Sunday, 15th December 2024

ಕೊಬ್ಬರಿ ನಾಡಲ್ಲೊಂದು ಗಾಂಧಿ ಭವನ

ತಿಪಟೂರು:  ಕಲ್ಪತರು ನಾಡಿಗೆ 1927 ಏಳನೇ ಇಸವಿಯಲ್ಲಿ ಮಹಾತ್ಮ ಗಾಂಧೀಜಿ ಅವರು ತಿಪಟೂರು ಮಾರ್ಗವಾಗಿ ಹಾಸನಕ್ಕೆ ತೆರಳುವಂತಹ ಸಂದರ್ಭದಲ್ಲಿ ನಗರದ ರೈಲ್ವೆ ಸ್ಟೇಷನ್ ಮುಂಭಾಗ ಇರುವ ಸ್ವಾತಂತ್ರ್ಯ ಹುತಾತ್ಮ ಮಾರನಗೆರೆ ಸಿದ್ದಪ್ಪನವರ ವೃತ್ತದ ಹತ್ತಿರವಿರುವ ತಾಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ನೂರಾರು ವರ್ಷಗಳ ಹಳೆಯದಾದ ಕಟ್ಟಡದಲ್ಲಿ ಗಾಂಧೀಜಿಯವರು ತಂಗಿದ್ದರಂತೆ ಎಂಬ ಪ್ರಶ್ನೆ ಬಹಳಷ್ಟು ವರ್ಷಗಳಿಂದ ಉತ್ತರ ಸಿಗದೆ ಪ್ರಶ್ನೆಯಾಗಿ ಉಳಿದಿತ್ತು.
ಇದೀಗ ತಾಲೂಕು ಪಂಚಾಯಿತಿ ಆಡಳಿತ ಹಲವಾರು ಮಾಹಿತಿಗಳನ್ನು ಕಲೆಹಾಕಿ ಹಾಗೂ ಹಲವಾರು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯ ಆಧಾರ ಮತ್ತು ದಾಖಲೆಗಳ ಮೇಲೆ ಆಧರಿಸಿ ಪಾಳುಕೊಂಪೆ ಯಂತಿದ್ದ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಣ ಮಾಡಿ ಗಾಂಧಿ ಭವನವಾಗಿ ಮಾರ್ಪಾಡು ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇದೇ ಕಟ್ಟಡದಲ್ಲಿ ಒಂದು ದಿನಗಳ ಕಾಲ ತಂದಿದ್ದು ಮರುದಿನ ತಮ್ಮ ಪ್ರಯಾಣವನ್ನು ಹಾಸನದ ಕಡೆ ಬೆಳೆಸಲಾಯಿತು ಎಂದು ಹೇಳಲಾಗುತ್ತಿದೆ. ಇದೀಗ ತಾಲೂಕು ಪಂಚಾಯಿತಿ ವತಿಯಿಂದ ಗಾಂಧಿ ಭವನವನ್ನು ಉದ್ಘಾಟಿಸಿ, ಭವನ ವೀಕ್ಷಿಸಲು ಬರುವಂತಹ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗ್ರಂಥಾಲಯ, ಚರಕ,ಗಾಂಧೀಜಿಯವರ ಜೀವನ ಚರಿತ್ರೆ ಆಧಾರಿತ ಚಿತ್ರಪಟಗಳು, ಗಾಂಧೀಜಿಯವರ ಸಂದೇಶಗಳು ನೋಡಲು ಮತ್ತು ಓದಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಮುಂದಿನ ದಿನಗಳಲ್ಲಿ ಗಾಂಧೀಜಿಯವರಿಗೆ ಸಂಬಂಧಪಟ್ಟಂತಹ ಇನ್ನು ಹಲವಾರು ವಸ್ತುಗಳನ್ನು ತಂದು ವೀಕ್ಷಕರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದೆ.
ಗಾಂಧಿ ಭವನದ ಉದ್ಘಾಟನಾ ಸಮಯದಲ್ಲಿ ಶಾಸಕ ಕೆ.ಷಡಕ್ಷರಿ, ಉಪವಿಭಾಗ ಅಧಿಕಾರಿ ಸಪ್ತಶ್ರೀ, ತಾಲೂಕು ದಂಡಾಧಿಕಾರಿ ಪವನ್ ಕುಮಾರ್, ಕಾರ್ಯನಿರ್ವಹಣಾ ಅಧಿಕಾರಿ ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಕ್ಷೇತ್ರ ಶಿಕ್ಷಣ ಅಧಿಕಾರಿ ಜಿ.ಚಂದ್ರಯ್ಯ, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.