Sunday, 15th December 2024

ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್

ಮಂಗಳೂರು : ನಗರದಲ್ಲಿ ಭಾನುವಾರ ಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿ ಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.

15ಕ್ಕೂ ಅಧಿಕ ಪ್ರಕರಣಗಳ ಆರೋಪಿ ಮುಕ್ತಾರ್, ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪರಾರಿ ಯಾಗಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ.

ರೌಡಿಶೀಟರ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಸದ್ಯ ಬಂಧಿಸಿದ್ದ ಪೊಲೀಸರು ಪ್ರಕರಣವೊಂದರ ಮಹಜರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ.