Thursday, 12th December 2024

Ganesh Visarjan: ಗಣೇಶ ವಿಸರ್ಜನೆ : ಪಾಲಿಕೆಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣೇಶ ಮೂರ್ತಿಗಳನ್ನು ನಗರದ ಟ.ಪಿ. ಕೈಲಾಸಂ ಮುಖ್ಯರಸ್ತೆ ಗಾರೆ ನರಸಯ್ಯನ ಕಟ್ಟೆ, ವಿದ್ಯಾನಗರದ ಪಂಪ್‌ ಹೌಸ್ ಹಾಗೂ ಶಿರಾಗೇಟ್ ಬಳಿಯಿರುವ ಹೌಸಿಂಗ್ ಪಾರ್ಕ್ ಒಳಭಾಗದಲ್ಲಿ ವಿಸರ್ಜಿಸಬಹುದಾಗಿದೆ.

ನಗರದ ಬಟವಾಡಿ ಆಂಜನೇಯ ದೇವಸ್ಥಾನ, ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠ, ಮಹಾನಗರಪಾಲಿಕೆ ಕಚೇರಿ ಆವರಣ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಅಗ್ರಹಾರದ ಶಿಶುವಿಹಾರದ(7ನೇ ವಾರ್ಡ್), ಕ್ಯಾತ್ಸಂದ್ರ ಬಸ್ ನಿಲ್ದಾಣ, ಶಿರಾಗೇಟ್ ಕನಕವೃತ್ತ, ಕೆಂಪಣ್ಣ ಅಂಗಡಿ ಸರ್ಕಲ್, ಎಸ್.ಎಸ್.ಐ.ಟಿ ಸರ್ಕಲ್, ಹನುಮಂತಪುರ ಸರ್ಕಲ್, ದಿಬ್ಬೂರು ಸರ್ಕಲ್, ಮೆಳೇಕೋಟೆ ಸರ್ಕಲ್ ಬಳಿ ಸೆಪ್ಟೆಂಬರ್ 7ರ ಸಂಜೆ 4 ರಿಂದ 8 ಗಂಟೆವರೆಗೆ ಚಿಕ್ಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ನೀರಿನ ಟ್ಯಾಂಕರ್‌ಗಳನ್ನು ಹೊಂದಿರುವ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.