ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ ವಾರ್ಷಿಕ ಫ್ಲ್ಯಾಗ್ ಶಿಪ್ ಕಾರ್ಯಕ್ರಮವಾದ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) 22024 ರ ದಿನಾಂಕಗಳನ್ನು ಘೋಷಣೆ ಮಾಡಿದೆ. ಈ ಶಾಪಿಂಗ್ ಉತ್ಸವವು ಸೆ.27ರಂದು ಆರಂಭವಾಗಲಿದ್ದು, ಅಕ್ಟೋಬರ್ 4 ರವರೆಗೆ ನಡೆಯಲಿದೆ.
ಫ್ಲಿಪ್ ಕಾರ್ಟ್ ಪ್ಲಸ್ ಮತ್ತು ವಿಐಪಿ ಸದಸ್ಯತ್ವ ಹೊಂದಿರುವ ಗ್ರಾಹಕರು ಒಂದು ದಿನ ಮೊದಲೇ ಶಾಪಿಂಗ್ ಉತ್ಸವದ ಸೌಲಭ್ಯ ಪಡೆಯಬಹುದಾಗಿದೆ. ಇಡೀ ದೇಶ ಹಬ್ಬದ ಸೀಸನ್ ಗೆ ಸಜ್ಜುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ದಿ ಬಿಗ್ ಬಿಲಿಯನ್ ಡೇಸ್ 2024 ಗ್ರಾಹಕರಿಗೆ ಅತ್ಯುತ್ತಮ ಡೀಲ್ ಗಳು ಮತ್ತು ಅತ್ಯಾಕರ್ಷಕವಾದ ಉತ್ಪನ್ನಗಳ ಆಯ್ಕೆಗಳನ್ನು ಒದಗಿಸಲಿದೆ. ಹಬ್ಬದ ಸಿದ್ಧತೆಗಳ ಪೂರ್ವಭಾವಿಯ ಭಾಗವಾಗಿ ದೇಶಾದ್ಯಂತ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ 11 ಹೊಸ ಫುಲ್ ಫಿಲ್ಮೆಂಟ್ ಸೆಂಟರ್ ಗಳನ್ನು (FCs) ಗಳನ್ನು ಆರಂಭಿಸಿದೆ. ಈ ಮೂಲಕ ಫುಲ್ ಫಿಲ್ಮೆಂಟ್ ಸೆಂಟರ್ ಗಳ ಸಂಖ್ಯೆಯನ್ನು 83 ಕ್ಕೆ ಹೆಚ್ಚಿಸಿಕೊಂಡಿದೆ. ಈ ಹೊಸ ಸೆಂಟರ್ ಗಳ ಆರಂಭದಿಂದಾಗಿ ಫ್ಲಿಪ್ ಕಾರ್ಟ್ ನ ಸಪ್ಲೈ ಚೈನ್ ಮೂಲಕ ಪ್ಯಾನ್ ಇಂಡಿಯಾದ್ಯಂತ ನೇರವಾಗಿ 1 ಲಕ್ಷಕ್ಕೂ ಅಧಿಕು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಫ್ಲಿಪ್ ಕಾರ್ಟ್ ನ ಸಾಮಾಜಿಕ-ಆರ್ಥಿಕ ಬೆಳವಣಿಗೆ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಈ ಬದ್ಧತೆಗೆ ಅನುಗುಣವಾಗಿ ಸಂಸ್ಥೆಯು ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯತ್ತ ತನ್ನ ಗಮನ ಹರಿಸಿದೆ.
ಫ್ಲಿಪ್ ಕಾರ್ಟ್ ಇ-ಕಾಮರ್ಸ್ ನಲ್ಲಿ ಹೊಸ ಹೊಸ ಮಾನದಂಡಗಳನ್ನು ಅನುಸರಿಸುವ ಮೂಲಕ ಹಬ್ಬದ ಸೀಸನ್ ನಲ್ಲಿ ಭಾರತವು ಆನ್ ಲೈನ್ ಶಾಪಿಂಗ್ ಮಾಡುವ ವಿಧಾನವನ್ನು ಮಾರ್ಪಡಿಸುವುದಲ್ಲದೇ, ಎಲ್ಲಾ ಪಾಲುದಾರರ ವ್ಯಾಪಕ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಿದೆ.
11 ದಿ ಬಿಗ್ ಬಿಲಿಯನ್ ಡೇಸ್ ಆಚರಣೆ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣ ಮೂರ್ತಿ ಅವರು, “ಬಿಗ್ ಬಿಲಿಯನ್ ಡೇಸ್ ಎನ್ನುವುದು ಫ್ಲಿಪ್ ಕಾರ್ಟ್ ನಲ್ಲಿ ಕೇವಲ ಶಾಪಿಂಗ್ ಕಾರ್ಯಕ್ರಮವಲ್ಲ, ಇದು ಡಿಜಿಟಲ್ ವಾಣಿಜ್ಯದ ಪಾಲುದಾರರ ಸಂಪೂರ್ಣವಾದ ಪರಿಸರ ವ್ಯವಸ್ಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬುದರ ಸಂಕೇತವಾಗಿದೆ. ಅಂದರೆ, ಡಿಜಿಟಲ್ ವಾಣಿಜ್ಯದ ಉನ್ನತಿಗೆ ಸಹಕಾರಿಯಾಗಿದೆ.
ಮಾರಾಟಗಾರರು, ಎಂಎಸ್ಎಂಇಗಳು, ಡಿ2ಸಿ ಬ್ರ್ಯಾಂಡ್ ಗಳು ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳಿಗೆ ಡಿಜಿಟಲ್ ವಾಣಿಜ್ಯೀಕರಣದ ವೇದಿಕೆಯನ್ನು ಕಲ್ಪಿಸುತ್ತದೆ. ಭಾರತದ ಹಬ್ಬದ ಸೀಸನ್ ಆರಂಭವಾಗುತ್ತಿರುವಂತೆಯೇ ನಾವು ಇಡೀ ದೇಶಕ್ಕೆ ಮೌಲ್ಯವನ್ನು ತಂದುಕೊಡುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಹೊಂದಿದ್ದೇವೆ. ಕೈಗೆಟುಕುವ ದರವನ್ನು ಬಯಸುವ ಗ್ರಾಹಕರಿಗೆ ಮಾರಾಟಗಾರರು ಮತ್ತು ಸ್ಥಳೀಯ ಉತ್ಪಾದಕರು ತಮ್ಮ ವ್ಯಾಪ್ತಿಯನ್ನು ಮೀರಿ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಿದ್ದಾರೆ. ಈ ವರ್ಷದ ದಿ ಬಿಗ್ ಬಿಲಿಯನ್ ಡೇಸ್ ಮತ್ತೊಮ್ಮೆ ಇಂತಹಜ ಒಳಗೊಳ್ಳುವಿಕೆ, ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೋರ್ಡ್ ನಲ್ಲಿ ಚಾಲನೆ ಮಾಡುವ ಮೂಲಕ ಇ-ಕಾಮರ್ಸ್ ನ ಸಾಧ್ಯತೆಗಳನ್ನು ಮರು ವ್ಯಾಖ್ಯಾನಿಸುತ್ತದೆ. ಡಿಜಿಟಲ್ ಆರ್ಥಿಕತೆಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ನಮ್ಮ ದೃಷ್ಟಿ ಅಚಲವಾಗಿದೆ’’ ಎಂದು ತಿಳಿಸಿದರು.
ನವೀನ ತಾಂತ್ರಿಕ ಇನ್ನೋವೇಶನ್ ಗಳೊಂದಿಗೆ ಭವಿಷ್ಯದ ಶಾಪಿಂಗ್ ಅನುಭವ
· ವಿಡಿಯೋ ಕಾಮರ್ಸ್: ಈ ಟಿಬಿಬಿಡಿ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಹಲವಾರು ಹೊಸ ವಿಡಿಯೋ ಕಾಮರ್ಸ್ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದು ಹಬ್ಬದ ಸೀಸನ್ ಅನ್ನು ಇನ್ನಷ್ಟು ಆಕರ್ಷಕ ಮತ್ತು ವಿಶೇಷ ವಾಗಿಸುತ್ತದೆ. ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರು ಈ ವರ್ಷ ಲೈವ್ ಕಾಮರ್ಸ್ ನೊಂದಿಗೆ ತಮ್ಮ ಅತ್ಯುತ್ತಮ ಕೊಡುಗೆಗಳನ್ನು ನೀಡಲಿದ್ದಾರೆ.
· ಫ್ಲಿಪ್ಪಿ 2.0: ಇದು ಜನರೇಶನ್ ಎಐ ಚಾಲಿತ ಚಾಟ್ ಸಹಾಯಕವಾಗಿದೆ. ಗ್ರಾಹಕರು ತಮ್ಮಲ್ಲಿರುವ ಯಾವುದೇ ಶಾಪಿಂಗ್ ಸಂಬಂಧಿತ ಪ್ರಶ್ನೆಗಳಿಗೆ ಅಡೆತಡೆ ಇಲ್ಲದೇ ಸಂವಾದಾತ್ಮಕವಾದ ರೀತಿಯಲ್ಲಿ ಉತ್ತರಗಳನ್ನು ಪಡೆದು ಕೊಳ್ಳಲು ಇದು ನೆರವಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಸೇರಿರುವ ಜನಪ್ರಿಯ ಪ್ರಶ್ನೆಗಳೆಂದರೆ: “ನನಗೆ ಸರಿಯಾದ ಉತ್ಪನ್ನ ಯಾವುದು?’’, “ಈ ಗ್ಯಾಜೆಟ್ ನ ಕಾರ್ಯಕ್ಷಮತೆಯ ಅಂಶಗಳನ್ನು ತಿಳಿಸಿ’’ ಮತ್ತು “ನನ್ನ ಬಜೆಟ್ ಗೆ ಉತ್ತಮವಾದ ಡೀಲ್ ಯಾವುದು’’ ಎಂಬಿತ್ಯಾದಿ.
· ತಲ್ಲೀನಗೊಳಿಸುವ ಶಾಪಿಂಗ್: ತಿಳುವಳಿಕೆಯುಳ್ಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಉತ್ಪನ್ನಗಳನ್ನು ದೃಶ್ಯೀಕರಿಸಲು ಬಳಕೆದಾರರಿಗೆ ಸಹಾಯ ಮಾಡುವ ಅನುಭವಗಳು:
– ಜನರೇಶನ್ ಎಐ ಸಕ್ರಿಯಗೊಳಿಸಿದ 3ಡಿ ಉತ್ಪನ್ನ ವಿವರಣೆ ವಿಡಿಯೋಗಳು- ಉತ್ಪನ್ನಗಳ 3ಡಿ ದೃಶ್ಯೀಕರಣದೊಂದಿಗೆ ವಿಡಿಯೋಗಳು ಮತ್ತು ವರ್ಧಿತ ಉತ್ಪನ್ನ ತಿಳುವಳಿಕೆಗಾಗಿ ಧ್ವನಿಮುದ್ರಿಕೆಗಳೊಂದಿಗೆ ಅದರ ವೈಶಿಷ್ಟ್ಯತೆಗಳನ್ನು ತಿಳಿಸಲಿದೆ.
– ಕೈಗಡಿಯಾರಗಳನ್ನು ಖರೀದಿಸುವ ಮುನ್ನ ನೀವು ಪ್ರಯತ್ನಿಸಿ- ಬಳಕೆದಾರರು ತಮ್ಮ ಖರೀದಿಯ ವಿಶ್ವಾಸವನ್ನು ಹೆಚ್ಚಿಸಲು ತಮ್ಮ ಕೈಗಡಿಯಾರಗಳನ್ನು ಪ್ರಯತ್ನಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗುತ್ತದೆ.
· ಗ್ಯಾಮಿಫೈಡ್ ಎಂಗೇಜ್ಮೆಂಟ್ ಮತ್ತು ರಿವಾರ್ಡ್ ವಿತರಣೆ (ಫೈರ್ ಡ್ರಾಪ್ಸ್ ಮೂಲಕ –ಫ್ಲಿಪ್ ಕಾರ್ಟ್ ನ ಬ್ರ್ಯಾಂಡ್- ಮೊದಲ ಪಾಲ್ಗೊಳ್ಳುವಿಕೆ ಮತ್ತು ಲಾಯಲ್ಟಿ ಪ್ಲಾಟ್ ಫಾರ್ಮ್)
– ಗ್ಯಾಮಿಫೈಯಿಂಗ್ ಮೂಲಕ ಫ್ಲಿಪ್ ಕಾರ್ಟ್ ನ ಯುಪಿಐ ಅಳವಡಿಕೆ ಪ್ರಮಾಣ ಬೆಳವಣಿಗೆ ಹೊಂದುತ್ತಿದೆ- ಫೈರ್ ಡ್ರಾಪ್ಸ್ ಮೂಲಕ ಅಭಿವೃದ್ಧಿಪಡಿಸಲಾಗಿರುವ ಗ್ಯಾಮಿಫಿಕೇಶನ್ ಮಾದರಿ; ಫ್ಲಿಪ್ ಕಾರ್ಟ್ ನ ಬ್ರ್ಯಾಂಡ್-ಫಸ್ಟ್ ಎಂಗೇಜ್ಮೆಂಟ್ ಮತ್ತು ಲಾಯಲ್ಟಿ ಪ್ಲಾಟ್ ಫಾರ್ಮ್, ಇದರ ಮೂಲಕ ಗ್ರಾಹಕರು ಫ್ಲಿಪ್ ಕಾರ್ಟ್ ಯುಪಿಐಗೆ ಸಂಬಂಧಿಸಿದ ಸರಳ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಸೂಪರ್ ಕಾಯಿನ್ ಗಳನ್ನು ಗಳಿಸಬಹುದಾಗಿದೆ.
– ವಿದ್ಯಾರ್ಥಿಗಳ ಪಾಸ್- ಪರಿಶೀಲಿಸಿದ ವಿದ್ಯಾರ್ಥಿ ಪ್ರೊಫೈಲ್ ಗಳು ವಿಶೇಷ ಸೂಪರ್ ಕಾಯಿನ್ ಗಳ ಕೊಡುಗೆಗಳು ಮತ್ತು ಬಹುಮಾನಗಳಿಗೆ ಪ್ರವೇಶವನ್ನು ಹೊಂದಿರುತ್ತವೆ.
ಎಲ್ಲಾ ಗ್ರಾಹಕರಿಗೆ ಲಭ್ಯವಾಗುವುದನ್ನು ಖಚಿತಪಡಿಸಲು ಮಾರಾಟಗಾರರ ಜಾಲದ ವಿಸ್ತರಣೆ
· ಈ ಟಿಬಿಬಿಡಿಯಲ್ಲಿ ಹೆಚ್ಚುವರಿಯಾಗಿ ಶೇ.20 ರಷ್ಟು ಮಾರಾಟಗಾರರ ರಿವಾರ್ಡ್ಸ್ ಸಿಗಲಿವೆ ಮತ್ತು
ಹಬ್ಬದ ಸೀಸನ್ ನಲ್ಲಿ ಹೊಸ ಗ್ರಾಹಕರ ನೆಲೆಯನ್ನು ಕಂಡುಕೊಂಡು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಮಾರಾಟಗಾರರಿಗೆ ನೆರವಾಗಲಿದೆ.
· ಉತ್ತಮ ಮೌಲ್ಯವನ್ನು ಒದಗಿಸುವುದರ ಮೇಲೆ ಗಮನಹರಿಸುವುದರ ಜೊತೆಗೆ ಹಬ್ಬದ ಶಾಪಿಂಗ್ ಸೀಸನ್ ಅನ್ನು ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಮಾರಾಟಗಾರರಿಗೆ ಬಿಗ್ ಸೇಲ್ ಆಫ್ ಸ್ಮಾಲ್ ಥಿಂಗ್ಸ್ ನೊಂದಿಗೆ ಆರಂಭವಾಗಿದೆ.
· ಟಿಬಿಬಿಡಿಯ 11 ನೇ ಆವೃತ್ತಿ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ 1.4 ಮಿಲಿಯನ್ ಉದ್ಯಮಿಗಳು ಮತ್ತು ಮಾರಾಟಗಾರರಿಗೆ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಫ್ಲಿಪ್ ಕಾರ್ಟ್ ನ ಪ್ಯಾನ್-ಇಂಡಿಯಾ ಉಪಕ್ರಮದ ಭಾಗವಾಗಿ ದೇಶಾದ್ಯಂತ ನಡೆದ ಮಾರಾಟಗಾರರ ಸಮಾವೇಶದಲ್ಲಿ 4,500 ಮಾರಾಟಗಾರರು ಪಾಲ್ಗೊಂಡಿದ್ದರು.
· ಟಿಬಿಬಿಡಿಗಿಂತ ಮುನ್ನ, ಫ್ಲಿಪ್ ಕಾರ್ಟ್ ಸಮರ್ಥ್ ತನ್ನ 5 ವರ್ಷದ ಯಶಸ್ವಿ ಪ್ರಯಾಣದಲ್ಲಿ 1.8 ಮಿಲಿಯನ್ ಜನರ ಜೀವನಮಟ್ಟ ಸುಧಾರಣೆಯಲ್ಲಿ ಧನಾತ್ಮಕವಾದ ಪರಿಣಾಮವನ್ನು ಬೀರಿದೆ. 100 ಕ್ಕೂ ಹೆಚ್ಚು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಸಂರಕ್ಷಣೆ ಮಾಡುತ್ತಿದ್ದು, ಸಾವಿರಾರು ಮಾರಾಟಗಾರರ ಬೆಳವಣಿಗೆಗೆ ಉತ್ತೇಜನ ನೀಡಿದೆ.
ವಿಸ್ತಾರವಾದ ವಿಭಾಗಗಳ ಉತ್ಪನ್ನಗಳ ತ್ವರಿತ ವಿತರಣೆ
· 2024 ರ ಬಿಗ್ ಬಿಲಿಯನ್ ಡೇಸ್ ಗಿಂತ ಮುನ್ನ 20+ ನಗರಗಳಲ್ಲಿ 2 ಲಕ್ಷ ಎಸ್ ಕೆಯುಗಳ ಮೂಲಕ ಒಂದೇ ದಿನದ ವಿತರಣೆಗಾಗಿ ಹಬ್ಬದ ಬೇಡಿಕೆಯನ್ನು ಪೂರೈಸಲು ಫ್ಲಿಪ್ ಕಾರ್ಟ್ ಸಿದ್ಧವಾಗಿದೆ.
· ವಿತರಣೆಯಲ್ಲಿ ಭರವಸೆ ಮತ್ತು ಸುರಕ್ಷತೆ: ಮೆಟ್ರೊ ಮತ್ತು ಮೆಟ್ರೋಯೇತರ ನಗರಗಳಲ್ಲಿ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಡೆಲಿವರಿಗಳ ಪ್ರಾಮುಖ್ಯತೆಯ ಮೇಲೆ ಹೆಚ್ಚುತ್ತಿರುವ ಗಮನದೊಂದಿಗೆ ಫ್ಲಿಪ್ ಕಾರ್ಟ್ ತನ್ನ ಲಾಜಿಸ್ಟಿಕಲ್ ಸಾಮರ್ಥ್ಯಗಳನ್ನು ಅಳವಡಿಸಿಕೊಂಡಿದೆ.
· ಈ ವರ್ಷ ಗ್ರಾಹಕರಿಗೆ ವಿಶ್ವಾಸಾರ್ಹ ಉತ್ಪನ್ನಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುಧಾರಿತ ಉತ್ಪನ್ನ ಗುಣಮಟ್ಟದ ಗಾರ್ಡ್ ರೈಲ್ ಗಳನ್ನು ಪರಿಶೀಲಿಸಲಾಗುತ್ತದೆ.
ಮೌಲ್ಯಯುತ ಮತ್ತು ಕೈಗೆಟುಕುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಅನುಭವಗಳನ್ನು ತಲುಪಿಸುವುದು
· ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು ಮತ್ತು ಇಎಂಐ ವಹಿವಾಟುಗಳ ಮೇಲೆ ಗ್ರಾಹಕರಿಗೆ ಶೇ.10 ರಷ್ಟು ರಿಯಾಯ್ತಿ ನೀಡಲು ಫ್ಲಿಪ್ ಕಾರ್ಟ್ ಎಚ್ ಡಿಎಫ್ ಸಿ ಬ್ಯಾಂಕ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
· ಅದೇ ರೀತಿ, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶೇ.5 ರಷ್ಟು ಅನಿಮಿಯತಿ ಕ್ಯಾಶ್ ಬ್ಯಾಕ್ ಅನ್ನು ಸಹ ನೀಡುತ್ತದೆ ಮತ್ತು ಗ್ರಾಹಕರು ಫ್ಲಿಪ್ ಕಾರ್ಟ್ ನ ಪೇ ಲೇಟರ್ ನೊಂದಿಗೆ ತ್ವರಿತ ಕ್ರೆಡಿಟ್ ಮತ್ತು ನೋ ಕಾಸ್ಟ್ ಇಎಂಐಗಳನ್ನು ಪಡೆಯಬಹುದಾಗಿದೆ. (ಷರತ್ತು ಮತ್ತು ನಿಬಂಧನೆಗಳು ಅನ್ವಯ).
· ಫ್ಲಿಪ್ ಕಾರ್ಟ್ ಯುಪಿಐ ಬಳಕೆ ಮಾಡುವ ಗ್ರಾಹಕರಿಗೆ ಪ್ರತಿದಿನ ಖಚಿತವಾದ ಕ್ಯಾಶ್ ಬ್ಯಾಕ್ ಲಭ್ಯವಿದೆ.
ಅನನ್ಯವಾದ ಪ್ರತಿಪಳಗಳು ಮತ್ತು ಕೊಡುಗೆಗಳೊಂದಿಗೆ ಪರಿಸರ ವ್ಯವಸ್ಥೆಯ ಪ್ರಯೋಜನಗಳನ್ನು ಅನ್ಲಾಕ್ ಮಾಡುವುದು
· ಫ್ಲಿಪ್ ಕಾರ್ಟ್ ಪ್ಲಸ್ ಮತ್ತು ವಿಐಪಿ ಲಾಯಲ್ಟಿ ಪರಿಸರ ಪ್ರೋಗ್ರಾಮ್ ನ ಸದಸ್ಯರು ಬಿಗ್ ಬಿಲಿಯನ್ ಡೇಸ್ ಆರಂಭವಾಗುವ ಒಂದು ದಿನ ಮೊದಲೇ ಶಾಪಿಂಗ್ ಅವಕಾಶವನ್ನು ಪಡೆಯಲಿದ್ದಾರೆ. ಈ ವಿಶೇಷ ಸೌಲಭ್ಯವು ಗ್ರಾಹಕರು ತಮ್ಮ ನೆಚ್ಚಿನ ಉತ್ಪನ್ನಗಳನ್ನು ಶಾಪಿಂಗ್ ಮಾಡಲು ಮತ್ತು ಸಾಮಾನ್ಯ ಸಾರ್ವಜನಿಕರಿಗಿಂತ 24 ಗಂಟೆಗಳ ಮುನ್ನವೇ ಡೀಲ್ ಗಳಿಗೆ ಪ್ರವೇಶವನ್ನು ಪಡೆಯಲು ಅನುಮತಿ ನೀಡುತ್ತದೆ.
· ಇದಲ್ಲದೇ, ಆರಂಭಿಕ ಪ್ರವೇಶದ ದಿನದಂದು ಪ್ರತಿ ನಿಮಿಷಕ್ಕೆ ಖರೀದಿಯನ್ನು ಪೂರ್ಣಗೊಳಿಸುವ ಮೊದಲ ಪ್ಲಸ್ ಅಥವಾ ವಿಐಪಿ ಸದಸ್ಯರು ತಮ್ಮ ಸಂಪೂರ್ಣ ಕಾರ್ಟ್ ಮೌಲ್ಯವನ್ನು 10,000 ರೂಪಾಯಿವರೆಗೆ ವಾಪಸ್ ಪಡೆಯಲು ಅರ್ಹರಾಗಿರುತ್ತಾರೆ. ಈ ಮೂಲಕ ಶಾಪಿಂಗ್ ಕುತೂಹಲದ ಉತ್ಸಾಹ ಮತ್ತು ಹೆಚ್ಚುವರಿ ಉಳಿತಾಯವನ್ನು ಹೊಂದಲಿದ್ದಾರೆ. (ಷರತ್ತು ಮತ್ತು ನಿಬಂಧನೆಗಳು ಅನ್ವಯ).
· ವಿಐಪಿ ಸದಸ್ಯರು ಉನ್ನತ ಬ್ರ್ಯಾಂಡ್ ಗಳಿಂದ ವಿಶೇಷ ಡೀಲ್ ಗಳನ್ನು ಸಹ ಸ್ವೀಕರಿಸುತ್ತಾರೆ ಮತ್ತು ಸೂಪರ್ ಕಾಯಿನ್ ರಿಡೆಂಪ್ಶನ್ ಮೂಲಕ 1,000 ರೂಪಾಯಿವರೆಗಿನ ಹೆಚ್ಚುವರಿ ಡೀಲ್ ಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.
ಪ್ರತಿ ಗ್ರಾಹಕರಿಗಾಗಿ ಉತ್ಪನ್ನಗಳ ಅತ್ಯಂತ ಸಂಬಂಧಿತ ಆಯ್ಕೆ
· ಗ್ರಾಹಕರು ಪ್ರೀಮಿಯಂ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್, ಅಂತಾರಾಷ್ಟ್ರೀಯ ಫ್ಯಾಷನ್ ಮತ್ತು ಸೌಂದರ್ಯ ಬ್ರ್ಯಾಂಡ್ ಗಳ ಮೇಲೆ ಉತ್ತಮ ಡೀಲ್ ಗಳನ್ನು ನಿರೀಕ್ಷಿಸಬಹುದು.
· ಬ್ರ್ಯಾಂಡ್ ಮಾಲ್ ಅನುಭವವು ಎಲ್ಲಾ ಬ್ರ್ಯಾಂಡ್ ಪ್ರೀತಿಯ ಗ್ರಾಹಕರಿಗೆ ರಾಷ್ಟ್ರೀಯ ಮತ್ತು
ಉದಯೋನ್ಮುಖ ಬ್ರ್ಯಾಂಡ್ ಗಳ ಕ್ಯುರೇಟೆಡ್ ಆಯ್ಕೆಯನ್ನು ಹೊಸ ಅವತಾರದಲ್ಲಿ ಪ್ರಸ್ತುತಪಡಿಸುತ್ತದೆ.
· ಮೌಲ್ಯದ ಶಾಪರ್ ಗಳು ಫ್ಯಾಷನ್, ಎಲೆಕ್ಟ್ರಾನಿಕ್ಸ್, ಮನೆಯ ಅಗತ್ಯ ವಸ್ತುಗಳು ಮತ್ತು ಅಲಂಕಾರಿಕ ಉತ್ಪನ್ನಗಳು, ಪುಸ್ತಕಗಳು ಹಾಗೂ ಮಗುವಿನ ಉತ್ಪನ್ನಗಳಾದ್ಯಂತ ಕೈಗೆಟುಕುವ ದರದಲ್ಲಿನ ಉತ್ಪನ್ನಗಳ ಆಯ್ಕೆಯನ್ನೂ ಕಾಣಬಹುದಾಗಿದೆ.
· ಫ್ಲಿಪ್ ಕಾರ್ಟ್ ಹೋಲ್ ಸೇಲ್ ತನ್ನ ಕಿರಾಣ ಅಂಗಡಿಗಳ ಸದಸ್ಯರಿಗೆ ಅನನ್ಯವಾದ ಕೊಡುಗೆಗಳನ್ನು ನೀಡುತ್ತದೆ ಮತ್ತು ಅದರ ಕಾರ್ಯಾಚರಣೆಗಳು, ಮೌಲ್ಯದ ಪ್ರತಿಪಾದನೆಗಳನ್ನು ಬಲಪಡಿಸಲು ಹೆಚ್ಚು ಆದ್ಯತೆ ನೀಡುತ್ತದೆ.
ಈ ವರ್ಷದ ಪ್ರಯಾಣ ಯೋಜನೆಗಳು ಇನ್ನಷ್ಟು ಸುಲಭವಾಗಲಿವೆ
· ಟಿಬಿಬಿಡಿಗಾಗಿ ಕ್ಲಿಯರ್ ಟ್ರಿಪ್ ನ ಡೀಲ್ ಗಳು ಹಬ್ಬದ ಸೀಸನ್ ಮತ್ತು ವರ್ಷಾಂತ್ಯದ ಸೀಸನ್ ಗಳಲ್ಲಿ ಬೆಲೆ ಏರಿಕೆಯನ್ನು ತಪ್ಪಿಸಲು ಗ್ರಾಹಕರು ತಮ್ಮ ಹಬ್ಬದ ಮತ್ತು ವರ್ಷಾಂತ್ಯದ ಪ್ರಯಾಣವನ್ನು ಕಾಯ್ದಿರಿಸಲು ಒಂದು ಉತ್ತಮ ಪ್ಲಾಟ್ ಫಾರ್ಮ್ ಆಗಿದೆ. 2,499 ರೂಪಾಯಿಗಳಿಂದ ಆರಂಭವಾಗುವ ವಿಶೇಷವಾದ ಬೆಲೆಗಳಲ್ಲಿ ಗ್ರಾಹಕರು 5 ಸ್ಟಾರ್ ಹೊಟೇಲ್ ಗಳನ್ನು ಬುಕ್ ಮಾಡಬಹುದಾಗಿದೆ. ಅದೇ ರೀತಿ, 5,999 ರೂಪಾಯಿಗಳಿಂದ ಆರಂಭವಾಗುವ ಅಂತಾರಾಷ್ಟ್ರೀಯ ಸ್ಥಳಗಳಿಗೆ ಮತ್ತು ದೇಶದ ವಿವಿಧ ಸ್ಥಳಗಳಿಗೆ ಕೇವಲ 999 ರೂಪಾಯಿಯ ವಿಶೇಷ ದರಗಳನ್ನು ನೀಡುತ್ತಿದೆ.
· ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾ ಬಳಕೆದಾರರು ಹೊಟೇಲ್ ಗಳಲ್ಲಿ ಶೇ.15 ರಷ್ಟು ಉಳಿತಾಯದ ಜೊತೆಗೆ ಹೆಚ್ಚುವರಿ ಡೀಲ್ ಗಳನ್ನು ಪಡೆಯಬಹುದಾಗಿದೆ. ಕೇವಲ 1 ರೂಪಾಯಿಯಲ್ಲಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಿ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಲು ಸೂಪರ್ ಕಾಯಿನ್ ಗಳನ್ನು ಬಳಸಬಹುದಾಗಿದೆ.
ಶಾಪ್ಸಿ ಬಜಾರ್ ಗಳೊಂದಿಗೆ ಎಲ್ಲರಿಗೂ ಮೌಲ್ಯ
· ಶಾಪ್ಸಿಯು ಭಾರತದಾದ್ಯಂತ ಸ್ಥಳೀಯ ಬಜಾರ್ ಗಳ ರೋಮಾಂಚಕ ಅನುಭವವನ್ನು ತರುತ್ತದೆ. ಗ್ರಾಹಕರಿಗೆ ಉತ್ತಮ ಡೀಲ್ ಗಳೊಂದಿಗೆ 160 ಮಿಲಿಯನ್ ಉತ್ಪನ್ನಗಳಿಗೆ ಪ್ರವೇಶವನ್ನು ಕಲ್ಪಿಸುತ್ತದೆ.
· ಗ್ರಾಹಕರು ಫ್ಯಾಷನ್, ಸೌಂದರ್ಯ, ಮನೆ, ಎಲೆಕ್ಟ್ರಾನಿಕ್ಸ್ ಮತ್ತು ಇನ್ನೂ ಹೆಚ್ಚಿನ ವಿಭಾಗಗಳಾದ್ಯಂತ ಅಸಾಮಾನ್ಯ ಉಳಿತಾಯವನ್ನು ಪ್ರವೇಶಿಸಬಹುದಾಗಿದೆ. ಮೊದಲ ಬಾರಿಯ ಬಳಕೆದಾರರಿಗೆ ವಿಶೇಷ ಉಳಿತಾಯ ಸೌಲಭ್ಯವೂ ದೊರೆಯಲಿದೆ.