ತುಮಕೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಪೋಷಕರ ಪಾತ್ರ ಬಹಳ ಮುಖ್ಯವಾದುದೆಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪ್ರಿಯಾಪ್ರದೀಪ್ ತಿಳಿಸಿದರು.
ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರ ದಲ್ಲಿ ಹಮ್ಮಿಕೊಂಡಿದ್ದ ಹ್ಯಾಪಿ ಪೇರೆಂಟಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯ ಚೆನ್ನಾಗಿದ್ದರೆ ಪೋಷಕರ ಭವಿಷ್ಯ ಚೆನ್ನಾಗಿರುತ್ತದೆ. ಪ್ರತಿನಿತ್ಯದ ಬದುಕಿನಲ್ಲಿ ಪೋಷಕರಿಗೂ ಸಾಕಷ್ಟು ಒತ್ತಡಗಳಿರುತ್ತವೆ. ಮಕ್ಕಳಿಗಾಗಿಯೇ ದುಡಿಮೆ ಯಲ್ಲಿ ತೊಡಗಿಸಿಕೊಂಡರೂ ಅದರ ನಡುವೆ ಕೆಲ ಸಮಯವನ್ನು ಮಕ್ಕಳೊಂದಿಗೆ ಕಳೆದರೆ ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಇಂತಹ ನೆನಪುಗಳು ಸಾಕಷ್ಟು ಕಾಲ ಉಳಿಯುತ್ತವೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಾಜ್ಯಮಟ್ಟದ 10ನೇ ರ‍್ಯಾಂಕ್ ಹಾಗೂ ಸಿಇಟಿಯಲ್ಲಿ 1858ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಅಮೋಘ್ ಎನ್.ಭಾರದ್ವಾಜ್‌ರವರವನ್ನು ಗೌರವಿಸಲಾಯಿತು. ಹಾಗೆಯೇ ವಿದ್ಯಾರ್ಥಿ ಪೋಷಕರಾದ ತಂದೆ ನಾಗೇಶ್, ತಾಯಿ ಗೀತಾರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ವೀರೇಶ್‌ಬಾಬು, ಬೆಂಗಳೂರಿನ ಕೈವಲ್ಯ ಅಕಾಡೆಮಿಯ ಡಾ.ಲೋಕೇಶ್‌ಬಾಬು, ಕಾವ್ಯ, ಲಾವಣ್ಯ, ರಶ್ಮಿ, ಕನ್ನಡ ಉಪನ್ಯಾಸಕ ರಾಜಶೇಖರ ಜೆ.ಎಲ್., ನವೀನ್‌ರಾಜ್ ಸಿ.ಜಿ.ಮಹೇಶ್‌ಚಂದ್ರ ಇದ್ದರು.