ರಾಯಚೂರು: ಸ್ವಚ್ಛತೆ , ನೈರ್ಮಲ್ಯ , ಕಂದಾಯ ವಸೂಲಿ ಸೇರಿ ಗ್ರಾಮೀಣ ಅಭಿವೃದ್ಧಿ ಇತರ ವಲಯಗಳಲ್ಲಿ ಮಹತ್ತರ ಸಾಧನೆ ತೋರಿದ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು , ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸ ಲಾಗುತ್ತಿದೆ.
ಪುರಸ್ಕೃತ ಗ್ರಾಮ ಪಂಚಾಯಿತಿಗಳಿಗೆ ತಲಾ 5ಲಕ್ಷ ರೂಪಾಯಿ ಪ್ರೋತ್ಸಾಹ ಧನ ದೊರೆಯ ಲಿದ್ದು ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.
ಜಿಲ್ಲೆಯ 2 ತಾಲೂಕಗಳಿಂದ ತಲಾ ಒಂದು ಗ್ರಾಮ ಪಂಚಾಯಿತಿ ಅನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಬ್ಯಾಗವಾಟ , ಕಾಡ್ಲೂರು , ಲಿಂಗಸೂಗೂರು, ಚಿತ್ತಾಪುರ , ತಿಡಿಗೋಳ , ರಾಮದುರ್ಗ, ಬಾಗಲವಾಡ, ಪಾಮನಕಲ್ಲೂರು ಗ್ರಾಮ ಪಂಚಾ ಯಿತಿಗಳು 2022-23ನೇ ಸಾಲಿನ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.
ಗ್ರಾಮ ಪಂಚಾಯಿತಿಗಳು ಶಾಸನ ಬದ್ಧ ಕಾರ್ಯಗಳ ಉತ್ತಮ ನಿರ್ವಹಣೆ , ಹಣಕಾಸಿನ ನಿರ್ವಹಣೆ , 15ನೇ ಹಣಕಾಸು ಆಯೋಗ ದಡಿ ಬಿಡುಗಡೆಯಾದ ಅನುದಾನದ ಬಳಕೆ , ಜಮಾ ಬಂಧಿ , ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ , ಮೂಲ ಸೌಕರ್ಯಗಳ ವಿಭಾಗದಲ್ಲಿ ಕುಡಿಯುವ ನೀರು , ಬೀದಿ ದೀಪ , ವಸತಿ ಯೋಜನೆ , ನೈರ್ಮಲಿಕರಣ , ತ್ಯಾಜ್ಯ ನಿರ್ವಹಣೆ , ನಮ್ಮ ಗ್ರಾಮ ಯೋಜನೆ , ಯೋಜನೆಗಳ ಅನುಷ್ಠಾನ , ದಾಖಲಾತಿ ನಿರ್ವಹಣೆ , ತೆರಿಗೆ ವಸೂಲಾತಿ , ಜನಸ್ನೇಹಿ ಪಂಚಾಯಿತಿ ಆಡಳಿತ ವ್ಯವಸ್ಥೆ, ಗ್ರಾಮಸಭೆಗಳ ಆಯೋಜನೆ, ಸರಕಾರಿ ಸೇವೆಗಳ ಒದಗಿಸುವಿಕೆ ಸೇರಿ ಇತರ ಸೇವಾ ವಲಯಗಳಲ್ಲಿ ಒಟ್ಟು 300 ಅಂಕಗಳ ಪ್ರಶ್ನಾವಳಿಗೆ ತಾಲೂಕುವಾರು ದಾಖಲಾತಿ ಪರಿಶೀಲಿಸಿ ಅದರ ಆಧಾರದಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಪಂಚಾಯಿತಿ ರಾಜ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ.
ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ , ಮೂಲ ಸೌಕರ್ಯಗಳ ಅಭಿವೃದ್ಧಿ, ಆಡಳಿತದಲ್ಲಿ ಸ್ಮಧಾ ರಣೆ ಹಾಗೂ ಸ್ವಚ್ಛತೆ ಸಾಧನೆಗಾಗಿ ಕಾಡ್ಲೂರು ಗ್ರಾಮ ಪಂಚಾಯಿತಿಗೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
ಗ್ರಾಮಸಭೆ , ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು , ಅಭಿವೃದ್ಧಿ ಕಾಮಗಾರಿಗಳ ಪಾರದರ್ಶಕ , ಶೌಚಾಲಯ ಗಳ ನಿರ್ಮಾಣ ಮತ್ತು ಬಳಕೆ , ನರೇಗಾ ಯೋಜನೆಗೆ ಉತ್ತಮ ಪ್ರಗತಿ , ಕಂದಾಯ ವಸೂಲಿ , ಕುಡಿಯುವ ನೀರು ಪೂರೈಕೆ , ಡಿಜಿಟಲ್ ಗ್ರಥಾಲಯ ಕಟ್ಟಡ , ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶಾಲಾ ಮಕ್ಕಳ ವಿಜ್ಞಾನಗಳ ಸಾಮಾಗ್ರಿಗಳು ನೀಡುವಲ್ಲಿ ಸಾಧನೆ ತೋರಿರುವ್ಯದರಿಂದ ಪ್ರಶಸ್ತಿ ದೊರೆತಿದೆ.
ಗ್ರಾಮ ಪಂಚಾಯಿತಿ ಪ್ರಗತಿಯ ಆಧಾರದ ಮೇಲೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ 5 ಲಕ್ಷ ರೂಪಾಯಿ ವಿಶೇಷ ಅನುದಾನ ನೀಡಲಾಗುತ್ತದೆ. ಪುರಸ್ಕಾರದಿಂದ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇವೆ ಎಂದು ಕಾಡ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಮಹಾಂತಮ್ಮ ಹೇಳಿದರು.
ಜಿಲ್ಲೆಯ 2 ಪಂಚಾಯಿತಿಗಳಿಗೆ ಸ್ವಚ್ಛತೆ ನೈರ್ಮಲ್ಯ , ಕಂದಾಯ ವಸೂಲಿ ಸೇರಿ ಅಭಿವೃದ್ಧಿ ಇತರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಮ್ಮ ಜಿಲ್ಲೆಯ 2 ಗ್ರಾಮ ಪಂಚಾಯಿತಿಗಳಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ದೊರೆತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ತುಕಾರಾಂ ಪಾಂಡೆ ಹೇಳಿದರು.