದ ಕಲಾ ತಂಡಗಳು ಪ್ರದರ್ಶನಗೊಂಡವು. ಮಠದ ಉತ್ತರಾಧಿಕಾರಿ ಶ್ರೀ ತೇಜಸ್ ದೇವರು,ಮಠದ ಎಜೆಂಟ್ ವಾಗೀಶ್ ಪಂಡಿತಾರಾದ್ಯರು ಹಾಗು ಅನೇಕ ವಿವಿದ ಮಠಾಧೀಶರರು ಜಾತ್ರೆಯಲ್ಲಿ ಇದ್ದರು.